Karnataka Dam Water Level: ರಾಜ್ಯದಲ್ಲಿ ಅಬ್ಬರದ ಮಳೆ; ತುಂಗಭದ್ರಾ ಸೇರಿದಂತೆ ಬಹುತೇಕ ಡ್ಯಾಂಗಳ ನೀರಿನ ಮಟ್ಟ ಹೆಚ್ಚಳ

WhatsApp Group Join Now
Telegram Group Join Now

ಬೆಂಗಳೂರು, ಜುಲೈ 06: ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಭರ್ಜರಿ ಮಳೆಯಿಂದಾಗಿ ಕೆರೆ, ಕುಂಟೆ, ಹಳ್ಳ-ಕುಳ್ಳ ಮತ್ತು ನದಿಗಳಲ್ಲಿ ಹರಿವು ಹೆಚ್ಚಾಗಿದೆ. ಇನ್ನೂ ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ತುಂಗಭದ್ರಾ ನದಿಗೆ ಹೆಚ್ಚು ನೀರು ಬರುತ್ತಿರುವುದರಿಂದ ಬಳ್ಳಾರಿ ಜಿಲ್ಲೆಯ ಹೊಡಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳವಾಗಿದೆ. ಮೂರೇ ದಿನಗಳ ಅಂತರದಲ್ಲಿ ಜಲಾಶಯಕ್ಕೆ 4 ಟಿಎಂಸಿ ನೀರು ಹರಿದು ಬಂದಿದೆ. ತುಂಗಭದ್ರಾ ಜಲಾಶಯದಲ್ಲಿ ಇಂದು (ಜು.06) 11.71 ಟಿಎಂಸಿ ನೀರು ಇದೆ. ಕಳೆದ 24 ಗಂಟೆಯಲ್ಲಿ ಡ್ಯಾಂಗೆ 1.5 ಟಿಎಂಸಿ ನೀರು ಹರಿದು ಬಂದಿದೆ. ಜಲಾಶಯ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

ಇನ್ನೂ ಮಂಡ್ಯ ಜನರ ಜೀವನಾಡಿ ಕೆಆರ್​ಎಸ್​ ಡ್ಯಾಂನಲ್ಲಿ 100 ಅಡಿ ನೀರು ಸಂಗ್ರಹವಾಗಿದೆ. ಹಾಗಾದರೆ ಕೆಆರ್​ಎಸ್ ಡ್ಯಾಂ, ಮಲಪ್ರಭಾ ಸೇರಿದಂತೆ ಕರ್ನಾಟಕ ಜುಲೈ 06 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕದ ಪ್ರಮುಖ ಜಲಾಶಯಗಳು ಗರಿಷ್ಠ ನೀರಿನ ಮಟ್ಟ(ಮೀ) ಇಂದಿನ ನೀರಿನ ಮಟ್ಟ(ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಕೆಆರ್​ಎಸ್ ಜಲಾಶಯ 38.04 23.05 9686 546
ಹಾರಂಗಿ ಜಲಾಶಯ 871.38 5.00 5048 200
ಆಲಮಟ್ಟಿ ಜಲಾಶಯ​ 519.60 48.98 53901 430
ತುಂಗಭದ್ರಾ ಜಲಾಶಯ 497.71 11.71 19201 396
ಮಲಪ್ರಭಾ ಜಲಾಶಯ​ 633.80 8.14 12173 194
ಲಿಂಗನಮಕ್ಕಿ ಜಲಾಶಯ 554.44 31.46 44024 1341
ಕಬಿನಿ ಜಲಾಶಯ​ 696.13 17.71 8321 2917
ಭದ್ರಾ ಜಲಾಶಯ​ 657.73 20.35 16171 350
ಘಟಪ್ರಭಾ ಜಲಾಶಯ​ 662.91 14.08 19992 108
ಹೇಮಾವತಿ ಜಲಾಶಯ​ 890.58 16.53 8447 250
ಸೂಫಾ ಜಲಾಶಯ 564.00 36.71 25678 1370
WhatsApp Group Join Now
Telegram Group Join Now
Back to top button