ಮಕ್ಕಳ ತೂಕ ಕಡಿಮೆಯಾಗಿದ್ದರೆ ಚಿಂತೆ ಬಿಡಿ..! ಮಕ್ಕಳ ಎತ್ತರ ಮತ್ತು ತೂಕ ಹೆಚ್ಚಿಸಲು ಹೀಗೆ ಮಾಡಿ: ಈ ರೀತಿಯ ಆಹಾರ ನೀಡಿ..!
ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಗೆ ಆಹಾರ ತಿನ್ನಿಸುವುದೇ ದೊಡ್ಡ ಸವಾಲಾಗಿದೆ. ಏಕೆಂದರೆ ಮಕ್ಕಳು ಸರಿಯಾದ ಸಮಯಕ್ಕೆ ಸರಿಯಾಗಿ ಏನನ್ನು ಸೇವಿಸುವುದಿಲ್ಲ. ಹೀಗಾಗಿ ಮಕ್ಕಳ ತೂಕ ಅವರ ವಯಸ್ಸಿಗಿಂತ ಕಡಿಮೆಎ ಇರುತ್ತದೆ. ಇದು ಎಲ್ಲಾ ಪೋಷಕರಿಗೂ ಸಮಸ್ಯೆಯಾಗಿ ಪರಿಣಮಿಸಿದೆ.
ಮಕ್ಕಳು ಒಳ್ಳೆ ತೂಕ ಮತ್ತು ಎತ್ತರ ಹೊಂದಬೇಕೆಂದರೆ 1-3 ವರ್ಷದಲ್ಲಿಯೇ ಉತ್ತಮ ಪೋಷಣೆ ನೀಡಬೇಕು. ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಮಕ್ಕಳ ತೂಕ ಮತ್ತು ಎತ್ತರವನ್ನು ಪರೀಕ್ಷಿಸಿ ಅವಶ್ಯಕತೆಗೆ ತಕ್ಕಂತೆ ಪೋಷಣೆ ನೀಡಿದರೆ ಮುಂದೆ ಮಕ್ಕಳು ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನು ತಡೆಯಬಹುದು.
ಮಕ್ಕಳ ಎತ್ತರ ಮತ್ತು ತೂಕ ಹೆಚ್ಚಿಸಲು ಹೀಗೆ ಮಾಡಿ:
1. ನಿಮ್ಮ ಮಗುವಿನ ತೂಕ ತುಂಬಾ ಕಡಿಮೆ ಇದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ. ವೈದ್ಯರು ಮಗುವಿನ ತೂಕ ಮತ್ತು ಎತ್ತರವನ್ನು ಪರೀಕ್ಷಿಸಿ, ಈ ಸಮಸ್ಯೆ ವಂಶವಾಹಿಯೋ ಅಥವಾ ಆಹಾರ ಕ್ರಮದಿಂದ ಹೀಗಾಗಿರುವುದೋ ಎಂದು ನಿಖರವಾಗ ತಿಳಿಸಿ ಉತ್ತಮ ಆಹಾರ ಕ್ರಮದ ಸಲಹೆ ನೀಡುತ್ತಾರೆ.
2. ಮಕ್ಕಳಿಗೆ ಒಟ್ಟಿಗೆ ಹೆಚ್ಚು ಆಹಾರ ನೀಡುವುದಕ್ಕಿಂತ 2-3 ಗಂಟೆಯ ಅಂತರದಲ್ಲಿ ಸ್ವಲ್ಪ ಸ್ವಲ್ಪ ಆಹಾರ ನೀಡಬೇಕು. ಹಾಲು ಕುಡಿಯುವ ಮಗುವಾದರೆ ದಿನಕ್ಕೆ 6 ಬಾರಿ ಹಾಲುಣಿಸಬೇಕು.
‘3. ಮಕ್ಕಳ ಎತ್ತರ ಮತ್ತು ತೂಕ ವೃದ್ಧಿಗೆ ಕಬ್ಬಿಣಾಂಶ ತುಂಬಾ ಅವಶ್ಯಕ. ಕಬ್ಬಿಣಾಂಶ ಕಡಿಮೆಯಿದ್ದು, ಆಹಾರವೂ ಒಂದೇ ರೀತಿ ಮುಂದುವರೆದರೆ ಅದು ಅನೀಮಿಯಾ ಉಂಟಾಗಬಹುದು. ಆದ್ದರಿಂದ ಕಬ್ಬಿಣಾಂಶ ಹೆಚ್ಚಿರುವ ಕಿಡ್ನಿ ಬೀನ್, ಸೊಯಾ ಬೀನ್, ಎಲ್ಲ ಧವಸ ಧಾನ್ಯಗಳು, ಬ್ರೆಡ್, ಅನ್ನ ಇಂತಹ ಆಹಾರವನ್ನು ನೀಡಬೇಕು.
