Siddaganga Mutt: ಇಂದು ಸಿದ್ದಗಂಗಾ ಶ್ರೀಗಳ ಐದನೇ ಪುಣ್ಯಸ್ಮರಣೆ; ರಕ್ತದಾನ ಶಿಬಿರ ಆಯೋಜನೆ ಮಠ, ಶ್ರೀಗಳ ಗದ್ದುಗೆಗೆ ವಿಶೇಷ ಪುಷ್ಪ

WhatsApp Group Join Now
Telegram Group Join Now

ತುಮಕೂರು: ಇಂದು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ (Sri Shivakumara Swamiji) ಅವರ ಐದನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸಿಎಂ‌ ಸಿದ್ದರಾಮಯ್ಯ (CM Siddaramaiah) ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಭಾಗಿಯಾಗಲಿದ್ದಾರೆ.

ಈ ವೇಳೆ ಸ್ಮೃತಿವನ ಉದ್ಘಾಟನೆ ಮಾಡಲಿದ್ದು, ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದೆ. ಸಿದ್ದಗಂಗಾ ಮಠದ ಆವರಣದಲ್ಲಿ ಈಗಾಗಲೇ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಒಂದೇ ವೇದಿಕೆಯಲ್ಲಿ ಸಿಎಂ‌ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಕಾಣಿಸಿಕೊಳ್ಳಲಿದ್ದಾರೆ.

Siddaganga Mutt: ಇಂದು ಸಿದ್ದಗಂಗಾ ಶ್ರೀಗಳ ಐದನೇ ಪುಣ್ಯಸ್ಮರಣೆ; ಮಠ, ಶ್ರೀಗಳ ಗದ್ದುಗೆಗೆ ವಿಶೇಷ ಪುಷ್ಪ

ಇಂದು ಬೆಳಗ್ಗೆ 10:30 ಕ್ಕೆ ರಸ್ತೆ ಮೂಲಕ ಸಿದ್ದಗಂಗಾ ಮಠಕ್ಕೆ ಸಿಎಂ ತೆರಳಲಿದ್ದಾರೆ. ಬಳಿಕ ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 1:30 ಕ್ಕೆ ಸಿದ್ದಗಂಗಾ ಮಠದಲ್ಲಿ ಊಟ ಆಯೋಜನೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗ್ತಾರೆ?

ಕಾರ್ಯಕ್ರಮದಲ್ಲಿ ಸಚಿವ ಪರಮೇಶ್ವರ್, ಕೆಎನ್ ರಾಜಣ್ಣ,ಈಶ್ವರ ಖಂಡ್ರೆ, ಎಂ.ಬಿ ಪಾಟೀಲ್, ಎಸ್​​​​ಎಸ್ ಮಲ್ಲಿಕಾರ್ಜುನ, ಚಲುವರಾಯಸ್ವಾಮಿ, ಸಂಸದ ಜಿ.ಎಸ್ ಬಸವರಾಜ್, ಶಾಸಕ ಜ್ಯೋತಿ ಗಣೇಶ್, ಸುರೇಶ್ ಗೌಡ, ಎಸ್​​ಆರ್ ಶ್ರೀನಿವಾಸ್, ಹೆಚ್​​ಸಿ ಬಾಲಕೃಷ್ಣ, ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.


ದಾಸೋಹ

ಇನ್ನು ಕಾರ್ಯಕ್ರಮಕ್ಕೆ ಬರುವಂತಹ ಭಕ್ತರಿಗಾಗಿ ಕಳೆದ ಮೂರು ದಿನಗಳಿಂದ ಮಠದ ಸಿಬ್ಬಂದಿ ಸಿಹಿ ಖಾದ್ಯ ತಯಾರಿಸುತ್ತಿದ್ದಾರೆ. ಒಟ್ಟು ಅರು ಕಡೆಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಇರಲಿದೆ. ಬೆಳಗ್ಗೆ 7 ಗಂಟೆಯಿಂದಲೇ ದಾಸೋಹ ಶುರುವಾಗಿದೆ.

ರಕ್ತದಾನ ಶಿಬಿರ ಆಯೋಜನೆ

ಇತ್ತ ಬೆಳಗ್ಗೆ 5 ಗಂಟೆಯಿಂದಲೇ ಶ್ರಿಗಳ ಗದ್ದುಗೆಯಲ್ಲಿ ವಿಶೇಷ ಹೂವಿನ ಅಲಂಕಾರ ಮತ್ತು ಪೂಜೆ ಕೈಂಕರ್ಯಗಳು ನಡೆಯುತ್ತಿವೆ. ಶ್ರೀಗಳ ಐದನೇ ಪುಣ್ಯಸ್ಮರಣೆ ಹಿನ್ನೆಲೆ ಸಂಜೀವಿನಿ ರಕ್ತ ನಿಧಿ ಕೇಂದ್ರದಿಂದ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗದೆ. ಬ್ಯಾರಿಕೇಡ್​ಗಳನ್ನು ಹಾಕುವ ಪ್ರವೇಶ ಮತ್ತು ನಿರ್ಗಮನದ ಮಾರ್ಗವನ್ನು ಗುರುತಿಸಲಾಗಿದೆ.

WhatsApp Group Join Now
Telegram Group Join Now
Back to top button