ಹಿಂದೂ-ಮುಸ್ಲಿಂ ವಿಷಯ ಇಟ್ಟುಕೊಂಡು ಚುನಾವಣೆ ಮಾಡುವರು ಬಿಜೆಪಿಯವರು : ಸಂತೋಷ್ ಲಾಡ್
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿಯವರಿಗೆ ಮಾತನಾಡಲು ಹಿಂದೂ-ಮುಸ್ಲಿಂ ವಿಷಯ ಬಿಟ್ಟರೆ ಬೇರೆ ಏನಿಲ್ಲ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಐಎಸ್‌ಐ ರಾಜ್ಯವಾ? ಇದು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಅವರಿಗೆ ತಿಳಿಯೋದಿಲ್ವಾ? ಅವರು ಲೋಕಸಭಾ ಸದಸ್ಯರಾಗಿ ಏನೇನೂ ಮಾತನಾಡುತ್ತಾರೆ? ಇದು ಸಂಪೂರ್ಣವಾಗಿ ತಪ್ಪು ಎಂದು ಹರಿಹಾಯ್ದರು.
ಸಿದ್ದರಾಮಯ್ಯ ರಾಜ್ಯದ ಉತ್ತಮ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದ ಹಿಂದೂಗಳನ್ನು ಶವ ಸಂಸ್ಕಾರ ಮಾಡಿದ್ದು ಮುಸ್ಲಿಮರು ಅವಾಗ ಎಲ್ಲಿದ್ದರು ಈ ಹಿಂದೂವಾದಿಗಳು? ಇದರ ಬಗ್ಗೆ ಯಾರು ಚರ್ಚೆ ಮಾಡತ್ತಾರಾ? ಅದರ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಲಿ ಎಂದು ಸವಾಲ್ ಹಾಕಿದರು.
ಇದೀಗ ಚುನಾವಣೆ ಬಂದಿದೆ ಅದಕ್ಕೆ ಮಾತನಾಡತ್ತಾರೆ. ಇವರಿಗೆ ಮತ ಬೇಕು ಮತಗಳನ್ನು ತೆಗೆದುಕೊಳ್ಳಲಿ, ಅದು ಬಿಟ್ಟು ಬಾಯಿಗೆ ಬಂದಂತೆ ಹಿಂದೂ-ಮುಸ್ಲಿಂ ಜಾತಿ ಮಾಡುವುದು ಸರಿಯಲ್ಲ ಎಂದರು.
ಬಿಜೆಪಿಯವರಿಗೆ ಚುನಾವಣೆ ಬೇಕಿದ್ದರೇ ಪ್ರಧಾನಿ ನರೇಂದ್ರ ಮೋದಿ ಅವರು 8-10 ವರ್ಷ ಯಾವ ಯೋಜನೆ ಜಾರಿಗೆ ತಂದಿದ್ದಾರೆ. ಅದರ ಬಗ್ಗೆ ಮಾತನಾಡಲಿ ಎಂದ ಸಚಿವರು, ಈ ಹಿಂದೆ ಪಾಕಿಸ್ತಾನಕ್ಕೆ ಕೇಕ್ ತಿನ್ನಲು ಹೋಗಿದ್ದು ನರೇಂದ್ರ ಮೋದಿ ಅವರು, ಲಂಡನ್‌ನಿಂದ ರಾತ್ರೋರಾತ್ರಿ ನವಾಬ್ ಶರೀಫ್ ಅವರ ಮನೆಗೆ ಹೋಗಿ ಬಿರಿಯಾನಿ, ಕೇಕ್ ತಿಂದಿದ್ದು ಯಾರು? ಅವರ ಬಗ್ಗೆ ಚರ್ಚೆ ಮಾಡಲಿ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು.