ಹುಬ್ಬಳ್ಳಿಯಲ್ಲಿ ಮತ್ತೊಂದು ಮರ್ಡರ್, ಚರಂಡಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆ

WhatsApp Group Join Now
Telegram Group Join Now

ಹುಬ್ಬಳ್ಳಿ,ಜೂ.24- ನಗರದಲ್ಲಿ ಮೊನ್ನೆ ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರ ಆಕಾಶ್‌ ಮಠಪತಿ ಕೊಲೆ ಮಾಡಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.ನಗರದ ಇಂದಿರಾನಗರದ ಚರಂಡಿಯಲ್ಲಿ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆ ಆಗಿದೆ.

ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಸಬಾಪೇಟೆ ಪೊಲೀಸ್‌‍ ಠಾಣೆಯಲ್ಲಿ ಅಸಹಜ ಸಾವು ಕೇಸ್‌‍ ದಾಖಲಾಗಿದೆ.ವಿದ್ಯಾರ್ಥಿನಿ ನೇಹಾ ನಿರಂಜನ್‌ ಹಿರೇಮಠ್‌ ಕೊಲೆ ಹಾಗೂ ಅಂಜಲಿ ಅಂಬೇಗರ್‌ ಕೊಲೆ ಪ್ರಕರಣಗಳು ನಡೆದು ಹುಬ್ಬಳ್ಳಿ ಕೊತಕೊತ ಕುದಿಯುತ್ತಿರುವ ಬೆನ್ನಲ್ಲೇ ಆಟೋ ಚಾಲಕ ಅಧ್ಯಕ್ಷನ ಪುತ್ರ ಮಠಪತಿ ಕೊಲೆ ನಡೆದಿತ್ತು.

ಇದೀಗ ಮತ್ತೊಬ್ಬ ವ್ಯಕ್ತಿಯ ಮೃತದೇಹ ಚರಂಡಿಯಲ್ಲಿ ಕೊಲೆ ಮಾಡಿದ ಶಂಕೆಯಲ್ಲಿ ಪತ್ತೆಯಾಗಿರುವುದು ಹುಬ್ಬಳ್ಳಿ ಮಂದಿ ಭೀತಿಗೊಳಗಾಗಿದ್ದಾರೆ.

WhatsApp Group Join Now
Telegram Group Join Now
Back to top button