ಜೀವ ಜಲ ಸಿಗದೆ ಕಂಗಾಲಾದ ಬೆಳಗಾವಿ ನಗರ ಈ ಕುರಿತು ಸ್ವೇಷಲ್ ರಿಪೋರ್ಟ್ ಇಲ್ಲಿದೆ.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ವರು ಶಾಸಕರು, ಇಬ್ಬರು ಸಂಸದರು, ಓರ್ವ ವಿಧಾನ ಪರಿಷತ್ ಸದಸ್ಯ ಹಾಗೂ 58 ನಗರ ಸೇವಕರು, ಮೇಲಾಗಿ ಆಯುಕ್ತರು ಹಾಗೂ ಆಡಳಿತಾಧಿಕಾರಿಯೇ ಆಗಿರುವ ಜಿಲ್ಲಾಧಿಕಾರಿಗಳೇ ಇದ್ದರೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ.ಈ ಕುರಿತು ಸ್ವೇಷಲ್ ರಿಪೋರ್ಟ್ ಇಲ್ಲಿದೆ.
ಕುಂದಾನಗರಿ ಬೆಳಗಾವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ , ಕುಡಿಯುವ ನೀರು ಅವಲಂಬಿತ ಉದ್ಯಮಗಳಿಗೂ ಪೆಟ್ಟು ಬೀಳುತ್ತಿದೆ , ಮಹಾನಗರ ಪಾಲಿಕೆಯಲ್ಲಿ ಸದ್ಯ ಮನಸ್ಸು ಮಾಡಿದರೆ ಆಡಳಿತವನ್ನೇ ಬದಲಾಯಿಸುವಂಥ ಶಕ್ತಿ ಇರುವ ಜನಪ್ರತಿನಿಧಿಗಳು ಅಧಿಕಾರದಲ್ಲಿದ್ದಾರೆ. ಅಂತಹ ಜನ ಪ್ರತಿನಿಧಿಗಳನ್ನು ಬಳಸಿಕೊಂಡು ಜನಪರ ವ್ಯವಸ್ಥೆ ಜಾರಿ ಮಾಡುವ ಎಲ್ಲ ಅವಕಾಶಗಳು ಅಧಿಕಾರಿಗಳ ಮುಂದಿದ್ದರೂ ನಗರದ ಮೂಲಭೂತ ಸಮಸ್ಯೆಗಳು ಕಡಿಮೆಯಾಗುವ ಬದಲಿಗೆ ಹೆಚ್ಚುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ.
ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ.
ಕುಡಿಯುವ ನೀರು ಅವಲಂಬಿತ ಉದ್ಯಮಗಳಿಗೂ ಪೆಟ್ಟು ಬೀಳುತ್ತಿದೆ.
ಹಿಡಕಲ್ ಜಲಾಶಯದಲ್ಲೂ ನಗರಕ್ಕಾಗಿ 1 ಟಿಎಂಸಿ ನೀರು ಮೀಸಲಿಡಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿ ನಗರಕ್ಕೆ ಕುಡಿಯುವ ಉದ್ದೇಶಕ್ಕೆ ನೀರಿನ ಕೊರತೆಯೇ ಇಲ್ಲ. ವರ್ಷ ಪೂರ್ತಿ ಪೂರೈಸಲು ಬೇಕಾದಷ್ಟು ನೀರು ಜಲಾಶಯಗಳ ಸಂಗ್ರಹಣೆಯಲ್ಲಿದೆ. ರಕಸಕೊಪ್ಪ ಜಲಾಶಯದ ಜತೆಗೆ ಹಿಡಕಲ್ ಜಲಾಶಯದಲ್ಲೂ ನಗರಕ್ಕಾಗಿ 1 ಟಿಎಂಸಿ ನೀರು ಮೀಸಲಿಡಲಾಗಿದೆ. ಅಲ್ಲದೆ, 58 ವಾರ್ಡುಗಳ ಪೈಕಿ 10 ವಾರ್ಡುಗಳಲ್ಲಿ ನಿರಂತರ ನೀರು ಸೌಲಭ್ಯ ಕೂಡ ನೀಡಲಾಗಿದೆ. ಹಾಗಿದ್ದರೂ ಸದ್ಯ ಕುಡಿಯುವ ನೀರಿಗೆ ನಗರದ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕುಡಿಯುವ ನೀರು ಅವಲಂಬಿತ ಉದ್ಯಮಗಳಿಗೂ ಪೆಟ್ಟು ಬೀಳುತ್ತಿದೆ . ಬಹುತೇಕ ಬಡಾವಣೆಗಳಲ್ಲಿ ಸಾರ್ವಜನಿಕರು ಟ್ಯಾಂಕರ್ ಗಳ ಮೂಲಕ ನೀರು ಪಡೆಯುವ ದೃಶ್ಯ ಸಾಮಾನ್ಯವಾಗಿದೆ.
ಬೆಳಗಾವಿ ನಗರದಲ್ಲಿ ಒಟ್ಟು 73 ಸಾವಿರ ನಳ ಸಂಪರ್ಕವಿದ್ದು, ಪ್ರತಿ ದಿನ ಸುಮಾರು 135 ಎಂ ಎಲ್ ಡಿ ನೀರಿನ ಅಗತ್ಯವಿದೆ. ಇದರಲ್ಲಿ ಹಿಡಕಲ್ ಡ್ಯಾಂನಿಂದ ಪ್ರತಿ ದಿನ 82 ಎಂ ಎಲ್ ಡಿ ಮತ್ತು ರಕ್ಕಸಕೊಪ್ಪ ಜಲಾಶಯದಿಂದ ಸುಮಾರು 53 ಎಂಎಲ್ ಡಿ ನೀರು ಪೂರೈಕೆಯಾಗಬೇಕು. ಆದರೆ ರಕ್ಕಸಕೊಪ್ಪ ಜಲಾಶಯದ ಮಟ್ಟ ಈಗಾಗಲೇ 5 ಅಡಿ ಕಡಿಮೆಯಾಗಿದೆ..ಈ ಬಾರಿ 2455.40 ಅಡಿಗೆ ಇಳಿದಿದೆ. ಹಿನ್ನೆಲೆಯಲ್ಲಿ ರಕ್ಕಸಕೊಪ್ಪ ಜಲಾಶಯದಿಂದ ನೀರು ಸರಬರಾಜಿನ ಪ್ರಮಾಣವನ್ನು ಪ್ರತಿ ದಿನ 27-28 ಎಂಎಲ್ ಡಿ ಗೆ ಇಳಿಕೆ ಮಾಡಲಾಗಿದೆ. ಶೇ.50 ರಷ್ಟು ನೀರು ಪೂರೈಕೆ ಕಡಿಮೆ ಮಾಡಿರುವುದು ನಗರದಲ್ಲಿ ನೀರಿನ ಅಭಾವ ಉಂಟಾಗಲು ಕಾರಣ.ಎನ್ನಬಹುದು .
ಒಟ್ಟಿನಲ್ಲಿ ಜನ ಪ್ರತಿನಿಧಿಗಳು ಜನವೆರಿ ತಿಂಗಳಲ್ಲಿ ಎಚ್ಚೇತುಕೊಂಡ ,ನೀರಿನ ಸಮಸ್ಯೆ ಬಗೆ ಗಮನ ಹರಿಸಬೇಕು ಇಲ್ಲಿದ್ದರೆ ಬೇಸಿಗೆ ಕಾಲ ಏಪ್ರಿಲ್ – ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ವಿದೆ.