ಸಚಿವ ಶಿವಾನಂದ ಪಾಟೀಲ್ ಕಚೇರಿಗೆ ರೈತರಿಂದ ಮುತ್ತಿಗೆ ಯತ್ನ

WhatsApp Group Join Now
Telegram Group Join Now

ಬೆಳಗಾವಿ: ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ.

ಸಚಿವ ಶಿವಾನಂದ ಪಾಟೀಲ್ ಕಚೇರಿ ಬಳಿ ನೂರಾರು ರೈತರು ಪ್ರತಿಭಟನೆ ನಡೆಸಿದ್ದು, ರೈತ ವಿರೋಧಿ ಸಚಿವರಿಗೆ ಧಿಕ್ಕಾರ ಕೂಗಿದ್ದಾರೆ. ಇದೇ ವೇಳೆ ಕೆಲ ರೈತರು ಕೈಯಲ್ಲಿ ಭಂಡಾರದ ಚೀಲ ಹಿಡಿದು ಸಚಿವರ ಕಚೇರಿಗೆ ನುಗ್ಗಿ ಬಂಡಾರ ಎರಚಲು ಮುಂದಾಗಿದ್ದಾರೆ.

ತಕ್ಷಣ ಎಚ್ಚೆತ್ತ ಪೊಲಿಸರು ರೈತರನ್ನು ತಡೆದು ಅವರ ಕೈಯಲ್ಲಿದ್ದ ಭಂಡಾರದ ಚೀಲವನ್ನು ಕಸಿದಿದ್ದಾರೆ. ಈ ವೇಳೆ ಕೆಲ ರೈತರು ತಮ್ಮ ಕೈಯಲ್ಲಿದ್ದ ಭಂಡಾರವನ್ನು ಸಚಿವರತ್ತ, ಪೊಲೀಸರತ್ತ ತೂರಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ವಿರಿರೋಧಿ ಶಿವಾನಂದ ಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಕೆಲ ರೈತರನ್ನು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
Back to top button