ದಂಪತಿಗಳ ಮಾನಸಿಕ ಆರೋಗ್ಯವನ್ನೇ ಹಾಳು ಮಾಡುತ್ತೆ ಪರಿಹಾರಕ್ಕಾಗಿ ಅನುಸರಿಸಿ ಈ ಸಲಹೆ

WhatsApp Group Join Now
Telegram Group Join Now

ಬಂಜೆತನವು ಗಂಭೀರ ಸಮಸ್ಯೆಗಳಲ್ಲೊಂದು. ಇದು ಅನೇಕ ದಂಪತಿಗಳ ಸಂಬಂಧಕ್ಕೇ ಮಾರಕವಾಗಬಹುದು. ಬಂಜೆತನದಿಂದಾಗಿ ದಂಪತಿಗಳು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಎದುರಿಸುತ್ತಾರೆ. ಮಕ್ಕಳನ್ನು ಪಡೆಯಲು ಹೋರಾಡುವ ದಂಪತಿಗಳು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಭಾವನೆಗಳನ್ನು ನಿಯಂತ್ರಿಸಿ – ಬಂಜೆತನದಿಂದ ಉಂಟಾಗುವ ಒತ್ತಡ ಮತ್ತು ಆತಂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಯೋಗ, ಧ್ಯಾನ ಅಥವಾ ಮನೋವೈದ್ಯರ ಸಹಾಯವನ್ನು ತೆಗೆದುಕೊಳ್ಳಬಹುದು.

ಧನಾತ್ಮಕ ಆಲೋಚನೆಗಳು – ಮಾನಸಿಕ ಆರೋಗ್ಯಕ್ಕೆ ಧನಾತ್ಮಕ ಆಲೋಚನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಬಂಜೆತನದ ಚಿಕಿತ್ಸೆಯಲ್ಲಿ ಧನಾತ್ಮಕ ಚಿಂತನೆಯು ಸಹಾಯಕವಾಗುತ್ತದೆ.

ನಿಮಗಾಗಿ ಸಮಯ ಮೀಸಲಿಡಿ – ಬಂಜೆತನದ ಚಿಕಿತ್ಸೆಯ ಜೊತೆಗೆ ನಿಮಗಾಗಿ ಸಮಯವನ್ನು ಮೀಸಲಿಡಿ. ನಿಮ್ಮ ಆಯ್ಕೆಯ ಕೆಲಸಗಳನ್ನು ಮಾಡಿ. ಆದಷ್ಟು ಸಂತೋಷವಾಗಿರಲು ಪ್ರಯತ್ನಿಸಿ.

ನಿಮ್ಮ ಅಗತ್ಯಗಳನ್ನು ಗುರುತಿಸಿ – ನಿಮ್ಮ ಅಗತ್ಯಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪೂರೈಸುವುದು ಮಾನಸಿಕ ಆರೋಗ್ಯಕ್ಕೆ ಮುಖ್ಯವಾಗಿದೆ. ಯಾವುದೇ ರೀತಿಯ ಸಹಾಯ ಬೇಕಾದರೆ ಕೇಳಲು ಹಿಂಜರಿಯಬೇಡಿ.

ಸಂಗಾತಿಯೊಂದಿಗೆ ಚರ್ಚಿಸಿ – ಮಕ್ಕಳಿಗಾಗಿ ಹಂಬಲಿಸುತ್ತಿರುವ ದಂಪತಿಗಳು ಮುಕ್ತವಾಗಿ ಮಾತನಾಡಬೇಕು. ಇದು ಪರಸ್ಪರರ ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಬಂಜೆತನದ ಚಿಕಿತ್ಸೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಸಮಸ್ಯೆ ಇರುವವರು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಮಾನಸಿಕವಾಗಿ ಆರೋಗ್ಯಕರವಾಗಿದ್ದಲ್ಲಿ ಮಾತ್ರ ಚಿಕಿತ್ಸೆ ಯಶಸ್ವಿಯಾಗುತ್ತದೆ.

WhatsApp Group Join Now
Telegram Group Join Now
Back to top button