ಶಾಸಕ ಆಸೀಫ್ ಸೇಠ್ ಮನೆಗೆ ಭೇಟಿ ನೀಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ
ಬೆಳಗಾವಿ: ಶಿವಬಸವ ನಗರದಲ್ಲಿರುವ ಶಾಸಕ ಆಸೀಫ್ (ರಾಜು) ಸೇಠ್ ಅವರ ಮನೆಗೆ ಸಂಸದ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ ಸತ್ಕಾರವನ್ನು ಸ್ವೀಕರಿಸಿದರು.
ಶಿವಬಸವ ನಗರದ ಶಾಸಕ ಆಸೀಫ್ (ರಾಜು) ಸೇಠ್ ಅವರ ಮನೆಯಲ್ಲಿ ಮುಸ್ಲಿಂ ಸಮುದಾಯದ ನೂರಾರು ಮುಖಂಡರು ಚಿಕ್ಕ ವಯಸ್ಸಿನಲ್ಲೇ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.
ಇದೇ ವೇಳೆ ಶಾಸಕ ಆಸೀಫ್ ಸೇಠ್ ಕುಟುಂಬಸ್ಥರು ಸಂಸದೆ ಪ್ರಿಯಂಕಾ ಜಾರಕಿಹೊಳಿಗೆ ಆಶೀರ್ವದಿಸಿ, ಚಿಕ್ಕ ವಯಸ್ಸಿನಲ್ಲಿ ಜನ ಸೇವೆ ಮಾಡುವ ಅವಕಾಶವನ್ನು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಜನ ಒದಗಿಸಿದ್ದಾರೆ. ಆದಕಾರಣ ಜನ ಸೇವೆ ಮಾಡುವ ಮೂಲಕ ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಅವರಂತೆಯೇ ರಾಜಕಾರಣದಲ್ಲಿ ಬೆಳೆಯಿರಿ ಎಂದು ಹರಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಆಸೀಫ್ ರಾಜು ಸೇಠ್, ತಂದೆ, ಸಚಿವ ಸತೀಶ್ ಜಾರಕಿಹೊಳಿ ಅವರಂತೆಯೇ ಸರ್ವ ಸಮಾಜದವರ ಪ್ರಗತಿಗೆ ಶ್ರಮಿಸಬೇಕೆಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಸಲಹೆ ನೀಡಿದರು.
ಚಿಕ್ಕ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಪ್ರಿಯಂಕಾ ಜಾರಕಿಹೊಳಿ ಅವರು ರಾಜ್ಯದಲ್ಲಿಯೇ ಇತಿಹಾಸ ಸೃಷ್ಟಿಸಿದ್ದಾರೆ. ಪ್ರಿಯಂಕಾ ಜಾರಕಿಹೊಳಿ ದೀನ ದಲಿತರ, ಹಿಂದುಳಿದವರು, ಬಡವರ ಧ್ವನಿ ಆಗಬೇಕೆಂದು ಹರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ರವಿ ಸಾಳಂಕೆ, ಮುಜಿಮರ್ ಡೋನಿ, ರಿಯಾಜ್ ಕಿಲ್ಲೆದಾರ, ಸಿದ್ದಾರ್ಥ ಬತಖಂಡೆ, ಬಸವರಾಜ ಮೊದಗೆಕರ್, ಆಸ್ಮಿತಾ ಪಾಟೀಲ್, ಲಕ್ಷ್ಮೀ ಲೋಕರಿ, ಇಕ್ರಾ ಮುಲ್ಲಾ, ಮಾಯಾ ಕಡೊಲಕರ್, ಶಾಹಿದ್ ಖಾನ್ ಪಠಾಣ, ಶಿವಾಜಿ ಮಂಡೊಲಕರ್, ಬಾಬಾಜನ್ ಮತವಾಲೆ ಸೇರಿದಂತೆ ನೂರಾರು ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು