ಆನ್‌ಲೈನ್‌ಲ್ಲಿ ಎಮ್ಮೆ ಆರ್ಡರ್‌ ಮಾಡಿದ ವ್ಯಾಪಾರಿ; ಮುಂದೇನಾಯ್ತು ಅಂತ ತಿಳಿದ್ರೆ ಶಾಕ್‌ ಆಗ್ತೀರಾ.!

WhatsApp Group Join Now
Telegram Group Join Now

ದು ಆನ್‌ಲೈನ್ ಯುಗ. ದಿನಬಳಕೆ ವಸ್ತುಗಳಿಂದ ಹಿಡಿದು ಎಲ್ಲವೂ ಆನ್‌ಲೈನ್‌ನಲ್ಲೇ ಸಿಗುತ್ತವೆ. ಕೆಲವೊಮ್ಮೆ ಆನ್‌ಲೈನ್‌ನಲ್ಲೂ ವಂಚನೆಗಳು ನಡೆಯುತ್ತವೆ. ದುಬಾರಿ ವಸ್ತುಗಳ ಬದಲು ಬೇಡದ ವಸ್ತುಗಳನ್ನು ಕಂಪನಿಗಳು ನೀಡಿದ ಅನೇಕ ಉದಾಹರಣೆಗಳಿವೆ. ಬಟ್ಟೆ-ಬರೆ, ಆಭರಣ ಇನ್ನಿತರ ಸಾಮಗ್ರಿಗಳನ್ನೆಲ್ಲ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುವುದು ಕಾಮನ್‌.

ಆದರೆ ಉತ್ತರಪ್ರದೇಶದಲ್ಲಿ ಹಾಲಿನ ವ್ಯಾಪಾರಿಯೊಬ್ಬ ಎಮ್ಮೆಯನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ.

ರಾಯ್ ಬರೇಲಿಯ ರೈತ ಸುನಿಲ್ ಕುಮಾರ್ ಆನ್‌ಲೈನ್‌ನಲ್ಲಿ ಎಮ್ಮೆಗಳ ವಿವರಗಳನ್ನು ಗಮನಿಸಿದ್ರು. ಕಿಸಾನ್ ಭಯ್ಯಾ ಡೈರಿ ಫಾರ್ಮ್‌ನಿಂದ ಎಮ್ಮೆಯೊಂದನ್ನು ಆರ್ಡರ್ ಮಾಡಿದ್ದರು. ಜೈಪುರ ಮೂಲದ ಉದ್ಯಮಿ ಶುಭಂ ಎಂಬಾತ ಎಮ್ಮೆಯ ವಿಡಿಯೋವನ್ನು ಸಹ ಸುನಿಲ್‌ಗೆ ಕಳುಹಿಸಿದ್ದಾರೆ. ಉತ್ತಮ ತಳಿಯ ಎಮ್ಮೆ ಇದಾಗಿದ್ದು, ಪ್ರತಿದಿನ 18 ಲೀಟರ್ ಹಾಲು ಕೊಡುತ್ತದೆ ಎಂದೆಲ್ಲ ನಂಬಿಸಿದ್ದ.

ಎಮ್ಮೆಯ ಬೆಲೆ 55,000 ರೂಪಾಯಿ ಎಂದು ತಿಳಿಸಿದ ಶುಭಂ, 10,000 ರೂಪಾಯಿ ಮುಂಗಡ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಎಮ್ಮೆ ಖರೀದಿಸಲು ನಿರ್ಧರಿಸಿದ ಹಾಲಿನ ವ್ಯಾಪಾರಿ ಸುನೀಲ್‌ ತಕ್ಷಣ ಹಣ ವರ್ಗಾಯಿಸಿದರು.

ಆದರೆ ಮರುದಿನ ಎಮ್ಮೆಯನ್ನು ತಲುಪಿಸಲೇ ಇಲ್ಲ. ಕರೆ ಮಾಡಿ ಕೇಳಿದಾಗ 25,000 ರೂಪಾಯಿ ವರ್ಗಾಯಿಸುವಂತೆ ಹೇಳಿದ್ದಾರೆ. ಆದರೆ ಅಪಾಯವನ್ನು ಅರಿತ ಸುನೀಲ್‌ ಮತ್ತೆ ಹಣ ಪಾವತಿಸಲಿಲ್ಲ. ಸದ್ಯ ಸುನೀಲ್‌ ನಂಬರ್‌ ಅನ್ನೇ ಬ್ಲಾಕ್‌ ಮಾಡಿರೋ ಕಂಪನಿ, ಕರೆಗೆ ಸ್ಪಂದಿಸ್ತಾ ಇಲ್ಲ. ತಾನು ಮೋಸ ಹೋಗಿದ್ದೇನೆ ಅಂತಾ ಸುನೀಲ್‌ ಹೇಳ್ತಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

WhatsApp Group Join Now
Telegram Group Join Now
Back to top button