ದಿನವಿಡಿ ನೀವು ಸುಂದರವಾಗಿ ಕಾಣಬೇಕಾದರೆ ಹೀಗೆ ಮಾಡಿ..! ಫಲಿತಾಂಶ ಖಚಿತ..!
ದಿನನಿತ್ಯ ನೀವು ಎದ್ದ ಕೂಡಲೇ ಏನು ಮಾಡುತ್ತೀರಿ? ನಿತ್ಯಕರ್ಮಗಳನ್ನು ಮುಗಿಸಿಕೊಂಡ ಬಳಿಕ ಉಪಾಹಾರ ಸೇವನೆ ಮಾಡಿ ಅದರ ಬಳಿಕ ಕಚೇರಿಗೋ ಅಥವಾ ನಿಮ್ಮ ಬೇರೆ ಯಾವುದೇ ಕೆಲಸದಲ್ಲೋ ತೊಡಗುವಿರಿ. ಆದರೆ ನೀವು ಪ್ರತಿನಿತ್ಯವು ಇದೇ ವೇಳಾಪಟ್ಟಿಯನ್ನು ಅನುಸರಿಸುವಿರಿ. ಬೆಳಗ್ಗೆ ಎದ್ದು ನಿಮ್ಮ ಸೌಂದರ್ಯಕ್ಕಾಗಿ ಏನು ಮಾಡಿದ್ದೀರಿ?
ಏನೂ ಇಲ್ಲಾ ತಾನೇ?.
ಆದರೆ ಇಡೀ ದಿನ ನೀವು ಸುಂದರವಾಗಿ ಕಾಣವೇಕಾದರೆ ಕೆಲವೇ ಕಲವು ಅಂಶಗಳನ್ನು ನಿತ್ಯವೂ ಫಾಲೋ ಮಾಡಿ. ನಿಮ್ಮಲ್ಲಿ ಬದಲಾವಣೆ ಖಚಿತವಾಗಿ ಕಂಡುಕೊಳ್ಳಲಿದ್ದೀರಿ. ಹಾಗಾದರೆ ಬೆಳಗ್ಗೆ ಎದ್ದ ಕೂಡಲೇ ಏನು ಮಾಡಬೇಕು ಎಂಬುದನ್ನು ನೋಡಿ.
ದಿನದ ಆರಂಭ ಮಾಡಲು ನೀವು ಒಂದು ಲೋಟ ನೀರು ಕುಡಿಯಿರಿ
ಹೆಚ್ಚಿನ ಚರ್ಮ ಮತ್ತು ಆರೋಗ್ಯ ತಜ್ಞರು ನೀಡುವಂತಹ ಸಲಹೆ ಎಂದರೆ ಬೆಳಗ್ಗೆ ಎದ್ದ ತಕ್ಷಣ ನೀವು ಒಂದು ಲೋಟ ನೀರು ಕುಡಿಯಿರಿ. ಅದರಲ್ಲೂ ಉಗುರು ಬೆಚ್ಚಗಿನ ನೀರು ಒಳ್ಳೆಯದು. ಇದು ಹೊಟ್ಟೆ ಹಾಗೂ ಹೊಟ್ಟೆಯ ಭಾಗವನ್ನು ಶುದ್ಧೀಕರಿಸುವುದು ಮತ್ತು ತಣ್ಣೀರು ಕುಡಿದರೂ ಇದು ನಿಮಗೆ ಸಹಕಾರಿಯಾಗುವುದು. 2-3 ದಿನಗಳ ಮೊದಲು ನಾನು ಒಂದು ಲೇಖನದಲ್ಲಿ ಓದಿರುವ ಪ್ರಕಾರ ಬೆಳಗ್ಗೆ ಒಂದು ಲೋಟ ತಣ್ಣಗಿನ ನೀರು ಕುಡಿದರೆ ಅದು ಕೆಫಿನ್ ಸೇವನೆಗಿಂತಲೂ ತುಂಬಾ ಒಳ್ಳೆಯದು. ಇದು ನಿಜವೇ ಎಂದು ನನಗೆ ತಿಳಿದಿಲ್ಲ. ಆದರೆ ಬೆಳಗ್ಗೆ ಎದ್ದು ಒಂದು ಲೋಟ ನೀರು ಕುಡಿದರೆ ಆಗ ಅದು ನಿಮ್ಮ ಚರ್ಮಕ್ಕೆ ನಿಜವಾಗಿಯೂ ತುಂಬಾ ಲಾಭ ನೀಡುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಯೋಗ ಅಥವಾ ನಿಗದಿತ ವ್ಯಾಯಾಮ
ಮತ್ತೊಂದು ಪ್ರಮುಖ ವಿಚಾರವನ್ನು ಹೆಚ್ಚಿನ ಜನರು ಕಡೆಗಣಿಸುವರು. ಆದರೆ ಇಂತಹ ಜನರ ಗುಂಪಿನಲ್ಲಿ ನಾವೆಲ್ಲರೂ ಸೇರಿಕೊಳ್ಳುತ್ತೇವೆ. ದೊಡ್ಡ ಮಟ್ಟದ ಯೋಗ ಅಥವಾ ನಿಗದಿತ ವ್ಯಾಯಾಮದಿಂದ ದೇಹಕ್ಕೆ ಹೆಚ್ಚಿನ ಲಾಭ ಪಡೆಯಬಹುದು. ಆದರೆ ಸಣ್ಣ ಮಟ್ಟದಲ್ಲಿ ದೇಹವನ್ನು ಬಿಸಿಯಾಗಿಸುವುದು ಕೂಡ ನೆರವಾಗುವುದು ಮತ್ತು ಇದರಲ್ಲಿ ಲಘು ವ್ಯಾಯಾಮ ಮಾಡಿ. ಇದು ದೇಹದಲ್ಲಿ ಕೆಲವೊಂದು ಅಂಶಗಳನ್ನು ಸರಿಪಡಿಸುವುದು ಮತ್ತು ಇದಕ್ಕಾಗಿ ನೀವು ಬೆಳಗ್ಗೆ ಹೀಗೆ ಮಾಡಿಕೊಳ್ಳಬೇಕು.
