South Western Railway: ವಿವಿಧ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಸಮಯ ಬದಲು, ಹೊಸ ವೇಳಾಪಟ್ಟಿ
ಹುಬ್ಬಳ್ಳಿ, ಜುಲೈ 09: ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿನ ವಿವಿಧ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಸಮಯವನ್ನು ಬದಲಾಯಿಸಲಾಗಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಈ ಕುರಿತು ಅವರು ಸೋಮವಾರ ಮಾಹಿತಿ ನೀಡಿದ್ದಾರೆ. ಜುಲೈ 15 ರಿಂದ ಎಸ್ಎಸ್ಎಸ್ ಹುಬ್ಬಳ್ಳಿ- ಸೊಲ್ಲಾಪುರ ಡೈಲಿ ಪ್ಯಾಸೆಂಜರ್ ರೈಲು, ಎಸ್ಎಸ್ಎಸ್ ಹುಬ್ಬಳ್ಳಿ – ನರಸಾಪುರ ಅಮರಾವತಿ ಡೈಲಿ ಎಕ್ಸ್ಪ್ರೆಸ್, ದಾದರ – ಪುದುಚೆರಿ ಟ್ರೈ ವೀಕ್ಲಿ ಎಕ್ಸ್ ಪ್ರೆಸ್, 16 ರಿಂದ ದಾದರ – ತಿರುನೆಲ್ವೇಲಿ ಟ್ರೈ ವೀಕ್ಲಿ ಎಕ್ಸ್ಪ್ರೆಸ್, ಗಾಂಧಿಧಾಮ- ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸ್ಪ್ರೆಸ್, 18 ರಿಂದ ದಾದರ – ಮೈಸೂರು ಶರಾವತಿ ವೀಕ್ಲಿ ಎಕ್ಸ್ಪ್ರೆಸ್, ಜೋಧಪುರ- ಕೆಎಸ್ ಆರ್ ಬೈ ವೀಕ್ಲಿ ಎಕ್ಸ್ಪ್ರೆಸ್, 19 ರಿಂದ ಅಜಮೇರ- ಮೈಸೂರು ಬೈ ವೀಕ್ಲಿ ಎಕ್ಸ್ಪ್ರೆಸ್, 20 ರಿಂದ ಎಸ್ಎಸ್ಎಸ್ ಹುಬ್ಬಳ್ಳಿ – ಯಶವಂತಪುರ ವೀಕ್ಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳು ಬದಲಾದ ಸಮಯದೊಂದಿಗೆ ನಿಲುಗಡೆಗೊಳ್ಳಲಿವೆ.
ಎಸ್ಎಸ್ಎಸ್ ಹುಬ್ಬಳ್ಳಿ- ಸೊಲ್ಲಾಪುರ ಡೈಲಿ ಪ್ಯಾಸೆಂಜರ್ ರೈಲು ಮಧ್ಯಾಹ್ನ 1.15ಕ್ಕೆ ಹೊರಟು, ಕುಸುಗಲ್ಲ ನಿಲ್ದಾಣದಲ್ಲಿ 1.25/1.26ಕ್ಕೆ, ಹೆಬಸೂರ ನಿಲ್ದಾಣದಲ್ಲಿ 1.34/1.35ಕ್ಕೆ, ಶಿಸವಿನಹಳ್ಳಿ ನಿಲ್ದಾಣದಲ್ಲಿ 1.39/1.40ಕ್ಕೆ, ಅಣ್ಣಿಗೇರಿ ನಿಲ್ದಾಣದಲ್ಲಿ 1.53/1.54, 2 2.03/2.04, 2.25/2.40 ನಿಲುಗಡೆಗೊಳ್ಳಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ – ನರಸಾಪುರ – ಅಮರಾವತಿ ಡೈಲಿ ಎಕ್ಸ್ ಪ್ರೆಸ್ ರೈಲು ಮಧ್ಯಾಹ್ನ 1.20ಕ್ಕೆ ಹೊರಟು, ಅಣ್ಣಿಗೇರಿಯಲ್ಲಿ 2.34/2.36, 22 2.56/2.57, 3.15/3.25 ಗಂಟೆಗೆ, ತೋರಣಗಲ್ಲುನಲ್ಲಿ 3.57/3.59ಕ್ಕೆ ನಿಲುಗಡೆಯಾಗಲಿದೆ ಎಂದರು.
ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಲ್ಲಿ ದಾದರ-ಪುದುಚೆರಿ ಟ್ರೈ ವೀಕ್ಲಿ ಎಕ್ಸ್ಪ್ರೆಸ್, ದಾದರ- ತಿರುನೆಲ್ವೇಲಿ ಟ್ರೈ ವೀಕ್ಲಿ ಎಕ್ಸ್ಪ್ರೆಸ್, ದಾದರ- ಮೈಸೂರು ಶರಾವತಿ ವೀಕ್ಲಿ ಎಕ್ಸ್ಪ್ರೆಸ್ ರೈಲುಗಳು ಮಧ್ಯಾಹ್ನ 12.05/12.15ಕ್ಕೆ, ಅಜಮೇರ- ಮೈಸೂರು ಬೈ ವೀಕ್ಲಿ ಎಕ್ಸ್ಪ್ರೆಸ್, ಜೋಧಪುರ-ಕೆಎಸ್ಆರ್ ಬೆಂಗಳೂರು ಬೈ ವೀಕ್ಲಿ ಎಕ್ಸ್ಪ್ರೆಸ್, ಗಾಂಧಿಧಾಮ – ಕೆಎಸ್ಆರ್ ಬೆಂಗಳೂರು ವೀಕ್ಲಿ ಎಕ್ಸ್ಪ್ರೆಸ್ ರೈಲು 2/2.15ಕ್ಕೆ, ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ರೈಲುಗಳು ಬೆಳಿಗ್ಗೆ 11ಕ್ಕೆ ನಿಲುಗಡೆಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.