ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ
ಬೆಂಗಳೂರು, ಫೆಬ್ರುವರಿ 1: ನಾಲ್ವರು ಐಪಿಎಸ್ (IPS)ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಅಮಿತ್ ಸಿಂಗ್, ಡಿಐಜಿಪಿ, ದಕ್ಷಿಣ ವಲಯ (ಮೈಸೂರು), ಡಾ.ಎಂ.ಬಿ.ಬೋರಲಿಂಗಯ್ಯ, ಡಿಐಜಿಪಿ, ಪಶ್ಚಿಮ ವಲಯ (ಮಂಗಳೂರು), ಶಿವಪ್ರಕಾಶ್ ದೇವರಾಜು, ಪೊಲೀಸ್ ವರಿಷ್ಠಾಧಿಕಾರಿ, (ಕಲಬುರಗಿ) ಮತ್ತು ಎ.ಶ್ರೀನಿವಾಸುಲು, ಡಿಸಿಪಿ, ಬೆಂಗಳೂರು ದಕ್ಷಿಣ ಸಂಚಾರ ವಿಭಾಗಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದೆ.
4 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಅಮಿತ್ ಸಿಂಗ್: ಡಿಐಜಿ, ದಕ್ಷಿಣ ವಲಯ
- ಡಾ. ಎಂ.ಬಿ. ಬೋರಲಿಂಗಯ್ಯ: ಡಿಐಜಿ, ಪಶ್ಚಿಮ ವಲಯ
- ಎಸ್.ಪಿ. ದೇವರಾಜು: ಎಸ್ಪಿ, ಕಲಬುರಗಿ
- ಎ. ಶ್ರೀನಿವಾಸುಲು: ಡಿಸಿಪಿ ಸಂಚಾರ, ದಕ್ಷಿಣ ವಿಭಾಗ, ಬೆಂಗಳೂರು ನಗರ
218 ಪಿಎಸ್ಐಗಳ ವರ್ಗಾವಣೆ
ರಾಜ್ಯದ ವಿವಿಧೆಡೆ 33 ಡಿವೈಎಸ್ಪಿಗಳು ಹಾಗೂ 132 ಇನ್ಸ್ಪೆಕ್ಟರ್ಗಳನ್ನು ಇತ್ತೀಗೆಚೆ ವರ್ಗಾವಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಮೇಜರ್ ಸರ್ಜರಿ ಮಾಡಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ 218 ಪಿಎಸ್ಐಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿತ್ತು.