ಮುಸ್ಲಿಮ್ ನಟನೊಂದಿಗೆ ಖ್ಯಾತ ಹಿಂದೂ ನಟಿಯ ಮದುವೆ! ಮಗಳ ಬಗ್ಗೆ ಬೇಸರಗೊಂಡಿದ್ದ ತಂದೆಯಿಂದ ಸ್ಪಷ್ಟನೆ

WhatsApp Group Join Now
Telegram Group Join Now

ಹಿರಿಯ ಬಾಲಿವುಡ್ ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ತಮ್ಮ ಏಕೈಕ ಪುತ್ರಿ ಸೋನಾಕ್ಷಿ ಸಿನ್ಹಾ ಅವರ ಅಂತರ್‌ಧರ್ಮೀಯ ವಿವಾಹದ ಕುರಿತಂತೆ ಅಸಮಾಧಾನಗೊಂಡಿರುವುದು ಸುದ್ದಿಯಾಗಿತ್ತು. ಇದೀಗ ಮಗಳ ವಿವಾಹಕ್ಕೂ ಮೊದಲು ಸೋನಾಕ್ಷಿ, ಜಹೀರ್ ಇಕ್ಬಾಲ್ ಅವರೊಂದಿಗಿನ ಸಂಬಂಧ ಮತ್ತು ಈ ಮದುವೆಯ ಬಗ್ಗೆ ಕುಟುಂಬದಲ್ಲಿ ಸ್ವಲ್ಪ ಒತ್ತಡವಿತ್ತು ಎಂದು ಖಚಿತಪಡಿಸಿದ್ದಾರೆ.

ಬಾಲಿವುಡ್ ನ ‘ಶಾಟ್ ಗನ್’ ಅಂದರೆ ಶತ್ರುಘ್ನ ಸಿನ್ಹಾ ತಮ್ಮ ಮಗಳ ಖುಷಿಯಿಂದ ಸಂತಸಗೊಂಡಿದ್ದು, ತಾಯಿ ಪೂನಂ ಸಿಂಗ್ ಕೂಡ ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಗಳ ಮದುವೆಗೂ ಮುನ್ನ ಶತ್ರುಘ್ನ ಮತ್ತೊಮ್ಮೆ ಮೌನ ಮುರಿದಿದ್ದಾರೆ.

ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿಂಗ್ ತಮ್ಮ ಪುತ್ರಿ ಸೋನಾಕ್ಷಿ ಸಿನ್ಹಾ ಮತ್ತು ಮುಸ್ಲಿಂ ನಟ ಜಹೀರ್ ಇಕ್ಬಾಲ್ ಅವರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಸುಮಾರು 2 ವಾರಗಳಿಂದ ಈ ಅಂತರ್ಧರ್ಮೀಯ ವಿವಾಹದ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದೀಗ ಮಗಳಿಗೆ ವಿದಾಯ ಹೇಳುವ ಮುನ್ನ ಬಾಲಿವುಡ್ ನ ‘ಶಾಟ್ ಗನ್’ ಮತ್ತೊಮ್ಮೆ ಈ ವಿಚಾರವಾಗಿ ಮಾತನಾಡಿದ್ದಾರೆ. ಉದ್ವಿಗ್ನತೆ ಇತ್ತು, ಆದರೆ ಈಗ ಎಲ್ಲವೂ ಸರಿಯಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

ಅಂದ ಹಾಗೆ, ಇತ್ತೀಚೆಗೆ ಶತ್ರುಘ್ನ ಸಿನ್ಹಾ ಟೈಮ್ಸ್ ನೌ ಜೊತೆ ಮಾತನಾಡಿದ್ದರು. ಈ ಸಂವಾದದಲ್ಲಿ ಮಗಳ ಮದುವೆ ವಿಚಾರವಾಗಿ ಮನೆಯಲ್ಲಿ ಸ್ವಲ್ಪ ಟೆನ್ಷನ್ ಇತ್ತು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಸೋನಾಕ್ಷಿಯ ಮದುವೆಯ ವಿಚಾರದ ಬಗ್ಗೆಯೂ ತನ್ನ ಅಭಿಪ್ರಾಯವನ್ನು ಶತ್ರುಘ್ನ ಬಹಿರಂಗಪಡಿಸಿದ್ದಾರೆ.

