ಪೊಲೀಸ್ ಅಧಿಕಾರಿಗೆ ಏಕಚವನದಲ್ಲಿಯೇ ಆವಾಜ್ ಹಾಕಿದ ಮಾಜಿ ಶಾಸಕ ಪಿ. ರಾಜೀವ್
ಬೆಳಗಾವಿ: ಕುಡಚಿ ಮತಕ್ಷೇತ್ರದ ಮಾಜಿ ಶಾಸಕ ಪಿ ರಾಜೀವ್ ಅವರು ಪೊಲೀಸ್ ಅಧಿಕಾರಿಗೆ ಏಕಚವನದಲ್ಲಿಯೇ ಆವಾಜ್ ಹಾಕಿರುವ ಘಟನೆ ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹಾರೋಗೇರಿ ಪೊಲೀಸ್ ಠಾಣೆಯಲ್ಲೇ ಮಾಜಿ ಶಾಸಕ ಪಿ. ರಾಜೀವ್ ಮತ್ತು ಪಿಎಸ್ ಐ ವಾಗ್ವಾದ ನಡೆದಿದ್ದು,ಯಾವುದೇ ಕೇಸ್ ದಾಖಲು ಇಲ್ಲದೆ ಪುರಸಭೆ ಸದಸ್ಯ ರವಿ ಠಕ್ಕನವರ ಬಂಧನ ಮಾಡಿದ್ದೀರೆಂದು ಪಿಎಸ್ಐ ವಿರುಧ್ಧ ಏಕವಚನದಲ್ಲೇ ಆವಾಜ್ ಹಾಕಿದ್ದಾರೆ.
ಮಾಜಿ ಸಚಿವ ಲಕ್ಷ್ಮಣ ಸವದಿ ಅವರಿಗೆ ಬಹಿರಂಗವಾಗಿ ಅವಾಚ್ಯ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿ ಪುರಸಭೆ ಸದಸ್ಯ ರವಿ ಠಕ್ಕನವರನ್ನು ಅರೆಸ್ಟ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಕೇಸ್ ದಾಖಲು ಇಲ್ಲದೆ ಪುರಸಭೆ ಸದಸ್ಯ ರವಿ ಠಕ್ಕನವರ ಬಂಧನ ಮಾಡಿದ್ದೀರೆಂದು ಪಿಎಸ್ಐ ಉಪ್ಪಾರ್ ವಿರುಧ್ಧ ಪಿ ರಾಜೀವ್ ಗರಂ ಆಗಿದ್ದಾರೆ.
ಅಲ್ಲದೇ ಲಕ್ಷ್ಮಣ ಸವದಿಯವರಗೆ ಕ್ಷಮೆ ಕೇಳಿ ಅಂತಾ ಪುರಸಭೆ ಸದಸ್ಯ ರವಿ ಠಕ್ಕನವರಿಗೆ ಪಿಎಸ್ ಐಗೆ ಅವಾಜ್ ಹಾಕಿದ್ದಾರೆ. ಹಾಗೂ ಇದೇ ವೇಳೆ ಹಿರಿಯ ಅಧಿಕಾರಿಗಳನ್ನು ಮಾಜಿ ಶಾಸಕಪಿ.ರಾಜೀವ್ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಾಗ್ವಾದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.