ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗ ʼಬೆಳ್ಳುಳ್ಳಿʼ..!

WhatsApp Group Join Now
Telegram Group Join Now

ಬೆಳ್ಳುಳ್ಳಿ ಕೇವಲ ಅಡುಗೆ ಮನೆಗೆ ಸೀಮಿತವಾದ ಪದಾರ್ಥವಲ್ಲ. ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಜ್ವರ, ಕೆಮ್ಮು, ನೆಗಡಿಯಿಂದ ಅರಂಭಿಸಿ ಪಾರ್ಶ್ವವಾಯು, ಹೃದಯದ ಸಮಸ್ಯೆ, ಕ್ಯಾನ್ಸರ್ ರೋಗಗಳ ಮದ್ದಿಗೂ ಇದು ಬಳಕೆಯಾಗುತ್ತದೆ.

 

ಸೌಂದರ್ಯ ವರ್ಧನೆಗೂ ಬೆಳ್ಳುಳ್ಳಿ ಉಪಕಾರಿಯಾಗಿದೆ.

ಎಣ್ಣೆಯ ಅಂಶ ಹೆಚ್ಚಾಗಿ ಇರುವವರ ಮುಖದಲ್ಲಿ ಹೆಚ್ಚು ಬ್ಲಾಕ್ ಹೆಡ್ಸ್ ಗಳಿರುತ್ತವೆ. ಟೊಮೆಟೊ ತಿರುಳಿಗೆ ಜಜ್ಜಿದ ಬೆಳ್ಳುಳ್ಳಿ ಬೆರೆಸಿ ಬ್ಲಾಕ್ ಹೆಡ್ ಇರುವೆಡೆ ಹಚ್ಚಿ ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಮುಖದಲ್ಲಿನ ರಂಧ್ರವನ್ನು ಮುಚ್ಚುತ್ತದೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

 

ಬೆಳ್ಳುಳ್ಳಿಯಲ್ಲಿ ಅಲ್ಲಿಸಿನ್ ಎಂಬ ಅಂಶವಿದ್ದು, ಇದು ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ. ಇದು ತಲೆಯ ಭಾಗದ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ. ಬೆಳ್ಳುಳ್ಳಿ ಎಸಳನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ನೆತ್ತಿಯ ಭಾಗಕ್ಕೆ ಮಸಾಜ್ ಮಾಡಿ. ಮೂವತ್ತು ನಿಮಿಷ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.

 

ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಅಂಟಿ ಇಂಪ್ಲಾಮೇಟರಿ ಗುಣಲಕ್ಷಣವಿದ್ದು ಮೊಡವೆ ಗುಳ್ಳೆಗಳ ಸೋಂಕು ಹರಡುವುದನ್ನು ತಪ್ಪಿಸುತ್ತದೆ.

WhatsApp Group Join Now
Telegram Group Join Now
Back to top button