ಜೂನ್ 23 ರಂದು ನಮ್ಮ ಕುಟುಂಬ ಸದಸ್ಯರೆಲ್ಲರೂ ಆರತಕ್ಷತೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನಟ ಹೇಳಿದ್ದಾರೆ. ಶತ್ರುಘ್ನ ಸಿನ್ಹಾ, ‘ಎಲ್ಲರ ಮನೆಯಲ್ಲೂ ಮದುವೆ ನಡೆಯುತ್ತದೆ. ಮದುವೆಗೂ ಮುನ್ನ ಜಗಳಗಳು ಸಹ ಸಾಮಾನ್ಯ. ಈಗ ಎಲ್ಲವೂ ಸರಿಯಾಗಿದೆ, ಏನೆಲ್ಲಾ ಟೆನ್ಶನ್ ಇತ್ತೋ, ಹೋಗಿದೆ. ಇದೆಲ್ಲವೂ ಪ್ರತಿ ಮದುವೆಯಲ್ಲಿ ನಡೆಯುತ್ತದೆ.

ಆಕೆ ಶತ್ರುಘ್ನ ಸಿನ್ಹಾ ಅವರ ಮಗಳು ಎಂದ ಶತ್ರುಘ್ನ, ಜೀವನದಲ್ಲಿ ತನಗೆ ಬೇಕಾದುದನ್ನು ಪಡೆಯಲು ಸಾಧ್ಯವಿಲ್ಲ ಎಂದಲ್ಲ. ಜೂನ್ 23 ರಂದು ನಾವು ಬಹಳಷ್ಟು ಮೋಜು ಮಾಡುತ್ತೇವೆ ಎಂದರು.

ಸೋನಾಕ್ಷಿ ಮತ್ತು ಶತ್ರುಘ್ನ ನಡುವಿನ ಭಿನ್ನಾಭಿಪ್ರಾಯದ ವದಂತಿಗಳು ಮದುವೆಗೆ ಮೊದಲು ಪ್ರಾರಂಭವಾದವು, ತನ್ನ ಮಗಳ ಮದುವೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ನಟ ಹೇಳಿ ಅಚ್ಚರಿ ಮೂಡಿಸಿದ್ದರು. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಶತ್ರುಘ್ನ ಅವರು ತಮ್ಮ ಕುಟುಂಬದ ವಿರುದ್ಧ ‘ಸುಳ್ಳು’ ಹಬ್ಬಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಅವರು ‘ಹೇಳಿ, ಇದು ಯಾರ ಜೀವನ? ಇದು ನನ್ನ ಒಬ್ಬಳೇ ಮಗಳು ಸೋನಾಕ್ಷಿಯ ಜೀವನ, ಅವಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಮತ್ತು ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಅವಳು ನನ್ನನ್ನು ತನ್ನ ಪಿಲ್ಲರ್ ಎಂದು ಕರೆಯುತ್ತಾಳೆ. ಮದುವೆಗೆ ಖಂಡಿತಾ ಇರುತ್ತೇನೆ ಎಂದು ಹೇಳಿದ್ದಾರೆ.


ಸೋನಾಕ್ಷಿಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಎಲ್ಲ ಹಕ್ಕಿದೆ ಮತ್ತು ಆಕೆಯ ನಿರ್ಧಾರವನ್ನು ತಾನು ಬೆಂಬಲಿಸುತ್ತೇನೆ ಎಂದು ಶತ್ರುಘ್ನ ಹೇಳಿದ್ದಾರೆ. ತಮ್ಮ ಮಗಳ ಭಾವಿ ಪತಿ ಬಗ್ಗೆ ಪ್ರತಿಕ್ರಿಯಿಸಿದ ಶತ್ರುಘ್ನ, ‘ಸೋನಾಕ್ಷಿ ಮತ್ತು ಜಹೀರ್ ಒಟ್ಟಿಗೆ ತಮ್ಮ ಜೀವನವನ್ನು ನಡೆಸಬೇಕಾಗುತ್ತದೆ, ಅವರು ಒಟ್ಟಿಗೆ ಉತ್ತಮವಾಗಿ ಕಾಣುತ್ತಾರೆ’ ಎಂದು ಹೇಳಿದ್ದಾರೆ.


ಜೂನ್ 23 ರಂದು ನಡೆಯಲಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಜೋಡಿಯು ಸಲ್ಮಾನ್ ಖಾನ್, ಹನಿ ಸಿಂಗ್, ಹೀರಾಮಾಂಡಿ ನಟರು, ಹುಮಾ ಖುರೇಷಿ, ಸಂಜಯ್ ಲೀಲಾ ಬನ್ಸಾಲಿ, ಡೈಸಿ ಶಾ, ಪೂನಂ ಧಿಲ್ಲೋನ್ ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಿದ್ದಾರೆ.

WhatsApp Group Join Now
Telegram Group Join Now
Back to top button