ಖ್ಯಾತ ನಟ ವಿಜಯ್ ರಾಜಕೀಯ ಪ್ರವೇಶ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ

WhatsApp Group Join Now
Telegram Group Join Now

ಚೆನ್ನೈ: ಚಿತ್ರ ನಟ ದಳಪತಿ ವಿಜಯ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದರೊಂದಿಗೆ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ.

ವಿಜಯ್ ಅವರ ಫ್ಯಾನ್ಸ್ ಕ್ಲಬ್ ವಿಜಯ್ ಮಕ್ಕಳ್ ಇಯಕ್ಕಂ ಜನರಲ್ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.

ವಿಜಯ್ ಶೀಘ್ರವೇ ತಮ್ಮ ನೂತನ ಪಕ್ಷದ ನೋಂದಣಿ ಮಾಡಿಸಲಿದ್ದಾರೆ. ನೂತನ ಪಕ್ಷದ ಅಧ್ಯಕ್ಷರಾಗಿ ವಿಜಯ್ ಅವರನ್ನೇ ಆಯ್ಕೆ ಮಾಡಿ ಸೂಕ್ತ ನಿಯಮಗಳನ್ನು ರೂಪಿಸುವ ಬಗ್ಗೆ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಈಗಾಗಲೇ ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಸೇವಾ ಕಾರ್ಯದಲ್ಲಿ ನಿರತರಾಗಿರುವ ವಿಜಯ್ ಅಭಿಮಾನಿಗಳು ತಮಿಳುನಾಡು, ಕೇರಳ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಜಯ್ ರಾಜಕೀಯ ಪ್ರವೇಶ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

WhatsApp Group Join Now
Telegram Group Join Now
Back to top button