ಮಹಾರಾಷ್ಟ್ರ ಬೆಂಬಲಿತ ಸೇವಾ ಕೇಂದ್ರಗಳನ್ನು ಕೂಡಲೇ ಬಂದ್ ಮಾಡಿಸಬೇಕು – ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

WhatsApp Group Join Now
Telegram Group Join Now

ಬೆಳಗಾವಿ – ಮಹಾರಾಷ್ಟ್ರ ಸರಕಾರ ಕರ್ನಾಟಕದ ಬೆಳಗಾವಿ, ಕಾರವಾರ, ಬೀದರ ಮತ್ತು ಕಲಬುರ್ಗಿ ಜಿಲ್ಲೆಗಳ 865 ಹಳ್ಳಿ

ಪಟ್ಟಣಗಳಲ್ಲಿಯ ಮರಾಠಿ ಭಾಷಿಕರಿಗಾಗಿ ಜಾರಿಗೆ ತರುತ್ತಿರುವ ತನ್ನ ಜ್ಯೋತಿರಾವ ಫುಲೆ ಜನಾರೋಗ್ಯ ವಿಮೆ ಯೋಜನೆಯ

ಭಾಗವಾಗಿ ಬೆಳಗಾವಿಯಲ್ಲಿ ಐದು ಸೇವಾ ಕೇಂದ್ರಗಳನ್ನು ಆರಂಭಿಸಿದೆ.

 

“ನಾನು ಮರಾಠಿ ಭಾಷಿಕ” ಎಂದು ಫಲಾನುಭವಿಗಳು ಸ್ವಯಂ ಘೋಷಣೆ ಪತ್ರವನ್ನು ನೀಡಬೇಕು. ಅಲ್ಲದೇ ಮಹಾರಾಷ್ಟ್ರ ಏಕೀಕರಣ ಸಮಿತಿಯ

ಶಿಫಾರಸು ಪತ್ರವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಕಚೇರಿಗೆ ಆನ್ ಲೈನ್ ಮೂಲಕ ಕಳಿಸಬೇಕು. ಇಷ್ಟಾದರೆ ಸಾಕು

ಮಹಾರಾಷ್ಟ್ರ ಸರಕಾರ ಬೆಳಗಾವಿಯ ಆಸ್ಪತ್ರೆಗಳಿಗೆ ಆನ್ ಲೈನ್ ಮೂಲಕವೇ ಒಂದರಿಂದ ಐದು ಲಕ್ಷ ರೂ.ವರೆಗೆ ಹಣವನ್ನು

ಜಮೆ ಮಾಡುತ್ತದೆ.

ಭಾಷಿಕ ಆಧಾರದ ಮೇಲೆ ತನ್ನ ಜನಾರೋಗ್ಯ ಯೋಜನೆಯನ್ನು ಜಾರಿ ಮಾಡಲು ಹೊರಟಿರುವ ಮಹಾರಾಷ್ಟ್ರ

ಸರಕಾರದ ಬೆಂಬಲಿತ ಸೇವಾ ಕೇಂದ್ರಗಳನ್ನು ಕೂಡಲೇ ಬಂದ್ ಮಾಡಿಸಬೇಕು. ಇಂಥ ಕರ್ನಾಟಕ ವಿರೋಧಿ ಚಟುವಟಿಕೆಗಳಲ್ಲಿ

ತೊಡಗಿರುವ ಸಂಘಟನೆ ಮತ್ತು ವ್ಯಕ್ತಿಗಳ ವಿರುದ್ಧ ರಾಜ್ಯ ದ್ರೋಹ ಕಾನೂನಿನಡಿ ಪ್ರಕರಣವನ್ನು ದಾಖಲಿಸಬೇಕು ಎಂದು

ಒತ್ತಾಯಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಇಂದು ಗುರುವಾರ ಮುಂಜಾನೆ ಬೆಳಗಾವಿ

ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿತು.

ಈ ಬಗ್ಗೆ ರಾಜ್ಯ ಸರಕಾರಕ್ಕೆ ವರದಿ ಕಳಿಸಿ ಸರಕಾರದಿಂದ ಬರುವ ಅದೇಶದಂತೆ ತುರ್ತಾಗಿ ಕ್ರಮ ಕೈಕೊಳ್ಳುವ

ಭರವಸೆಯನ್ನು ಜಿಲ್ಲಾಧಿಕಾರಿಗಳು ಕ್ರಿಯಾ ಸಮಿತಿಯ ನಿಯೋಗಕ್ಕೆ ನೀಡಿದರು.

2004 ರಲ್ಲಿ ಮಹಾರಾಷ್ಟ್ರ ಸರಕಾರ ಸರ್ವೋನ್ನತ ನ್ಯಾಯಾಲಯದಲ್ಲಿ 865 ಹಳ್ಳಿ ಪಟ್ಟಣಗಳು ಮಹಾರಾಷ್ಟ್ರಕ್ಕೆ

ಸೇರಬೇಕು ಎಂದು ಕೋರಿದೆ. ಈ ಪ್ರಕರಣದಲ್ಲಿ ತನಗೆ ಹಿನ್ನೆಡೆ ಆಗುವದು ಗೊತ್ತಾದ ಕೂಡಲೇ ಜನಾರೋಗ್ಯ

ಯೋಜನೆಯ ಮೂಲಕ ಕರ್ನಾಟಕದ ಮರಾಠಿ ಭಾಷಿಕರನ್ನು ತನ್ನತ್ತ ಸೆಳೆಯಲು ಅಲ್ಲಿಯ ಸರಕಾರ ಹುನ್ನಾರ ನಡೆಸಿದೆಯೆಂದು

ಜಿಲ್ಲಾಧಿಕಾರಿಗಳಿಗೆ ಕ್ರಿಯಾ ಸಮಿತಿ ನಿಯೋಗವು ವಿವರಿಸಿದೆ.

WhatsApp Group Join Now
Telegram Group Join Now
Back to top button