ಯಾರದ್ದೋ ತಪ್ಪಗೆ ಇನ್ಯಾರಿಗೋ ಶಿಕ್ಷೆ ಭ್ರಷ್ಟರನ್ನ ರಕ್ಷಿಸುತ್ತಿದ್ದಾರಾ ಹಿರಿಯ ಅಧಿಕಾರಿಗಳು..?

WhatsApp Group Join Now
Telegram Group Join Now

*ಯಾರದ್ದೋ ತಪ್ಪಗೆ ಇನ್ಯಾರಿಗೋ ಶಿಕ್ಷೆ ಭ್ರಷ್ಟರನ್ನ ರಕ್ಷಿಸುತ್ತಿದ್ದಾರಾ ಹಿರಿಯ ಅಧಿಕಾರಿಗಳು..?*

ಖಾನಾಪುರ :ತಾಲೂಕು ಘಟಕದಲ್ಲಿ ಬರುವ ಗಣೆಬೈಲ ಹತ್ತರಗುಂಜಿ ಹತ್ತಿರ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಮಾರಿಹಾಳ ಬಿದಿರಿನ ನೆಡುತೋಪಿನಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಮಾಜ ಸೇವಕ ಜ್ಯೋತಿಬಾ ಬೆಂಡಿಗೇರಿ ಸಾಕಷ್ಟು ಆರೋಪ ಮಾಡಿತ್ತಿದ್ದರೂ KFDCಯ ಹಿರಿಯ ಅಧಿಕಾರಿಗಳು ಮಾತ್ರ ಭ್ರಷ್ಟ ಅಧಿಕಾರಿಗಳನ್ನು ಬಚಾವ ಮಾಡಲು ಗುಬ್ಬಿಯ ಮೇಲೆ ಎಂಬಂತೆ ಅರಣ್ಯ ಪಾಲಕರನ್ನ ವಜಾ ಮಾಡಿ ಸಂಶಯ ಮೂಡಿಸಿದ್ದಾರೆ ಇದರಲ್ಲಿ ಹಿರಿಯ ಅಧಿಕಾರಿಗಳಿಗೂ ಪಾಲಿದೆಯಾ ಎಂದು ಸಮಾಜ ಸೆವಕ ಜ್ಯೋತಿಬಾ ಬೆಂಡಿಗೆರಿ ಆರೋಪ ಮಾಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಅಲ್ಲಿನ ಆರ್.ಎಫ್.ಓ ಶ್ರೀನಾಥ್ ಕಡೋಲ್ಕರ್ ಅವರು ಮಾತನಾಡಿದ ಆಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ವ್ಯಕ್ತಿಯೊಬ್ಬರ ಜೊತೆ ಮಾತನಾಡುವಾಗ

ತಾಲೂಕಿನ ಗಣೆಬೈಲ್ ಬಿದಿರಿನ ನೆಡತೋಪಿನಲ್ಲಿ ಚಂದ್ರಕಾಂತ ಮೇದಾರ ಸಾ.ಬಡಸ ಕೆ.ಎಚ ಎಂಬ ವ್ಯಕ್ತಿಯು ಅದಿಕಾರಿಗಳಾದ ಗಾರ್ಡ್ ಎಮ.ಎ.ಮಹೇಕರ ಹಾಗೂ ಬಿ.ಆಯ.ಪಾಟೀಲ ಅವರ ಸಹಕಾರದಿಂದ ಪ್ರತಿಬಾರಿ ಒಂದು ಅಥವಾ ಎರಡು ಸಾವಿರ ಬಿದಿರಿನ ಪಾಸ್ ಪಡೆದು ಸುಮಾರು ಏಳರಿಂದ ಎಂಟು ಸಾವಿರದವರಗೆ ಅಕ್ರಮವಾಗಿ ಬಿದಿರು ಲೂಟಿ ಮಾಡಿದ್ದನ್ನ ಸ್ವತಃ ಅವರೇ ಒಪ್ಪಿಕೊಂಡಿದ್ದು ಈ ಕುರಿತಾಗಿ ಸುದ್ದಿಯೂ ಆಗಿತ್ತು ಆದರೆ ಇದನ್ನೆಲ್ಲ ಗಮನಿಸಿಯೂ ಹಿರಿಯ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ ಅಧಿಕಾರಿಯನ್ನ ಬಿಟ್ಟು ಯಾರನ್ನೋ ಅಮಾನತುಪಡಿಸಿ ಸಂಶಯ ಮೂಡಿಸಿದ್ದಾರೆ.

 

ಅಲ್ಲದೇ ಕಳ್ಳತನ ಮಾಡುತ್ತಿರುವಾಗ ಕೆಲ ಸಮಾಜ ಸೇವಕರು ಹಾಗೂ ಪತ್ರಕರ್ತರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬಿದಿರನ್ನು ಕಡಿದು ಟ್ಯಾಕ್ಟರನಲ್ಲಿ ಹೆರುತ್ತಿದನ್ನ ಸಾಕ್ಷಿ ಸಮೇತ ಹಿಡಿದು ಆರ್.ಎಪ.ಓ ಶ್ರೀನಾಥ್ ಕಡೋಲ್ಕರ ಅವರಿಗೆ ದೂರು ಕೋಟ್ಟರೆ ಅವರು ಬರಿ 28 ಬಿದಿರು ಕಡದಿದ್ದಾರೆಂದು ರೂ.5000 ದಂಡ ಹಾಕಿ ಲೂಟಿಗಾರನಿಗೆ ಸಹಕರಿಸಿ ಅರಣ್ಯ ರಕ್ಷಣೆ ಕಾಯಿದೆ ಉಲ್ಲಂಘಿಸಿದ್ದಾರೆ ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೆ ಮಾಹಿತಿ ಪೂರೈಸದೆ ಆ ಕಾಯಿದೆಯನ್ನು ಕೂಡ ಉಲ್ಲಂಘಿಸಿದ್ದಾರೆ.

ಕಾರಣ ಮಾಹಿತಿ ಹಕ್ಕು ಹೋರಾಟಗಾರ ಸಮಾಜ ಸೇವಕರಾದ ಜ್ಯೋತಿಬಾ ಬೆಂಡಿಗೇರಿಯವರು ಇಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಶಾಖೆ ಧಾರವಾಡ ಇವರಿಗೆ ಸರ್ಕಾರದ ಬೊಕ್ಕಸಕ್ಕೆ ಕೊಟ್ಯಾಂತರ ರೂಪಾಯಿ ನಷ್ಟ ಮಾಡಿ ಲೂಟಿ ಹೊಡೆದ ಚಂದ್ರಕಾಂತ ಮೇದಾರ ಹಾಗೂ ಆತನಿಗೆ ಸಹಕರಿಸಿದ ಅದಿಕಾರಿಗಳಾದ ಎಮ.ಎ.ಮಹೇಕರ ಬಿ.ಆಯ.ಪಾಟೀಲ ಹಾಗೂ ಶ್ರೀನಾಥ ಕಡೋಲ್ಕರ ಇವರ ಆಸ್ತಿಗಳನ್ನು ಜಪ್ತಿ ಮಾಡಿ ನಷ್ಟ ಭರಿರಿಸಿಕೊಳ್ಳಬೇಕು ವಿಳಂಭವಾದರೆ ಉಗ್ರವಾದ ಹೋರಾಟ ಮಾಡುವುದಾಗಿ ಆಗ್ರಹಿಸಿ ಸಂಭಂದ ಪಟ್ಟ ಸಾಕ್ಷಿಗಳನ್ನು ಪೂರೈಸಿ ದೂರು ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Back to top button