ಕೆಲಸಕ್ಕಾಗಿ ನಕಲಿ ಪ್ರಮಾಣ ಪತ್ರ ಸಲ್ಲಿಕೆ: ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ

WhatsApp Group Join Now
Telegram Group Join Now

ಹಾವೇರಿ: ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಸುಳ್ಳು ಜಾತಿ ಪ್ರಮಾಣ ಪತ್ರ (fake caste certificate) ಸಲ್ಲಿಸಿ ಆಯ್ಕೆ ಆಗಿದ್ದ ಆರೋಪಿಗೆ ಹಾವೇರಿ (Haveri) ನ್ಯಾಯಲಯ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದೆ.

ಹಿರೇಕೆರೂರ (Hirekerur) ತಾಲೂಕಿನ ಬೊಗಾವಿ ಗ್ರಾಮದ ಸೋಮಶೇಖರ್ ಕೆಲಸ ಪಡೆಯಲು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಸತ್ರ ನ್ಯಾಯಲಯ ಈ ತೀರ್ಪು ನೀಡಿದೆ.

ಸೋಮಶೇಖರ್ ವಿರುದ್ಧ ದಾವಣಗೆರೆ ನಾಗರಿಕ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಡಿಎಸ್ಪಿ ಜಯರತ್ನಮ್ಮ ಅವರು ತನಿಖೆ ನಡೆಸಿ ದೋಷಾರೊಪಣ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ಬಳಿಕ ನ್ಯಾಯಾಧೀಶರಾದ ಜಿ.ಎಲ್. ಲಕ್ಷೀನಾರಾಯಣ ಅವರು ಈ ತೀರ್ಪು ನೀಡಿ ಆದೇಶಿಸಿದ್ದಾರೆ.

WhatsApp Group Join Now
Telegram Group Join Now
Back to top button