ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪೋಸ್ಟರ್ ಅಭಿಯಾನ ಆರಂಭಿಸಿದ ಬಿಜೆಪಿ

WhatsApp Group Join Now
Telegram Group Join Now

ಬೆಳಗಾವಿಯಲ್ಲಿ ಪರಿವಾರವಾದ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪೋಸ್ಟರ್ ಅಭಿಯಾನ ಆರಂಭಿಸಿದ ಬಿಜೆಪಿ

ಕೇವಲ ಕಾಂಗ್ರೆಸ್ ಮಾತ್ರ ಅಲ್ಲ, ಪರಿವಾರವಾದವನ್ನು ಅನುಸರಿಸಿಕೊಂಡು ಬರುತ್ತಿರುವ ಸಮಾಜವಾದಿ ಪಕ್ಷ, ಎನ್ ಸಿಪಿ ಮತ್ತು ಶಿವಸೇನೆಯ (ಉದ್ಧವ್ ಬಣ) ಹೆಸರುಗಳನ್ನು ಸಹ ಪೋಸ್ಟರ್ ನಲ್ಲಿ ನೋಡಬಹುದು.

ಪ್ರಾಯಶಃ ಪೋಸ್ಟರ್ ಅಭಿಯಾನ ಶುರುಮಾಡಿರುವ ಬೆಳಗಾವಿ ಗ್ರಾಮೀಣ ಮಂಡಲದ ಅಧ್ಯಕ್ಷ ಧನಂಜಯ ರಾ ಜಾಧವ್ ಎನ್ನುವವರು ತನ್ನದು ಮೋದಿ ಕುಟುಂಬ ಎಂದು ಬರೆಸಿಕೊಂಡಿದ್ದಾರೆ.

ಬೆಳಗಾವಿ: ಲೋಜಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪೋಸ್ಟರ್ ಅಭಿಯಾನಗಳು ಆರಂಭಗೊಂಡಿವೆ.

 

ಬೆಳಗಾವಿ ಇದರ ಒಂದು ನಮೂನೆಯನ್ನು ನೋಡಬಹುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮಗ ಮೃಣಾಲ್ ಹೆಬ್ಬಾಳ್ಕರ್​ ಗೆ (Mrinal Hebbalkar)ಎಐಸಿಸಿ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡುವುದು ಹೆಚ್ಚು ಕಡಿಮೆ ಖಚಿತವಾದಂತಿದೆ. ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಲಕ್ಷ್ಮಿಯವರ ಪರಿವಾರವಾದವನ್ನು (dynastic politics) ಅಣಕಿಸುವ ಪೋಸ್ಟರ್ ಗಳನ್ನು ಬೆಳಗಾವಿ ನಗರದಲ್ಲಿ ಅಂಟಿಸಲಾಗಿದೆ.

 

ಲಕ್ಷ್ಮಿ ರಾಜ್ಯ ಸಚಿವ ಸಂಪುಟದಲ್ಲಿ ಸಚಿವೆ, ಸಹೋದರ ಚನ್ನರಾಜ್ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯನಾಗಿರುವಾಗ ಸಚಿವೆಯ ಮಗನೇ ಸಂಸದನಾದರೆ ಉಳಿದ ಕಾಂಗ್ರೆಸ್ ಕಾರ್ಯಕರ್ತರು ಭಜನೆ ಮಾಡಬೇಕಾ?

 

ಎಂದು ಪೋಸ್ಟರ್ ನಲ್ಲಿ ಪ್ರಶ್ನಿಸಲಾಗಿದೆ. ಕೇವಲ ಕಾಂಗ್ರೆಸ್ ಮಾತ್ರ ಅಲ್ಲ, ಪರಿವಾರವಾದವನ್ನು ಅನುಸರಿಸಿಕೊಂಡು ಬರುತ್ತಿರುವ ಸಮಾಜವಾದಿ ಪಕ್ಷ, ಎನ್ ಸಿಪಿ ಮತ್ತು ಶಿವಸೇನೆಯ (ಉದ್ಧವ್ ಬಣ) ಹೆಸರುಗಳನ್ನು ಸಹ ಪೋಸ್ಟರ್ ನಲ್ಲಿ ನೋಡಬಹುದು. ಪ್ರಾಯಶಃ ಪೋಸ್ಟರ್ ಅಭಿಯಾನ ಶುರುಮಾಡಿರುವ ಬೆಳಗಾವಿ ಗ್ರಾಮೀಣ ಮಂಡಲದ ಅಧ್ಯಕ್ಷ ಧನಂಜಯ ರಾ ಜಾಧವ್ ಎನ್ನುವವರು ತನ್ನದು ಮೋದಿ ಕುಟುಂಬ ಎಂದು ಬರೆಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Back to top button