ಬೆಳಗಾವಿ | ಗುಜರಿ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಅಪಾರ ಹಾನಿ

WhatsApp Group Join Now
Telegram Group Join Now

ಬೆಳಗಾವಿ: ಇಲ್ಲಿನ ವಡಗಾವಿಯ ಡೋಹರ ಗಲ್ಲಿಯಲ್ಲಿ‌ ಶುಕ್ರವಾರ ನಸುಕಿನಲ್ಲಿ ಕಿಡಿಗೇಡಿಗಳು ಗುಜರಿ ಅಂಗಡಿಗೆ ಬೆಂಕಿ‌ ಹಚ್ಚಿದ್ದಾರೆ. ಬೆಂಕಿ ನಾಲ್ಕು ಅಂಗಡಿಗಳಿಗೆ ಹತ್ತಿಕೊಂಡಿದ್ದರಿಂದ ಅಪಾರ ಪ್ರಮಾಣದ ಗುಜರಿ ವಸ್ತುಗಳು‌ ಸುಟ್ಟಿವೆ.

ಹಳೆ ತಗಡಿನ ವಸ್ತುಗಳು, ಪ್ಲಾಸ್ಟಿಕ್ ಸಾಮಗ್ರಿ, ಗೋಣಿ ಚೀಲ, ವಾಹನಗಳ ಟೈರ್, ಡ್ಯೂಬ್, ರದ್ದಿಪೇಪರ್ ಮುಂತಾದ ವಸ್ತುಗಳು ಅಂಗಡಿಗಳಲ್ಲಿ ಇದ್ದವು.

ಇದರಿಂದ ಬೆಂಕಿ‌ ಕೆನ್ನಾಲಿಗೆ ಬೇಗ ಹೊತ್ತಿಕೊಂಡಿತು.

 ಹೊತ್ತಿ ಉರಿಯುತ್ತಿರುವ ಗುಜರಿ ಅಂಗಡಿ

ಎಚ್ಚರಗೊಂಡ‌ ಗುಜರಿ ವ್ಯಾಪಾರಿಗಳು ಬೆಂಕಿ‌ ನಂದಿಸಲು‌ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಬಂದ ಅಗ್ನಿಶಾಮಕ ‌ಸಿಬ್ಬಂದಿ ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ‌ ನಂದಿಸಿದರು.

‘ಗುಜರಿ ವ್ಯಾಪಾರಿಗಳಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಬೇಗ ಹತೋಟಿಗೆ ಬಾರದಷ್ಟು ಹೊತ್ತಿ‌ ಉರಿದಿದೆ. ಗುಜರಿ ಅಂಗಡಿಯಲ್ಲಿ ಬೆಂಕಿ ಹೆಚ್ಚಾಗುವಂತ ವಸ್ತುಗಳು ಇದ್ದಿದ್ದೇ ಇದಕ್ಕೆ‌ ಕಾರಣ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Back to top button