ಈ 8 ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ನಿಮ್ಮ ಮೊಬೈಲನ್ನು ಇಟ್ಟುಕೊಳ್ಳುವುದು ತುಂಬಾ ಅಪಾಯ ಬಳಸಬೇಡಿ..!

WhatsApp Group Join Now
Telegram Group Join Now

ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ ಮೊಬೈಲನ್ನು ಬಳಸಲೇಬೇಡಿ. ನಿಮ್ಮ ಹತ್ತಿರಕ್ಕೂ ಇಟ್ಟುಕೊಳ್ಳಬೇಡಿ.

 

ನೀವು ಮಲಗುವ ಕೊಠಡಿ

ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ.

ಆದರೆ ನೆನಪಿಡಿ ಇದು ಒಳ್ಳೆಯ ಬೆಳವಣಿಗೆಯಲ್ಲ ನಿಮ್ಮ ಆರೋಗ್ಯಕ್ಕಿಂತ ಯಾವುದೂ ಮುಖ್ಯವಲ್ಲ. ಹಾಗಾಗಿ ಮೊಬೈಲ್ ಗಿಂತ ಆರೋಗ್ಯ ಮುಖ್ಯವೆಂದು ನೀವೇ ಮನಗಾಣಿ. ಮೊಬೈಲ್ ತರಂಗಗಳು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದು ಇಲ್ಲಿ ಮಾತ್ರವಲ್ಲ ಇನ್ನೂ ಏಳು ಕಡೆ ಬಗ್ಗೆ ವಿವರ ಕೊಡುತ್ತೇವೆ.

ಜೇಬುಗಳಲ್ಲಿ ಇಟ್ಟುಕೊಳ್ಳುವುದು ತುಂಬಾ ಅಪಾಯ

ನೀವು ಹಿಂದಿನ ಅಥವಾ ಮುಂದಿನ ಜೇಬುಗಳಲ್ಲಿ ಮೊಬೈಲ್ ಇಟ್ಟುಕೊಳ್ಳುವುದು ತುಂಬಾ ಅಪಾಯಕಾರಿ. ಇದು ನಿಮ್ಮ ಹೊಟ್ಟೆ ನೋವು ಅಥವಾ ಕಾಲು ನೋವಿಗೆ ಕಾರಣವಾದೀತು. ಮೊಬೈಲ್ ಸದಾ ಇಂಟರ್ನೆಟ್‌ ಸಂಪರ್ಕ ಹೊಂದಿರುವ ಕಾರಣ ಅದು ಸಾಕಷ್ಟು ತರಂಗಗಳನ್ನು ಉಂಟು ಮಾಡುತ್ತಿರುತ್ತದೆ. ಇದು ನಿಮ್ಮ ದೇಹದ ವಿವಿಧ ಭಾಗಗಳಿಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಅಲ್ಲದೆ ಕ್ಯಾನ್ಸರ್ ಗೆ ಕಾರಣವಾಗುವ ಸಂಭವ ಹೆಚ್ಚಿದೆ.

ದಿಂಬಿನ ಕೆಳಗೆ ಇಟ್ಟುಕೊಳ್ಳಬೇಡಿ

ದಿಂಬಿನ ಕೆಳಗೆ ಮೊಬೈಲನ್ನು ಇಟ್ಟುಕೊಳ್ಳುವುದರಿಂದ ನಿಮಗೆ ಸುಖ ನಿದ್ರೆಗೆ ಭಂಗ ಉಂಟಾಗುತ್ತದೆ. ಅಲ್ಲಿ ಬರುವ ನೀಲಿ ಬಣ್ಣದ ದ್ವೀಪವು ನಿಮ್ಮ ನಿದ್ದೆಗೆ ಅಡ್ಡಿ ಮಾಡುತ್ತದೆ. ಅಲ್ಲದೇ ಬೇಗ ಏಳಲು ಆಗದ ಪರಿಸ್ಥಿತಿ ನಿಮ್ಮದಾಗುತ್ತದೆ. ಇದರಿಂದ ಸೋಮಾರಿತನವೂ ಹೆಚ್ಚುತ್ತ ಹೋಗುತ್ತದೆ.

ನಿಮ್ಮ ಶರ್ಟಿನ ಇಲ್ಲವೇ ಬ್ರಾ ಒಳಗೆ ಇಟ್ಟುಕೊಳ್ಳಬೇಡಿ

ನೀವು ಹೀಗೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅಲ್ಲದೆ ವೈಬ್ರೆಟ್ ಮೋಡ್ನಲ್ಲಿ ಇಟ್ಟುಕೊಂಡರೆ ಇನ್ನೂ ಅಪಾಯಕಾರಿ. ನಿಮ್ಮ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಅದಕ್ಕೆ ಹಾನಿ ಉಂಟಾಗುತ್ತವೆ.

