ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ! ಇಲ್ಲಿದೆ ಸಂಪೂರ್ಣ ವಿವರ
ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಏಪ್ರಿಲ್ ಒಂದನೇ ತಾರೀಖಿನಿಂದ ಅಂದರೆ ಇದೇ ವರ್ಷ ಏಪ್ರಿಲ್ ಒಂದನೇ ತಾರೀಖಿನಿಂದ ಹೊಸ ಎಪಿಎಲ್ ಮತ್ತು ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾದಂತ ವಿವರ ಇಲ್ಲಿದೆ ನೋಡಿ ಲೇಖನವನ್ನು ಕೊನೆಯವರೆಗೂ ಓದಿ.
ಸದ್ಯಕ್ಕೆ ರಾಜ್ಯದ ಜನರು ಹೊಸ ರೇಷನ್ ಕಾರ್ಡ್(Ration Card)ಗಾಗಿ ಅರ್ಜಿ ಸಲ್ಲಿಸಿ, ಜಾತಕ ಪಕ್ಷಿಯಂತೆ ಕಾರ್ಡ್ ನೀಡುವುದನ್ನೇ ಜನ ಕಾಯುತ್ತಿದ್ದಾರೆ ಎಂದೇ ಹೇಳಬಹುದು. ಇನ್ನೂ ಕೆಲವರು ಹೊಸ ರೇಷನ್ ಕಾರ್ಡ್(New Ration Card)ಗೆ ಅರ್ಜಿ ಸಲ್ಲಿಸೋದಕ್ಕೆ ಕಾಯುತ್ತಿದ್ದಾರೆ ಎಂದು ಕೂಡ ಹೇಳಬಹುದು. ಇವರಿಗೆ ಗುಡ್ ನ್ಯೂಸ್ ಎನ್ನುವಂತೆ ಏಪ್ರಿಲ್ 01 ರಿಂದ ಹೊಸ BPL, APL ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ ಆರಂಭಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಇದರ ಕುರಿತಂತೆ ಆಹಾರ ಸಚಿವ K.H ಮುನಿಯಪ್ಪ ಅವರು ಮಾಹಿತಿ ಹಂಚಿಕೊಂಡಿದ್ದಾರೆ, ಮಾರ್ಚ್.31ನೆ ತಾರೀಖಿನ ಒಳಗಾಗಿ 2.95 ಲಕ್ಷ ಹೊಸ ಆದ್ಯತಾ ಪಡಿತರ ಚೀಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಹೇಳಿದರು. ಏಪ್ರಿಲ್.1ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ ಸಚಿವರು.
ಹೊಸ ಆದ್ಯತಾ ಪಡಿತರ ಚೀಟಿ(Ration Card)ಯನ್ನು ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳನ್ನು ಇದೇ ಮಾರ್ಚ್ 31ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಸೂಚನೆ ನೀಡಿದ್ದಾರೆ.
ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿ(New Ration Card)ಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಾಶಾಸ್ತ್ರ ಇಲಾಖಾ ಸಚಿವ ಕೆ.ಎಚ್.ಮುನಿಯಪ್ಪ ಅವರು ಇದೀಗ ತಿಳಿಸಿದ್ದಾರೆ.