ಕಾಂಗ್ರೆಸ್’ನವರನ್ನು ಬಿಜೆಪಿಯವರು ದೇವಾಲಯ, ಹಿಂದೂ ವಿರೋಧಿಗಳೆಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಸಚಿವ ಸಂತೋಷ ಲಾಡ್
ಕಾಂಗ್ರೆಸ್’ನವರನ್ನು ಬಿಜೆಪಿಯವರು ದೇವಾಲಯ, ಹಿಂದೂ ವಿರೋಧಿಗಳೆಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹರಿಹಯ್ದಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ 32 ಕೋಟಿ ದೇವರುಗಳಿಗೆ. ಅವರನ್ನು ಯಾರು ಕಾಪಾಡಿದ್ದಾರೆ? ಚುನಾವಣೆ ಬಂದಿದೆ, ಅಧಿಕಾರಕ್ಕೆ ಬರಬೇಕೆಂದು ಬಿಜೆಪಿಯವರು ಮನಬಂದಂತೆ ಹೇಳತ್ತಾರೆ ಹೇಳಲಿ ಎಂದರು.
ಸಿಎಂ ಸಿದ್ದರಾಮಯ್ಯ ಅಯೋಧ್ಯೆಗೆ ಹೋಗದ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹಾಗೇ ಹೇಳಬಾರದೆಂಬ ಯಾವುದೇ ನಿಯಮವಿಲ್ಲ, ಬಿಜೆಪಿಯವರಿಗೆ ರಾಮಮಂದಿರ ಚುನಾವಣೆ ಮುಗಿಯುವವರೆಗೆ ಅಷ್ಟೇ ನೆನಪಾಗುತ್ತದೆ. ಈಗಾಗಲೇ ಶಂಕರಾಚಾರ್ಯರು ಬೈಕಾಟ್ ಮಾಡಿದ್ದಾರೆ. ಅವರ ಮೀರಿ ಬಿಜೆಪಿಯವರು ಇದ್ದಾರೆಯೇ? ಇದೀಗ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದರು.
ಹಾವೇರಿ ಗ್ಯಾಂಗ್ ರೇಪ್ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಇಂದು ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಹೋಗಿದ್ದಾರೆ. ಅವರೇ ಉತ್ತರ ಕೊಡತ್ತಾರೆ. ನನಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ, ಬಿಜೆಪಿಯವರು ಯಾರ ಪರವಾಗಿ ಯಾವಾಗ ಬ್ಯಾಟಿಂಗ್ ಮಾಡತ್ತಾರೆ ಗೊತ್ತಿಲ್ಲ, ಇದು ಸೂಕ್ಷ್ಮ ವಿಚಾರ. ಇದಕ್ಕೆ ಸಿಎಂ ಉತ್ತರ ಕೊಡತ್ತಾರೆ ಎಂದರು.
ಸಿ.ಟಿ.ರವಿ ಅನುದಾನ ತಾರತಮ್ಯ ವಿಚಾರವಾಗಿ ಸಿಎಂ ಶ್ವೇತಪತ್ರ ಹೊರಡಿಸಿ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಏನೂ ಹೇಳಿದ್ದಾರೆ ಗೊತ್ತಿಲ್ಲ, ಸಿ.ಟಿ.ರವಿ ಹೇಳಿದ್ರೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಹಾಗೇ ನಾ? ಈ ಬಗ್ಗೆ ಕೇಂದ್ರವೇ ಶ್ವೇತಪತ್ರ ಹೊರಡಿಸಲಿ ಎಂದರು.