4. ಮಕ್ಕಳ ತೂಕ ತುಂಬಾ ಕಡಿಮೆಯಿದ್ದರೆ ಹೆಚ್ಚು ಕ್ಯಾಲೋರಿಗಳಿರುವ ಆಹಾರವನ್ನು ನೀಡಬೇಕು. ಕ್ಯಾಲೊರಿ ಪಟ್ಟಿಯನ್ನು ತಿಳಿದುಕೊಂಡು ಮಕ್ಕಳಿಗೆ ಅದರಂತೆ ಪೋಷಕಾಂಶವನ್ನು ಒದಗಿಸುವುದರಿಂದ ರಕ್ತಹೀನತೆಯನ್ನೂ ತಡೆದು ಮಕ್ಕಳು ಶಕ್ತಿಯುತವಾಗುತ್ತವೆ.
5. ಮಕ್ಕಳ ಎತ್ತರ ಹೆಚ್ಚಿಸಲು ಮಕ್ಕಳಿಗೆ ಸೈಕ್ಲಿಂಗ್ ಮತ್ತು ಇನ್ನಿತರ ದೈಹಿಕ ಆಟವಾಡಲು ಪ್ರೋತ್ಸಾಹ ನೀಡಬೇಕು.
6. ಮಕ್ಕಳಿಗೆ ನೀಡುವ ಆಹಾರದಲ್ಲಿ ಕ್ಯಾಲ್ಸಿಯಂ ಹೆಚ್ಚಿರುವುದನ್ನು ನೀಡಿ. ಇದು ಮಕ್ಕಳ ಮೂಳೆಯನ್ನು ಗಟ್ಟಿಗೊಳಿಸಿ ಅವರ ದೈಹಿಕ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಹಾಲು, ಮೊಸರು ಮತ್ತು ಚೀಸ್ ಅನ್ನು ಮಕ್ಕಳಿಗೆ ಬೆಳವಣಿಗೆ ಅವಧಿಯಲ್ಲಿ ನೀಡಬೇಕು.
7. ತಾಮ್ರಾಂಶ ಹೆಚ್ಚಿರುವ ಮೀನು, ಮಾಂಸ, ಕಲ್ಲಂಗಡಿ ಬೀಜ, ಕಡಲೆಕಾಯಿ, ಡಾರ್ಕ್ ಚಾಕಲೇಟ್ ಇಂತಹವುಗಳನ್ನು ನೀಡಬೇಕು.
8. ಎಣ್ಣೆ ಮಸಾಜ್ ಮಗುವಿನ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಸರಿಯಾದ ರಕ್ತಪರಿಚಲನೆಯಿಂದಾಗಿ ತೂಕ ಹೆಚ್ಚಾಗುವುದನ್ನು ಉತ್ತೇಜಿಸುತ್ತದೆ.
9 ಬಾಳೆಹಣ್ಣು ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ನಿಮ್ಮ ಮಗುವನ್ನು ಹಲವಾರು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ. ನಿಮ್ಮ ಮಕ್ಕಳು ಬಾಳೆಹಣ್ಣನ್ನು ತಮ್ಮ ಆಹಾರದಲ್ಲಿ ಶೇಕ್ಸ್ ಮತ್ತು ಸ್ಮೂಥಿಗಳ ರೂಪದಲ್ಲಿ ಸೇರಿಸುವುದು ಉತ್ತಮ. ಇದರಿಂದ ಮಕ್ಕಳ ತೂಕವು ಸಹ ಹೆಚ್ಚಳವಾಗುತ್ತದೆ.
10 ಮೊಟ್ಟೆಗಳು ಮಗುವಿನ ಆರೋಗ್ಯಕ್ಕೆ ಅಗತ್ಯವಾದ ಸ್ನಾಯುಗಳು ಹಾಗು ದೇಹದ ಅಂಗಾಂಶಗಳ ಬೆಳವಣಿಗೆಗೆ ಪೂರಕವಾಗಿದೆ. ಹಾಗಾಗಿ ಮಕ್ಕಳ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿ.
11 ಮಕ್ಕಳಿಗೆ ದೇಹದ ತೂಕ ಹೆಚ್ಚಿಸಲು ಕಾಳುಗಳು ಬಹಳ ಉತ್ತಮವಾಗಿದೆ. ಮಕ್ಕಳಿಗೆ ಬಾದಾಮಿ, ಗೋಡಂಬಿ, ವಾಲ್‌ನಟ್, ಏಪ್ರಿಕಾಟ್, ಅಂಜೂರದ ಹಣ್ಣು, ಒಣದ್ರಾಕ್ಷಿ ಸೇರಿ ಕಾಳುಗಳ ನೀಡಿ. ಇವು ಕಬ್ಬಿಣ, ಮೆಗ್ನೀಸಿಯಮ್‌ನಿಂದ ಸಮೃದ್ಧವಾಗಿದ್ದು, ಆರೋಗ್ಯಕರ ಕೊಬ್ಬನ್ನು ಒದಗಿಸುತ್ತದೆ.