ಒಂದು ವರ್ಷದಿಂದ ಪಾವತಿಸಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

ಮೋದಿ ವಾಸ್ತವ್ತ ಹೂಡಿದ ಹೋಟೆಲ್ ಬಿಲ್ 80 ಲಕ್ಷ ಬಾಕಿ; ಕಾನೂನು ಹೋರಾಟದ ಎಚ್ಚರಿಕೆ

WhatsApp Group Join Now
Telegram Group Join Now

ಮೈಸೂರು: ಒಂದು ವರ್ಷದ ಹಿಂದೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಪಂಚತಾರ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಹೋಟೆಲ್ ಕೊಠಡಿ ಬಾಡಿಗೆ ಇದುವರೆಗೂ ಪಾವತಿಸಿದ ಅರಣ್ಯ ಇಲಾಖೆ, 80 ಲಕ್ಷ ಹಣ ಬಾಕಿ ಇರಿಸಿದೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ 50 ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಮೈಸೂರಿನ ಪಂಚತಾರ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು.

 

ಈ ಕಾರ್ಯಕ್ರಮಕ್ಕೆ ಆರು ಕೋಟಿ‌ ರೂ ವೆಚ್ಚವಾಗಿತ್ತು. ಆದರೆ ಬಿಡುಗಡೆಯಾಗಿರುವುದು ಮೂರು ಕೋಟಿ ರೂಪಾಯಿ ಮಾತ್ರ. ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ಬಾಕಿ ಹಣ ಬರಬೇಕಿದೆ. ಹಣ ತುರ್ತಾಗಿ ಬಿಡುಗಡೆ ಮಾಡಿ ಎಂದು ರಾಜ್ಯ ಅರಣ್ಯ ಇಲಾಖೆಯಿಂದ ಕೇಂದ್ರ ಅರಣ್ಯ ಇಲಾಖೆಗೆ ಪತ್ರ ರವಾನೆಯಾಗಿದೆ. ಮೇ 21 ರಂದು ಅರಣ್ಯ ಇಲಾಖೆ ಅಧಿಕಾರಿಗೆ ಪತ್ರ ಬರೆಯಲಾಗಿದೆ.

18% ಬಡ್ಡಿ ಸಮೇತ 80 ಲಕ್ಷ ಪಾವತಿಸಿ ಎಂದು ಹೋಟೆಲ್ ವ್ಯವಸ್ಥಾಪಕರು ಪತ್ರ‌ ಬರೆದಿದ್ದಾರೆ. ಅಲ್ಲದೆ ಜೂನ್ 1 ರ ಒಳಗೆ ಬಿಲ್ ಕಟ್ಟದಿದ್ದರೆ ಕಾನೂನಾತ್ಮಕ ಕ್ರಮದ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
Back to top button