ವಿಪರೀತ ಚಳಿಯಿಂದ ನಡುಗಿದ ಕುಂದಾನಗರಿ ಜನತೆ ಸ್ವೇಟರ್ ಅಂಗಡಿಗಳತ್ತ ಮುಖ ಮಾಡಿದ ಜನತೆ:
ವಿಪರೀತ ಚಳಿಯಿಂದ ಮುಂಜಾನೆ ವಾಯು ವಿಹಾರಕ್ಕೆ ಹೋಗದ ಜನ-ಎಲ್ಲಡೆ ಮಂಜು ಮುಸುಕಿದ ವಾತಾವರಣ
ಬೆಳಗಾವಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಉಷ್ಣಾಂಶ ಕುಸಿದಿದ್ದು, ಮೈಕೊರೆಯುವ ಚಳಿಗೆ ಸಾರ್ವಜನಿಕರು ನಡುಗುತ್ತಿದ್ದಾರೆ.
ಹೌದು… ಕುಂದಾನಗರಿಯಲ್ಲಿ ನಿತ್ಯ ವಿಹಾರಕ್ಕೆಂದು ತೆರಳುವ ಒಂದಿಷ್ಟು ಜನರು ದಿನನಿತ್ಯ ಹೆಚ್ಚುತ್ತಿರುವ ಕೊರೆಯುವ ಚಳಿಯಿಂದ ಬಚಾವ್ ಆಗಲು ನಿತ್ಯ ಬೆಳಗ್ಗೆ ಮೈತುಂಬ ಬೆಚ್ಚನೆ ಬಟ್ಟೆ ಧರಸಿ ತೆರಳುತ್ತಿದ್ದಾರೆ. ಬೆಳಗಿನ ಜಾವ ಹೊಲಗಳಿಗೆ ಹಾಗೂ ಅಂಗಡಿ ಬಾಗಿಲು ತೆರೆಯಲು ಹೋಗುವ ಮಾಲೀಕರು ಅಲ್ಲಲ್ಲಿ ಗುಂಪು ಗುಂಪಾಗಿ ಬೆಂಕಿ ಹಚ್ಚಿ ಚಳಿ ಕಾಯಿಸುತ್ತಿರುವ ಜನ ನೋಡಿ ಒಂದು ಚೂರು ತಾವು ದೇಹ ಬೆಚ್ಚಗಾಗಿಸೋಣ ಎಂದು ಅವರ ಮಧ್ಯೆ ಒಂದು ಘಳಿಗೆ ನಿಂತು ಮೈ ಬೆಚ್ಚಗಾಗಿಸಿಕೊಳ್ಳುತ್ತಿರುವ ದೃಶ್ಯ ನಗರದಲ್ಲಿ ಅಲ್ಲಲ್ಲಿ ಕಂಡು ಬರುತ್ತಿದೆ.
ಸ್ವೇಟರ್ ಅಂಗಡಿಗಳತ್ತ ಮುಖ ಮಾಡಿದ ಜನತೆ: ವಿಪರೀತ ನದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗಡಗಡ ಚಳಿಯಿಂದ ಸುರಕ್ಷತವಾಗಿರಲೆಂದು ನಿತ್ಯ ಬೆಳಗಿನ ಜಾವ ಕಲೆಸಕ್ಕೆ ತೆರಳುವ ಜನ ಅಂಗಡಿಗಳಲ್ಲಿ ತಂದಿರಿಸಿದ ನೂತನ ಸ್ವೆಟರ್ ಹಾಗೂ ಜಾಕಿಟ್, ಹ್ಯಾಂಡ್ ಗ್ಲೌಸ್ ಹಾಗೂ ಮಂಕಿ ಕ್ಯಾಪಗಳನ್ನು ಖರೀದಿಸಲು ಖಡೇಬಜಾರ, ಕಿರ್ಲೋಸ್ಕರ್ ರೋಡ್, ಗಣಪತಿ ಗಲ್ಲಿಯಲ್ಲಿನ ಅಂಗಡಿಗಳಿಗೆ ತೆರಳುತ್ತಿದ್ದಾರೆ.