ಮುಖಕ್ಕೆ ತಾಗಿಸಿ ಹಿಡಿದುಕೊಳ್ಳಬೇಡಿ

ನೀವು ಮೊಬೈಲ್ ಕರೆ ಸ್ವೀಕರಿಸುವಾಗ ಯಾವುದೇ ಕಾರಣಕ್ಕೂ ಮುಖಕ್ಕೆ ತಾಗುವಂತೆ ಇಟ್ಟುಕೊಳ್ಳಬೇಡಿ. ಯಾಕೆಂದರೆ ನಮ್ಮ ಫೋನಿನಲ್ಲಿ ಬ್ಯಾಕ್ಟೀರಿಯಾ ಬಹಳವಾಗಿ ಇರುತ್ತವೆ. ಇದು ನಿಮ್ಮ ಮುಖದ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಚರ್ಮಕ್ಕೆ ಸೋಂಕು ತಾಗುವುದಲ್ಲದೇ ತುರಿಕೆಯೂ ಪ್ರಾರಂಭವಾಗುತ್ತದೆ. ಹೀಗಾಗಿ ಈ ತೊಂದರೆಯಿಂದ ಅಲ್ಪ ಪ್ರಮಾಣದಲ್ಲಿ ಆದರೂ ಪಾರಾಗಬೇಕೆಂದರೆ ಇಯರ್ ಫೋನನ್ನು ಬಳಸಿ.

ಇದು ಬಾತ್ ರೂಮ್ ರಹಸ್ಯ

ಬಾತ್ ರೂಮ್ ಗೆ ನಾವು ಹೋಗುವುದೇ ನಮ್ಮ ಮೈಯಲ್ಲಿರುವ ಕೊಳೆಯನ್ನು ಹೋಗಲಾಡಿಸುವ ಸಲುವಾಗಿ. ಹೀಗಿರುವಾಗ ನಿಮ್ಮ ಮೊಬೈಲನ್ನು ನೀವು ಅಲ್ಲಿಗೇ ಕೊಂಡೊಯ್ದರೆ ಅಲ್ಲಿರುವ ಬ್ಯಾಕ್ಟೀರಿಯಾ ನಿಮ್ಮ ಮೊಬೈಲ್ ಸೇರುವುದಿಲ್ಲವೆ? ಹೀಗಾಗಿ ಅಲ್ಲಿಗೆ ತೆಗೆದುಕೊಂಡು ಹೋಗುವ ಮುನ್ನ ಒಮ್ಮೆ ಯೋಚಿಸಿ.

ಕಾರಿನ ಗ್ಲೋ ಕಂಪಾರ್ಟ್ ಮೆಂಟ್ ನಲ್ಲಿ ಬೇಡ

ಕಾರಿನ ಗ್ಲೋ ಕಂಪಾರ್ಟ್ ಮೆಂಟ್ ನಲ್ಲಿ ಇಡುವುದರಿಂದ ಫೋನಿಗೆ ಸಾಕಷ್ಟು ಹಾನಿಯಾಗುವುದಲ್ಲದೆ, ತರಂಗಗಳಿಂದ ನಿಮ್ಮ ದೇಹಕ್ಕೆ ಭಾರೀ ಹಾನಿಯಾಗುತ್ತದೆ. ಅಲ್ಲದೇ ಕೆಲವೊಂದು ರಾಸಾಯನಿಕಗಳು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ.

ಸ್ಟ್ರಾಲರ್ ಗಳಲ್ಲಿ ಇಡುವುದು ಒಳ್ಳೆಯದಲ್ಲ

ಸ್ಟ್ರಾಲರ್ ಗಳು ಇರುವುದು ಮಕ್ಕಳನ್ನು ಹೊತ್ತೊಯ್ಯಲು. ಅಲ್ಲಿಗೆ ಅಪ್ಪಿತಪ್ಪಿ ನಿಮ್ಮ ಮೊಬೈಲನ್ನು ಇಡಲು ಹೋಗಲೇಬೇಡಿ. ಕಾರಣ ನಿಮ್ಮ ಮಗುವಿನ ಆರೋಗ್ಯ ಉತ್ತಮವಾಗಿ ಇದರಲ್ಲಿನ ಹಾನಿಕಾರಕ ತರಂಗಗಳು ಮಕ್ಕಳಿಗೆ ಹಾನಿ ಮಾಡುತ್ತವೆ. ಅವರ ಬೆಳವಣಿಗೆಗಳ ಮೇಲೆ ದುಷ್ಪರಿಣಾಮ ಬೀರುತ್ತವೆ.

WhatsApp Group Join Now
Telegram Group Join Now
Back to top button