ಗೃಹಲಕ್ಷ್ಮಿ ಹಣ ಪಡೆದುಕೊಳ್ಳಲು ಹೊಸ ರೂಲ್ಸ್ ಗಳು! ಹಣ ಬಂದಿಲ್ಲ ಅಂದ್ರೆ ಹೀಗೆ ಮಾಡಿ

WhatsApp Group Join Now
Telegram Group Join Now

Gruhalaxmi Scheme Money News:  ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಇನ್ನು ಕೆಲವರ ಖಾತೆಗೆ ಇನ್ನೂ ಜಮಾ ಆಗಿಲ್ಲ ಹಾಗೂ 7ನೇ ಕಂತಿನ ಹಣ ಬರುವ ದಿನಾಂಕವು ಕೂಡ ಹತ್ತಿರ ಬಂತು. ಹಾಗಾದರೆ ಹಣ ಪಡೆದುಕೊಳ್ಳಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ನೀಡಿರುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ.

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣವು ಇನ್ನೇನು ಕೆಲವೇ ದಿನಗಳಲ್ಲಿ ಜಮಾ ಆಗುತ್ತದೆ ಇನ್ನು ಯಾರಿಗೂ ಜಮಾ ಆಗಿಲ್ಲ ಅಂತವರಿಗೆ ಫೆಬ್ರವರಿ ತಿಂಗಳ ಒಳಗೆ ಜಮಾ ಆಗುತ್ತದೆ ಮತ್ತು 7ನೇ ಕಂತಿನ ಹಣವು ಕೂಡ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಬರುವ ಸಾಧ್ಯತೆಯಿದ್ದು ಈ ಕೆಲಸ ಮಾಡಿದರೆ ನಿಮ್ಮ ಹಣ ಸುಲಭವಾಗಿ ನಿಮ್ಮ ಖಾತೆಗೆ ದೊರಕುತ್ತದೆ ಎಂದು ಹೇಳಬಹುದು.

ಗೃಹಲಕ್ಷ್ಮಿ ಹಣ ಬರದಿರಲು ಕಾರಣಗಳು!

ರಾಜ್ಯದಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆಯರಲ್ಲಿ 10% ಜನಕ್ಕೆ ಇಲ್ಲಿವರೆಗೂ ಒಂದು ಕಂತಿನ ಹಣ ಬಂದಿಲ್ಲ ಅಂತಾನೆ ಹೇಳಬಹುದು. ಆಧಾರ್ ಸೀಡಿಂಗ್ ಆಗಿಲ್ಲ ಮತ್ತು ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿಲ್ಲ ರೇಷನ್ ಕಾರ್ಡ್ ನಲ್ಲಿ ಈಕೆ ವೈ ಸಿ ಆಗಿಲ್ಲ ಇದೇ ರೀತಿ ಹಲವಾರು ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣ ದೊರಕದವರು ಬಹಳ ಮಹಿಳೆಯರು ಇದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಈ ಮಾರ್ಗಗಳು ಅನುಸರಿಸಿ!

ಗೃಹಲಕ್ಷ್ಮಿ ಯೋಜನೆಯ ಹಣ ಏನಾದರು ಬಂದಿಲ್ಲ ಅಂದರೆ ನೀವು ತಿ ಹೆಚ್ಚು ತಲೆನೋವು ತೆಗೆದುಕೊಳ್ಳಬೇಡಿ ಯಾಕೆಂದರೆ ಸಮಸ್ಯೆ ಎಂದರೆ ಪರಿಹಾರ ಇದ್ದೇ ಇರುತ್ತದೆ ಅದಕ್ಕಾಗಿ ನೀವು ಮೊದಲು ಎನ್‌ಪಿಸಿಐ (NPCI) ಕೆಲಸವನ್ನು ಪೂರ್ಣಗೊಳಿಸಿ.

ಇನ್ನೊಂದು ಪರಿಹಾರ ಎಂದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಫಾರಂ ಅನ್ನು ತೆಗೆದುಕೊಂಡು ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮೊಬೈಲ್ ನಂಬರ್ ಬ್ಯಾಂಕ್ ಖಾತೆ ಎಲ್ಲವನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ ಅಲ್ಲಿಯ ಸಿಡಿಪಿಓ (CDPO)ಅಧಿಕಾರಿಗಳು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಖಾತೆಯನ್ನು ಪರಿಶೀಲಿಸಿ, ಯಾಕೆ ಹಣ ಬಂದಿಲ್ಲ ಅಂತ ತಿಳಿಸಿಕೊಡುತ್ತಾರೆ ಅದನ್ನು ಪರಿಹಾರ ಮಾಡಿಕೊಳ್ಳಲು ನೀವು ಮುಂದಾಗಿ.

ಇನ್ನು ಮೂರನೆಯದಾಗಿ ತೆರಿಗೆ ಪಾವತಿ ಮಾಡುವವರು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದು ತುಂಬಾ ಗೊಂದಲವನ್ನುಂಟು ಮಾಡಿದೆ ಏಕೆಂದರೆ ತೆರಿಗೆ ಪಾವತಿ ಮಾಡದ ಅಂದರೆ ನಿಜವಾದ ಫಲಾನುಭವಿಗಳ ಹೆಸರುಗಳನ್ನು ಕೂಡ ಇದರಲ್ಲಿ ಲಿಸ್ಟ್ ಮಾಡಲಾಗಿದೆ.

ಸರ್ಕಾರದ ತಾಂತ್ರಿಕ ದೋಷದಿಂದ ನಿಮ್ಮ ಹೆಸರು ಕೂಡ ಆದಾಯ ಮತ್ತು ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕೂಡ ಸೇರಿರಬಹುದು ಇದನ್ನು ನೀವು ತೆಗೆಸಬಹುದು.

ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನಾನು ತೆರಿಗೆ ಪಾವತಿಸಿಲ್ಲ ಎಂಬ ದೃಢೀಕರಣ ಪತ್ರವನ್ನು ನೀಡಬೇಕು. ನಂತರ ಅದಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಇಲಾಖೆಗೆ ಕಳುಹಿಸಬೇಕು. ಅಲೆ ನಿಮ್ಮ ಹೆಸರನ್ನು ತೆಗೆದುಹಾಕಲಾಗುತ್ತದೆ ಮುಂದಿನ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ ಡಿ ಬಿ ಟಿ ಯನ್ನು ಪರಿಶೀಲಿಸಿಕೊಳ್ಳಿ.

WhatsApp Group Join Now
Telegram Group Join Now
Back to top button