ರೈತರಿಗೆ ತೀವ್ರ ಸಂಕಷ್ಟ: ಈ ಬಾರಿಯು ಕಾರ್ಖಾನೆಗೆ ಕಬ್ಬು ಕಳುಹಿಸುವುದು ರೈತರಿಗೆ ಒಂದು ರೀತಿ ಕಬ್ಬಿನದ ಕಡೆಯಾದರೆ ಇನ್ನೊಂದಡೆ ಕೊರೆಯುವ ಚಳಿಯಿಂದ ರೈತರಿಗೆ ನಿತ್ಯ ತೀವ್ರ ಬೇಸರ ತರಿಸುತ್ತಿದೆ. ನಿತ್ಯ ನಡುಗುವ ಚಳಿಯಲ್ಲಿ ಕಬ್ಬು ಕಟಾವು ಮಾಡಿ ಲಾರಿಗಳಿಗೆ ಲೋಡ್ ಮಾಡುವುದು ಒಂದು ರೀತಿ ಸವಾಲಾಗಿ ಪರಿಣಮಿಸಿದೆ. ಕೊರೆಯುವ ಚಳಿಯಲ್ಲಿ ಕಬ್ಬು ಕಟಾವು ಮಾಡುವ ಹುತ್ತಿಗೆ ಜೀವನವೇ ಬೇಡ ಎಂಬಂತೆ ಭಾಸವಾಗುತ್ತಿದೆ. ಎಂದು ಒಂದಿಷ್ಟು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲಲ್ಲಿ ರೈತರು ತಮ್ಮ ಗದ್ದೆಗಳಲ್ಲಿಯೇ ಹುಲ್ಲನ್ನು ತಂದು ಬೆಂಕಿ ಮಾಡಿ ತಮ್ಮ ದೇಹವನ್ನು ಬೆಚ್ಚಗಾಗಿಸಿಕೊಳ್ಳುತ್ತಿದ್ದಾರೆ.
ಮಕ್ಕಳಿಗೆ ಹೆಚ್ಚು ಅಪಾಯ: ಅದರಲ್ಲೂ 5 ವರ್ಷದೊಳಗಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಸೋಂಕು ತಗುಲುವ ಅಪಾಯ ಹೆಚ್ಚು ಎಂಬುದು ವೈದ್ಯರ ಅಭಿಪ್ರಾಯ. ಹೆಚ್ಚಿದ ಹೊರ ರೋಗಿಗಳ ಸಂಖ್ಯೆ ಚಳಿಯ ಪ್ರಕೋಪಕ್ಕೆ ಈಗಾಗಲೇ ಶೀತ ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆಗಳಲ್ಲಿಹೊರ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಚಿಕ್ಕಮಕ್ಕಳ ವಿಭಾಗದಲ್ಲಿ ಶೀತ, ಜ್ವರದಿಂದ ಬಳಲುವ ಮಕ್ಕಳು ಚಿಕಿತ್ಸೆಗೆ ಬರುವ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯುಮೋನಿಯಾ ಅಪಾಯ ಶ್ವಾಸಕೋಶಕ್ಕೆ ಸೋಂಕು ತಗುಲುವುದರಿಂದ ನ್ಯುಮೋನಿಯಾ ಉಂಟಾಗುತ್ತದೆ. ಚಳಿಗಾಲದಲ್ಲಿ ನ್ಯುಮೋನಿಯಾ ರೋಗ ಉಲ್ಬಣಿಸುವ ಪ್ರಮಾಣ ಹೆಚ್ಚಾಗುತ್ತದೆ. ಶಿಶುಗಳು, 5 ವರ್ಷದೊಳಗಿನ ಮಕ್ಕಳು, 65-70 ವರ್ಷ ಮೇಲ್ಪಟ್ಟವರಲ್ಲಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ನ್ಯಮೋನಿಯಾ ಸೋಂಕಿನ ಅಪಾಯ ಹೆಚ್ಚು ಎನ್ನುತ್ತಾರೆ ವೈದ್ಯರು.
ಕಾಫಿ ಶಾಪಗಳಿಗೆ ಭರ್ಜರಿ ವ್ಯಾಪಾರ: ಕೊರೆಯುವ ಚಳಿಯಿಂದ ಬಚಾವ್ ಆಗಲು ಬೆಳಗ್ಗೆ ವಿಹಾರಕ್ಕೆಂದು ತೆರಳಿದ ಜನರು ನಗರದಲ್ಲಿರುವ ಕಾಫಿ ಶಾಪ್ ಗಳತ್ತ ಮುಖ ಮಾಡಿ ಬೆಚ್ಚನೆಯ ಕಾಫಿ ಹಾಗೂ ಟೀ ಸೇವಿಸಿ ದೇಹ ಬೆಚ್ಚಗೆ ಮಾಡಿಕೊಳ್ಳುತ್ತಿದ್ದಾರೆ. ಹೊಟೇಲ್ ಅಂಗಡಿ ಮಾಲೀಕರಿಗೆ ಇದು ಒಂದು ರೀತಿ ಒಳ್ಳೆಯ ಸೀಜನ ಆಗಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳಲು ಚಳಿರಾಯ ನೆರವಾಗಿದ್ದು, ನಗರದ ಇತರರಿಗೆ ಮಾತ್ರ ಚಳಿರಾಯನಿಂದ ನಿತ್ಯ ಸಂಕಟವಾಗಿ ಪರಿಣಮಿಸಿದೆ.