ಪ್ರಚೋದನಕಾರಿ ಭಾಷಣ ಹಿನ್ನೆಲೆ ಯತ್ನಾಳ, ರಾಜಾಸಿಂಗ್ ವಿರುದ್ಧ ಪ್ರಕರಣ ದಾಖಲು

WhatsApp Group Join Now
Telegram Group Join Now

ಪ್ರಚೋದನಕಾರಿ ಭಾಷಣ ಹಿನ್ನೆಲೆ ಇಬ್ಬರು ಶಾಸಕರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಫೀಕ ಟಪಾಲ್ ಇಂಜನಿಯರ್ ತಿಳಿಸಿದರು.

ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಗೋಶಮಹಾಲ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ವಿರುದ್ಧ ಕೇಸ್ ದಾಖಲು ಆಗಿದೆ. ವಿಜಯಪುರ ನಗರದ ಮಾರ್ಚ್ 4 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ವಿಜಯಪುರ ನಗರದ ಶಿವಾಜಿ ಸರ್ಕಲ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅಬ್ ಗಲಿ ಗಲಿ ಮೈ ಅಜ್ಜಲಖಾನ್, ಔರಂಗಜೇಬ ಹೈ.. ಇಸ್ ಲಿಯೇ ಅಬ್ ಗಲಿ ಗಲಿ ಮೇ ಶಿವಾಜಿ ಮಹಾರಾಜರ ಬನಾನ್ ಹೈ ಎಂದು ಶಾಸಕ ಟಿ. ರಾಜಾಸಿಂಗ್ ಭಾಷಣ ಮಾಡಿದ್ದರು.

ಅಲ್ಲದೇ, ಅಗರ್ ಮೇರಾ ಹಾತ್ ಮೇ ಹೋಂ ಮಿನಿಸ್ಟರ್ ರಹಾತೋ ಗೋಸ್‌ಕೆ ಎನೌಂಟರ್ ಕರಕ್ಕೆ ಏಕ್ ಬಿ ಪಾಕಿಸ್ತಾನ ಘಸರೇ ಬಾಹ್ ನಹಿ ಆನೇತಕ್ ಜೈ ಭಾರತ ಮಾತಾಕಿ ಜೈ..ಜೈ ಛತ್ರಪತಿ ಶಿವಾಜಿ ಮಹಾರಾಜರು ಕರತ್ತಾ ಎಂದು ಭಾಷಣದಲ್ಲಿ ಶಾಸಕ ಯತ್ನಾಳ ಹೇಳಿದ್ದರು.

ಮಾರ್ಚ್ 4ರಂದು ವಿಜಯಪುರ ನಗರದ ಶಿವಾಜಿ ಸರ್ಕಲ್‌‌ನಲ್ಲಿ ನಡೆದಿದ್ದ ಛತ್ರಪತಿ ಶಿವಾಜಿ ಜಯಂತಿ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಕಲಂ: 153, 506, 504, 505(2) ಐಪಿಸಿ ಅಡಿಯಲ್ಲಿ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದರು.

WhatsApp Group Join Now
Telegram Group Join Now
Back to top button