ಮೇ 6 ಮತ್ತು 7 ರಂದು ಕೆಲ ಮಾರ್ಗಗಳ ಬಸ್ ಸಾರಿಗೆ ರದ್ದು

WhatsApp Group Join Now
Telegram Group Join Now

ಬೆಳಗಾವಿ – ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೇಲೆಯಲ್ಲಿ ಮೇ.೭ ರಂದು ಬೆಳಗಾವಿ ವಿಭಾಗದ ವತಿಯಿಂದ ಚುನಾವಣಾ ಕಾರ್ಯಕ್ಕೆ ೨೦೦ ವಾಹನಗಳನ್ನು ಪೂರೈಸಬೇಕಾಗಿರುತ್ತದೆ. ಆದ್ದರಿಂದ ವಿಭಾಗದ ಬೆಳಗಾವಿ, ಬೈಲಹೊಂಗಲ ಮತ್ತು ಖಾನಾಪೂರ ಬಸ್ ನಿಲ್ದಾಣಗಳಿಂದ ಕಾರ್ಯಾಚರಣೆಯಾಗುವ ಕೆಲ ಮಾರ್ಗಗಳ ಸಾರಿಗೆಗಳನ್ನು ಅನಿವಾರ್ಯ ಕಾರಣಗಳಿಂದಾಗಿ ಮೇ.೬ ಮತ್ತು ೭ ರಂದು ಬೆಳಗಾವಿಯಿಂದ ಧಾರವಾಡ, ವಿಜಯಪೂರ, ಗೋಕಾಕ, ಕುಕಡೊಳ್ಳಿ, ಪಾಶ್ಚಾಪೂರ, ಪನಗುತ್ತಿ, ಬೆಟಗೇರಿ, ಶಿವಾಪೂರ ತೋರಾಳಿ, ಬೋಗೂರು, ವೀರಾಪೂರ ,ಬೈಲಹೊಂಗಲ, ನಂದಿಹಳ್ಳಿ,ಬಡಸ, ಕೊಲ್ಹಾಪೂರ, ಹುಬ್ಬಳ್ಳಿ,ಸಂಕೇಶ್ವರ, ರಾಮನಗರ, ಹಳಿಯಾಳ, ಶಿರಶಿ ,ದಾಂಡೆಲಿ, ಪಣಜಿ, ಬಿಡಿ, ಖಾನಾಪೂರ ಬಸ್‌ಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ಸಿಬಿಟಿಯಿಂದಸಂತಿಬಸ್ತವಾಡ, ಮಾಕಂಢೆಯ ನಗರ, ಕರಡಿಗುದ್ದಿ, ಹಂದಿಗನೂರ, ಸುಳಗಾ, ಕೊಳಿಕೊಪ್ಪ, ಅನಗೋಳ, ವಡಗಾವ, ರಾಮತೀರ್ಥನಗರ, ಆರ್.ಸಿ.ಯು. ಕಾರ್ಲೇ, ರಣಕುಂಡೆ, ಹ.ಬಸ್ತವಾಡ, ಕೆ,ಕೆ,ಕೋಪ್ಪ ಸುಳೆಬಾವಿ, ಬಸರಿಕಟ್ಟಿ, ಕೆಂಚಾನಟ್ಟಿ, ರಾಜಹಂಸ ಗಡ, ದೇಸೂರ, ಯಳ್ಳೂರ ರದ್ದುಪಡಿಸಲಾಗಿದೆ.

ಬೈಲಹೊಂಗಲದಿಂದ ಬೆಳಗಾವಿ, ಕಲಬುರಗಿ, ಉಳವಿ, ವೆಂಗೂರ್ಲಾ, ಧಾರವಾಡ, ಯರಗಟ್ಟಿ, ಮುನವಳ್ಳಿ ನೇಸರಗಿ, ಅಂಕಲಗಿ, ಕಿತ್ತೂರು, ಅಲ್ನಾವರ, ನಾಯಿತೇಗೂರ, ಇನಾಮಂಗಲ, ಗಜಮನಾಳ, ಮತ್ತಿಕೊಪ್ಪ ಕರಡಿಗುದ್ದಿ, ತುರಮುರಿ, ಇಟಗಿ ಕ್ರಾಸ್, ಸವಟಗಿ ಖಾನಾಪೂರದಿಂದ ಹಳಿಯಾಳ, ರಾಮನಗರ, ಮಡಗಾವ, ಶಿರಸಿ, ದಾಂಡೇಲಿ, ಪಣಜಿ, ಅಲ್ನಾವರ, ಬಿಡಿ, ಬೆಳಗಾವಿ, ಹಲಸಿ. ಮುಗಳಿಹಾಳ ಮಾರ್ಗಗಳಲ್ಲಿ ಕೆಲವೊಂದು ಬಸ್‌ಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸಂಸ್ಥೆಯೊಂದಿಗೆ ಸಹಕರಿಸಿ ಲಭ್ಯವಿರುವ ಸಾರಿಗೆ ಸೌಲಭ್ಯವನ್ನು ಪಡೆದು ಪ್ರಯಾಣಿಸುವಂತೆ ಬೆಳಗಾವಿ ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲಿ ತಿಳಿಸಿದಾರೆ.

WhatsApp Group Join Now
Telegram Group Join Now
Back to top button