ಯುವರಾಜ್ ಸಿಂಗ್ ದಾಖಲೆ ಮುರಿದ ಕರ್ನಾಟಕದ ಪ್ರಕಾರ್ ಚತುರ್ವೇದಿ ಚತುಃಶತಕದ ದಾಖಲೆ

WhatsApp Group Join Now
Telegram Group Join Now

ಶಿವಮೊಗ್ಗ: ಆರಂಭಿಕ ಪ್ರಕಾರ್ ಚತುರ್ವೇದಿ (404*ರನ್, 638 ಎಸೆತ, 46 ಬೌಂಡರಿ, 3 ಸಿಕ್ಸರ್) ದಾಖಲೆಯ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಕರ್ನಾಟಕ ತಂಡ 19 ವಯೋಮಿತಿಯ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಕರ್ನಾಟಕ ಹಾಗೂ ಮುಂಬೈ ನಡುವಿನ ೈನಲ್ ಪಂದ್ಯ ಸೋಮವಾರ ಡ್ರಾನಲ್ಲಿ ಅಂತ್ಯಕಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ತಂಡ ಪ್ರಶಸ್ತಿ ಎತ್ತಿ ಹಿಡಿಯಿತು.

ನವುಲೆ ಕೆಎಸ್‌ಸಿಎ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಬೆಳಗ್ಗೆ 6 ವಿಕೆಟ್‌ಗೆ 626 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ, ಪ್ರಕಾರ್ ಚತುರ್ವೇದಿ- ಎನ್.ಸಮರ್ಥ (55*ರನ್, 135 ಎಸೆತ, 6 ಬೌಂಡರಿ) ಜೋಡಿ ಮುರಿಯದ 9ನೇ ವಿಕೆಟ್‌ಗೆ ಕಲೆಹಾಕಿದ 173 ರನ್‌ಗಳ ಜತೆಯಾಟದ ನೆರವಿನಿಂದ 8 ವಿಕೆಟ್‌ಗೆ 890 ರನ್‌ಗಳಿಸಿದಾಗ ಚಹಾ ವಿರಾಮಕ್ಕೂ ಮುನ್ನ ಉಭಯ ತಂಡಗಳ ನಾಯಕರ ಸಮ್ಮತಿ ಪಡೆದ ಅಂಪೈರ್‌ಗಳು ಪಂದ್ಯವನ್ನು ಡ್ರಾ ಎಂದು ೋಷಿಸಿದರು. ೈನಲ್‌ನಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವೂ ಇದಾಗಿದೆ. ಕರ್ನಾಟಕ ತಂಡದ ನಾಯಕ ಧೀರಜ್ ಗೌಡ ಪ್ರಶಸ್ತಿಯೊಂದಿಗೆ 30 ಲಕ್ಷ ರೂ. ನಗದು ಬಹುಮಾನ ಸ್ವೀಕರಿಸಿದರು.

ಮುಂಬೈ: 380, ಕರ್ನಾಟಕ: 8 ವಿಕೆಟ್‌ಗೆ 890 ಡಿಕ್ಲೇರ್ (ಪ್ರಕಾರ್ ಚತುರ್ವೇದಿ 404*,ಹಾರ್ದಿಕ್ ರಾಜ್ 51, ಎಸ್.ಯು.ಕಾರ್ತಿಕ್ 50, ಪ್ರೇಮ್ ದೇವಕರ್ 136ಕ್ಕೆ 3, ನೂತನ್ 41ಕ್ಕೆ 2, ಮನನ್ ಭಟ್ 198ಕ್ಕೆ 2).

https://x.com/BCCIdomestic/status/1746824381333230057?s=20

ಯುವರಾಜ್ ದಾಖಲೆ ಪತನ
ಪ್ರಕಾರ್ ಚತುರ್ವೇದಿ ಕೂಚ್ ಬೆಹಾರ್ ಟ್ರೋಫಿ ೈನಲ್‌ನಲ್ಲಿ 400 ರನ್‌ಗಳಿಸಿದ ಮೊದಲ ಬ್ಯಾಟರ್ ಎನಿಸಿದರು. ಈ ಮೂಲಕ ಯುವರಾಜ್ ಸಿಂಗ್ ಅವರ 25 ವರ್ಷ ಹಳೆಯ ದಾಖಲೆಯೊಂದನ್ನು ಮುರಿದರು. 1999ರ ೈನಲ್‌ನಲ್ಲಿ ಬಿಹಾರ ಎದುರು ಪಂಜಾಬ್ ಪರ ಯುವರಾಜ್ ಸಿಂಗ್ 357 ರನ್ ಬಾರಿಸಿದ್ದು ಇದುವರೆಗಿನ ಗರಿಷ್ಠ ರನ್ ಎನಿಸಿತ್ತು. ಈ ಪಂದ್ಯದ ವೇಳೆ ಎಂಎಸ್ ಧೋನಿ ಬಿಹಾರ ತಂಡದಲ್ಲಿದ್ದರು. 2011ರಲ್ಲಿ ಅಸ್ಸಾಂ ವಿರುದ್ಧ ಲೀಗ್‌ನಲ್ಲಿ ಮಹಾರಾಷ್ಟ್ರದ ವಿಜಯ್ ಜೋಲ್ 451* ರನ್ ಸಿಡಿಸಿದ್ದು ಟೂರ್ನಿಯ ಗರಿಷ್ಠ ರನ್ ಸಾಧನೆಯಾಗಿದೆ.

 

WhatsApp Group Join Now
Telegram Group Join Now
Back to top button