ರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ

WhatsApp Group Join Now
Telegram Group Join Now

ರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ

ಬೆಳಗಾವಿ:ಜಿಲ್ಲೆಯ ಪ್ರಮುಖ ರೈತ ಹಾಗೂ ಸಾಮಾಜಿಕ ಹೋರಾಟಗಾರ್ತಿ ಜಯಶ್ರೀ ಗುರವಣ್ಣವರ ನಿಧನ ಹೊಂದಿದ್ದಾರೆ.

ಅನಾರೋಗ್ಯ ನಿಮಿತ್ತ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ ಎಂದು ಕುಟುಂಬ ಮೂಲ ಸ್ಪಷ್ಟಪಡಿಸಿದೆ.

ಕಬ್ಬಿನ ಬೆಲೆ, ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಹೊಲಗಳಿಗೆ ರಸ್ತೆ, ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನ, ಕಾರ್ಮಿಕರ ಬದುಕು ಭವನೆಗಳ ಬಗೆಗೆ ಜಯಶ್ರೀ ತೀವ್ರ ಹೋರಾಟ ನಡೆಸಿ ಗಮನ ಸೆಳೆದಿದ್ದರು‌. ನಡುವಯಸ್ಸಿನಲ್ಲಿ ಜಯಶ್ರೀ ಅವರ ಸಾವು ರೈತ ಹೋರಾಟಕ್ಕೆ ಕುಂದು ತಂದಿದೆ.

WhatsApp Group Join Now
Telegram Group Join Now
Back to top button