ನಾವಗೆ ಗ್ರಾಮದಲ್ಲಿ ರಾತ್ರೋರಾತ್ರಿ ದಾಂಧಲೆ : ಟಾರ್ಗೆಟ್ ಮಾಡಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂ ಗೊಳಿಸಿದ ಘಟನೆ

WhatsApp Group Join Now
Telegram Group Join Now

ಬೆಳಗಾವಿ – ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ನಿನ್ನೆ ರಾತ್ರಿ ಲವ್ ಪ್ರಕರಣಕ್ಕೆ ಸಂಭದಿಸಿದಂತೆ ಗಲಾಟೆ ನಡೆದಿದೆ. ಲವ್ ವಿಚಾರಲ್ಲಿ ಬುದ್ದಿಮಾತು ಹೇಳಿದ ಪಂಚರನ್ನೇ ಟಾರ್ಗೆಟ್ ಮಾಡಿ ಅವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂ ಗೊಳಿಸಿದ ಘಟನೆ ನಡೆದಿದೆ.

ಸುಮಾರು ಮೂವತ್ತಕ್ಕೂ ಹೆಚ್ಚು ಜನ ಯುವಕರು ಮುಸುಕು ಹಾಕಿ ತಲ್ವಾರ್ ತ್ತು ರಾಡ್ ಹಿಡಿದುಕೊಂಡು ನಾವಗೆ ಗ್ರಾಮದ ಪಂಚರ ಮನೆಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಮೂರು ತಂಡಗಳನ್ನು ರಚಿಸಿ ಅಟ್ಯಾಕ್ ಮಾಡಿದ ಮುಸುಕುಧಾರಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಹಿತ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಗಲಾಟೆಗೆ ಕಾರಣ ಏನಂದ್ರೆ, ನಾವಗೆ ಗ್ರಾಮದ ಕಾಲೇಜು ಹುಡುಗ, ಮತ್ತು ಬಾದರವಾಡಿ ಗ್ರಾಮದ ಹುಡುಗ ಇಬ್ಬರೂ ಸಹ ಪಕ್ಕದ ಊರಿನ ಹೈಸ್ಕೂಲ್ ಹುಡುಗಿಯನ್ನು ಲವ್ ಮಾಡ್ತಾ ಇದ್ರು ಮೊನ್ನೆ ಹೊಸ ವರ್ಷಾಚರಣೆಯ ದಿನ ಒಬ್ಬ ಲವರ್ ಹುಡುಗಿಯ ಜೊತೆ ಪೋಟೋ ತೆಗೆಸಿಕೊಂಡು ವ್ಯಾಟ್ಸಪ್ ಸ್ಟೇಟಸ್ ಇಟ್ಟ ಮೇಲೆ ನಾವಗೆ ಮತ್ತು ಬಾದರವಾಡಿ ಗ್ರಾಮದ ಇಬ್ಬರ ಹುಡುಗರ ನಡುವೆ ಜಗಳ ಶುರುವಾಗಿದೆ. ಈ ವಿಚಾರ ನಾವಗೆ ಗ್ರಾಮದ ಹಿರಿಯರ ಗಮನಕ್ಕೆ ಬಂದ ಬಳಿಕ ನಾವಗೆ ಗ್ರಾಮದ ಹಿರಿಯರು ಬಾದರವಾಡಿ ಗ್ರಾಮದ ಹುಡುಗರನ್ನು ಕರೆಸಿ ಬುದ್ದಿವಾದ ಹೇಳಿದ್ದಾರೆ ಜೊತೆಗೆ ಪೋಲೀಸರ ಕಡೆಯಿಂದಲೂ ಬಾದರವಾಡಿ ಗ್ರಾಮದ ಹುಡುಗರಿಗೆ ವಾರ್ನಿಂಗ್ ಮಾಡಿಸಿದ್ದಾರೆ.

ಇದರಿಂದ ಕೆರಳಿದ ಬಾದರವಾಡಿ ಗ್ರಾಮದ ಹುಡುಗರು ನಾವಗೆ ಗ್ರಾಮದ ಹಿರಿಯನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ 8-00 ಗಂಟೆಗೆ ಸುಮಾರು ಮೂವತ್ತಕ್ಕೂ ಹೆಚ್ವು ಜನ ಕಿಡಗೇಡಿಗಳು ನಾವಗೆ ಗ್ರಾಮಕ್ಕೆ ನುಗ್ಗಿ ಹಿರಿಯರ ಮನೆಗಳ ಮೇಲೆ ಕಲ್ಲು ತೂರಿ ,ಕಿಟಕಿ ಗಾಜುಗಳನ್ನು ಒಡೆದು ಕಾರು ಮತ್ತು ಬೈಕ್ ಗಳನ್ನು ಜಖಂ ಗೊಳಿಸಿ ಪರಾರಿಯಾಗಿದ್ದಾರೆ.

ನಾವಗೆ ಗ್ರಾಮದ ಹುಡುಗ, ಮತ್ತು ಬಾದರವಾಡಿ ಗ್ರಾಮದ ಹುಡುಗ ಇಬ್ಬರೂ ಸಹ ಪಕ್ಕದ ಊರಿನ ಹೈಸ್ಕೂಲ್ ಹುಡುಗಿಯನ್ನು ಲವ್ ಮಾಡಿದ್ದೆ ಈ ದಾಂಧಲೆಗೆ ಕಾರಣವಾಗಿದೆ. ಬುದ್ದಿಮಾತು ಹೇಳಿದ ನಾವಗೆ ಗ್ರಾಮದ ಹಿರಿಯರು ಈಗ ಟಾರ್ಗೆ ಟ್ ಆಗಿದ್ದಾರೆ.

ಒಟ್ಟಾರೆ ಲವ್ ಕ್ರಾಸ್ಸೀಂಗ್ ಆಗಿದೆ ಬುದ್ದಿಮಾತು ಹೇಳಿದ ಹಿರಿಯರಿಗೆ ಡ್ಯಾಶೀಂಗ್ ಮಾಡಿರುವ ಘಟನೆ ನಾವಗೆ ಗ್ರಾಮದಲ್ಲಿ ನಡೆದಿದೆ. ಇದು ಪಸ್ಟ್ ವರ್ಷನ್ ಸ್ಟೋರಿ, ಅಟ್ಯಾಕ್ ಮಾಡಿದ ಹುಡುಗರು ಪತ್ತೆಯಾದ ಮೇಲೆ ಅವರ ವರ್ಷನ್ ಅವರು ಹೇಳುವ ಸ್ಟೋರಿ ಏನು ಅನ್ನೋದು  ಗೊತ್ತಾಗಲಿದೆ.

WhatsApp Group Join Now
Telegram Group Join Now
Back to top button