ತಾಲೂಕಾ ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜೃಂಭಿಸಿದ ನಾಸೀರ್ ಬಾಗವಾನ

WhatsApp Group Join Now
Telegram Group Join Now

ಖಾನಾಪುರ ತಾಲೂಕಿನ 9ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಂದಿಗವಾಡ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ಸಮ್ಮೇಳನವನ್ನು ಖ್ಯಾತ ಉದ್ಯಮಿ ನಾಸಿರ್ ಬಾಗವಾನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಖಾನಾಪುರ್ ತಾಲೂಕನ್ನು ಇದುವರೆಗೂ ಎಂಇಎಸ್ ಹಾಗೂ ಇತರೆ ಸಂಘಟನೆಗಳು ಶೋಷಣೆಗೆ ಒಳಪಡಿಸಿವೆ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದರ ಮೂಲಕ ಖಾನಾಪುರ ತಾಲೂಕಿನಲ್ಲಿ ಇರುವ ಬಹು ಸಂಖ್ಯಾತ ಮರಾಠಿ ಭಾಷಿಕರನ್ನು ಕನ್ನಡದತ್ತ ಸೆಳೆಯಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಪರ ಸಂಘಟನೆಗಳು ಕೆಲಸ ಮಾಡುತ್ತಿವೆ.

ತಾಲೂಕಾ ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಜೃಂಭಿಸಿದ ನಾಸೀರ್ ಬಾಗವಾನ

ಕಳೆದ ಎರಡು ದಶಕಗಳಿಂದ ನಾನು ನನ್ನ ಸ್ವಂತ ಹಣದಿಂದ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕರಿಸಿದ್ದೇನೆ ಹಾಗೂ ಮುಂದೆಯೂ ಕೂಡ ಕನ್ನಡಕ್ಕಾಗಿ ನನ್ನ ಕೈ ಸದಾ ಸಿದ್ಧವಾಗಿದೆ ಎಂದರು. ಹಾಗೂ ಖಾನಾಪುರ ತಾಲೂಕಿನಲ್ಲಿ ಸರ್ಕಾರ ರೈತರಗಾಗಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಗೊಳಿಸಬೇಕು ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿ ಆಗಬೇಕು ಆ ನಿಟ್ಟಿನಲ್ಲಿ ನಾನು . ಶ್ರಮಿಸುತ್ತಿದ್ದೇನೆ. ಸ್ಥಳೀಯ ಶಾಸಕರು ಮರಾಠಿ ಸಮ್ಮೇಳನಗಳಲ್ಲಿ ಭಾಗವಹಿಸಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಇದನ್ನು ಕನ್ನಡಿಗರು ಗಮನಿಸಬೇಕೆಂದರು.

 

ವೇದಿಕೆಯ ಕಾರ್ಯಕ್ರಮದ ಉದ್ಘಾಟನೆಯ ಮುಂಚಿತವಾಗಿ ರಾಷ್ಟ್ರಧ್ವಜ, ನಾಡಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿತು.

 

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಗಂದಿಗವಾಡ ಗ್ರಾಮದ ಸುಪುತ್ರ ಮೃತ್ಯುಂಜಯ ಸ್ವಾಮಿಗಳು ಹಿರೇಮಠ ಅವರು ವಹಿಸಿದ್ದರು.

 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚೆನ್ನಬಸವದೇವರು ವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖಂಡರಾದ ದಶರಥ ಬನೋಷಿ, ಪಟ್ಟನ್ ಪಂಚಾಯಿತಿ ಸದಸ್ಯರಾದ ಮೇಘಾ ಕುಂದರಗಿ, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲ ಮೆಟಗುಡ್ಡ, ನಿಕಟಪೂರ್ವ ಕಸಾಪ ಅಧ್ಯಕ್ಷ ವಿಜಯ ಬಡಿಗೇರ, ಕಸಾಪ ಸದಸ್ಯರಾದ ರವಿ ಕಾಡಗಿ, ಅಲ್ತಾಫ್ ಬಸರಿಕಟ್ಟಿ, ಪ್ರಸನ್ನ ಕುಲಕರ್ಣಿ, ಬಸವರಾಜ್ ಭಂಗಿ,ಎಂ ಎಂ ರಾಜಿಬಾಯಿ, ತಾಲೂಕಿನ ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಲೇಖಕಿಯರ ಸಂಘದ ಸದಸ್ಯರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಮಹಿಳಾ ಸಂಘದ ಸದಸ್ಯರು, ಪತ್ರಕರ್ತರು, ಗ್ರಾಮದ ಸಮಸ್ತ ಗ್ರಾಮಸ್ಥರು ಹಾಜರಿದ್ದರು.

 

ವರದಿ: ಜ್ಯೋತಿಬಾ ಬೆಂಡಿಗೇರಿ

WhatsApp Group Join Now
Telegram Group Join Now
Back to top button