Karnataka Airports: ಕರ್ನಾಟಕದ ಈ ಜಿಲ್ಲೆಗಳಲ್ಲಿ ಬರಲಿದೆ ಏರ್‌ಪೋರ್ಟ್‌, ಪಟ್ಟಿ ನೋಡಿ

WhatsApp Group Join Now
Telegram Group Join Now
ಬೆಂಗಳೂರು, ಫೆಬ್ರವರಿ 23: ರಾಜ್ಯದಲ್ಲಿ ವಿಮಾನಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ದೇಶಿಯ ಪ್ರಯಾಣ ಹಾಗೂ ವಿದೇಶಗಳಿಗೆ ಪ್ರಯಾಣಿಸುವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ.ಕಳೆದ ವರ್ಷ ಉದ್ಘಾಟನೆಗೊಂಡ ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದಲ್ಲಿ ಈವರೆಗೆ ಒಟ್ಟು 9 ವಿಮಾನ ನಿಲ್ದಾಣಗಳಿವೆ.
ಇವುಗಳಲ್ಲಿ 2 ಅಂತಾರಾಷ್ಟ್ರೀಯ, 2 ದೇಶಿಯ ವಿಮಾನಗಳು ಒಳಗೊಂಡಿವೆ. ಕರ್ನಾಟಕದಲ್ಲಿ ಸದ್ಯ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಬೀದರ್, ಬಳ್ಳಾರಿ ವಿಮಾನ ನಿಲ್ದಾಣಗಳಿವೆ. ಸದ್ಯ ಬಳ್ಳಾರಿಯಲ್ಲಿ ಖಾಸಗಿ ವಿಮಾನಗಳು ಮಾತ್ರ ಲ್ಯಾಂಡ್ ಆಗಬಹುದಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ವಿಮಾನ ನಿಲ್ದಾಣ ಇನ್ನೂ ಮುಕ್ತವಾಗಿಲ್ಲ. ಈ ವಿಮಾನ ನಿಲ್ದಾಣಗಳ ಜೊತೆಯಲ್ಲಿ ಮತ್ತೆ ಮೂರು ವಿಮಾನ ನಿಲ್ದಾಣ ಕರ್ನಾಟಕದಲ್ಲಿ ಶೀಘ್ರವಾಗಿ ನಿರ್ಮಾಣವಾಗಲಿದೆ.
Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಡಿಫೆರೆಂಟ್‌ ಕೆಲಸ, ತಿಂಗಳ ಸಂಬಳ ಎಷ್ಟು?-ಮಾಹಿತಿ ತಿಳಿಯಿರಿಮುಂದಿನ ದಿನಗಳಲ್ಲಿ ರಾಯಚೂರು, ಹಾಸನ ಹಾಗೂ ವಿಜಯಪುರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಈ ಬಗ್ಗೆ ಸವಿವರವಾದ ಮಾಹಿತಿ ಇಲ್ಲಿದೆ.
ವಿಜಯಪುರ ವಿಮಾನ ನಿಲ್ದಾಣ ವಿಜಯಪುರ ಜಿಲ್ಲೆಯ ಭರಣಾಪುರ ಹಾಗೂ ಮದಭಾವಿ ಗ್ರಾಮಗಳಲ್ಲಿನ ಸುಮಾರು 727 ಎಕರೆ ಜಮೀನಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಗಳು ಪೂರ್ಣಗೊಳ್ಳುತ್ತಾ ಬಂದಿದ್ದು, ಉದ್ಘಾಟನೆಗೆ ಸಿದ್ಧವಾಗುತ್ತಿದೆ. ಈ ವಿಮಾನ ನಿಲ್ದಾಣ ಯೋಜನೆಯನ್ನು 350 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದು ಕರ್ನಾಟಕದ 10ನೇ ವಿಮಾನ ನಿಲ್ದಾಣವಾಗಲಿದೆ.
ಹಾಸನ ವಿಮಾನ ನಿಲ್ದಾಣಹಾಸನಕ್ಕೆ ವಿಮಾನ ನಿಲ್ದಾಣ ಬೇಕು ಎಂಬ ಬೇಡಿಕೆ 1976ರಿಂದಲೂ ಇದೆ. ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯದ ಕುರಿತು ಹಲವಾರು ಸಭೆ, ಪ್ರಾಥಮಿಕ ಹಂತದ ಕೆಲಸಗಳು ನಡೆದಿದ್ದು, ಬೂವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ 2023-24ನೇ ಸಾಲಿನಲ್ಲಿ 55 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬಾಕಿ ಇರುವ 30 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಯಚೂರು ವಿಮಾನ ನಿಲ್ದಾಣರಾಯಚೂರು ಜಿಲ್ಲೆಯಲ್ಲಿ ಸುಮಾರು 400 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಇದಕ್ಕಾಗಿ ಜಾಗ ಸುತ್ತಲೂ ಕಾಪೌಂಡ್ ನಿರ್ಮಾಣ ಮಾಡಿ ಪ್ರಾಥಮಿಕ ಕಾಮಗಾರಿ ಆರಂಭಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ 220 ಕೋಟಿ ವೆಚ್ಚದ ರಾಯಚೂರು ವಿಮಾನ ನಿಲ್ದಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
WhatsApp Group Join Now
Telegram Group Join Now
Back to top button