ಆಯಂಟಿಆಕ್ಸಿಡೆಂಟ್ ಸೇವಿಸಿ
ಬೆಳಗ್ಗಿನ ವೇಳೆ ನೀವು ಆಯಂಟಿಆಕ್ಸಿಡೆಂಟ್ ನ್ನು ಸೇವನೆ ಮಾಡಿದರೆ ಅದರಿಂದ ಹೆಚ್ಚಿನ ಲಾಭ ಸಿಗುವುದು. ಯಾವುದೇ ರೀತಿಯ ಗಿಡಮೂಲಿಕೆ ಚಹಾ ಕುಡಿಯಿರಿ. ಇದರಲ್ಲಿ ಫ್ಲಾವನಾಯ್ಡ್ ನಂತಹ ಆಯಂಟಿಆಕ್ಸಿಡೆಂಟ್ ಇರುವುದು. ಇದು ತುಂಬಾ ಆರೋಗ್ಯಕಾರಿ ಆಯಂಟಿಆಕ್ಸಿಡೆಂಟ್ ಎಂದು ಪರಿಗಣಿಸಲಾಗಿದೆ. ಕೆಲವೊಂದು ರೀತಿಯ ಆಯಂಟಿಆಕ್ಸಿಡೆಂಟ್ ಗಳು ಚಾ ಮತ್ತು ಕಾಫಿಯಲ್ಲಿ ಇರುವುದು. ಹೀಗಾಗಿ ನೀವು ದಿನನಿತ್ಯವು ನೀವು ಸೇವಿಸುವಂತಹ ಚಾ ಮತ್ತು ಕಾಫಿ ಸೇವನೆ ಮಾತ್ರ ನಿಲ್ಲಿಸಬೇಡಿ. ಒಂದು ಪಿಂಗಾಣಿ ತಾಜಾ ಹಣ್ಣುಗಳನ್ನು ಕೂಡ ಸೇವನೆ ಮಾಡಬಹುದು.
ಪ್ರೋಟೀನ್ ಅಧಿಕವಾಗಿರುವ ಉಪಾಹಾರ ಸೇವಿಸಿ
ರಾಜನಂತೆ ಉಪಾಹಾರ ಸೇವಿಸಿ, ರಾಜಕುಮಾರನಂತೆ ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವನ್ನು ಭಿಕ್ಷುಕನಂತೆ ಮಾಡಿ. ಇದರಿಂದಾಗಿ ಉಪಾಹಾರವು ಬೇರೆ ಎಲ್ಲಕ್ಕಿಂತಲೂ ತುಂಬಾ ಆರೋಗ್ಯಕಾರಿ ಹಾಗೂ ಶ್ರೀಮಂತವಾಗಿರಬೇಕೆಂದು ಹೇಳಲಾಗುತ್ತದೆ. ಪ್ರೋಟೀನ್ ದೇಹದಲ್ಲಿ ಸ್ನಾಯುಗಳನ್ನು ಬಲಪಡಿಸುವುದು ಎಂದು ನಮಗೆ ತಿಳಿದೇ ಇದೆ. ಇದರಿಂದಾಗಿ ನೀವು ಪ್ರೋಟೀನ್ ಅಧಿಕವಾಗಿರುವಂತಹ ಉಪಾಹಾರ ಸೇವನೆ ಮಾಡಿ.
ಮುಖಕ್ಕೆ ನೀರು ಚಿಮ್ಮಿಸಿ
ಇದು ತುಂಬಾ ನಿಧಾನಗತಿಯ ಪ್ರಕ್ರಿಯೆ. ಆದರೆ ಇದು ತುಂಬಾ ಪರಿಣಾಮಕಾರಿಯಾಗಿರುವುದು. ನೀವು ಎದ್ದ ಕೂಡಲೇ ಮುಖಕ್ಕೆ ನೀರು ಚಿಮುಕಿಸಿ. ಇದು ನಿಮ್ಮನ್ನು ನಿದ್ರೆಯಿಂದ ಎಬ್ಬಿಸುವುವಂತೆ ಮಾಡುವುದು ಮಾತ್ರವಲ್ಲದೆ, ಚರ್ಮಕ್ಕೆ ಕೂಡ ಒಳ್ಳೆಯದು.
ಆಯಂಟಿಆಕ್ಸಿಡೆಂಟ್ ಸೆರಮ್ ಬಳಸಿ
ನಮ್ಮ ದೇಹಕ್ಕೆ ಯಾವುದೇ ರೀತಿಯ ವೈರಸ್ ಗಳು ದಾಳಿ ಮಾಡದಂತೆ ಆಯಂಟಿಆಕ್ಸಿಡೆಂಟ್ ಗಳು ಅತೀ ಅಗತ್ಯವಾಗಿರುವುದು. ಆಯಂಟಿಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಬೆಳಗ್ಗೆ ನೀವು ಆಯಂಟಿಆಕ್ಸಿಡೆಂಟ್ ಸೆರಮ್ ಹಚ್ಚಿಕೊಳ್ಳಬೇಕು. ನೀವು ಸನ್ ಸ್ಕ್ರೀನ್ ನ್ನು ದಿನವಿಡಿ ಬಳಸುವಂತೆ ಇದನ್ನು ಕೂಡ ಬೆಳಗ್ಗೆ ಹಚ್ಚಿಕೊಳ್ಳಿ.