ಖಾನಾಪೂರ ತಾಲೂಕಿನ ಹಲವಾರು ಕಾಮಗಾರಿಗಳನ್ನ ಕೈಗೆತ್ತಿಕೋಳ್ಳಬೇಕೆಂದು ಜ್ಯೋತಿಬಾ ಬೆಂಡಿಗೇರಿ ಅವರಿಂದ ನೂತನ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ
*ಖಾನಾಪೂರ ತಾಲೂಕಿನ ಹಲವಾರು ಕಾಮಗಾರಿಗಳನ್ನ ಕೈಗೆತ್ತಿಕೋಳ್ಳಬೇಕೆಂದು ಜ್ಯೋತಿಬಾ ಬೆಂಡಿಗೇರಿ ಅವರಿಂದ ನೂತನ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ*
ಬೆಳಗಾವಿ ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಬರುವ ಖಾನಾಪೂರದಿಂದ ಲಿಂಗನಮಠವರೆಗೆ ಮುಖ್ಯ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಲವಾರು ವರ್ಷಗಳಿಂದ ತಗ್ಗುಗಳು ಬಿದ್ದಿದ್ದು, ಈಗ ಮಳೆಗಾಲ ಸಹ ಪ್ರಾರಂಭವಾಗಿರುವುದರಿಂದ ತಗ್ಗುಗಳಲ್ಲಿ ನೀರು ತುಂಬಿಕೊಂಡು ಅಪಘಾತಕ್ಕೆ ಕಾರಣವಾಗುತ್ತಿದೆ.
ವಾಹನಗಳು ಸಂಚರಿಸುವಾಗ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಹಿಂದಿನ ಸಂಸದರ ಅವಧಿಯಲ್ಲಿ ಖಾನಾಪೂರ ತಾಲೂಕಿನ ಯಾವ ರೀತಿಯ ರಸ್ತೆಗಳು ಅಭಿವೃದ ಕಂಡಿರುವುದಿಲ್ಲ. ಸದರಿ ರಾಜ್ಯ ಹೆದ್ದಾರಿಯು ಮುಖ್ಯ ಹೆದ್ದಾರಿಯಾಗಿದ್ದು, ಡಾಂಬರೀಕರಣ ಆಗದೇ ಇರುವುದರಿಂದ ಖಾನಾಪೂರದ ಸೌಂದರ್ಯವು ಕೂಡ ಹಾಳಾಗಿರುತ್ತದೆ.
ಹೀಗಾಗಿ ಸಂಸದರು ಮತ್ತು ಜನಪ್ರತಿನಿಧಿಗಳ ಮೇಲಿನ ವಿಶ್ವಾಸವನ್ನು ತಾಲೂಕಿನ ಜನರು ಕಳೆದುಕೊಂಡಿರುತ್ತಾರೆ. ಇದರಿಂದ ರಾಜಕಾರಣಕ್ಕೂ ಸಹ ಕಳಂಕ ಬಂದಿರುತ್ತದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ.ಆದ್ದರಿಂದ ಈಗೀನ ಸಂಸದರು ದಯವಿಟ್ಟು ಈ ವಿಷಯದ ಕುರಿತು ಗಮನಹರಿಸಿ ಬೆಳಗಾವಿ ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಬರುವ ಖಾನಾಪೂರ -ಲಿಂಗನಮಠ ಮುಖ್ಯ ರಸ್ತೆಯನ್ನು ಆದಷ್ಟು ಬೇಗ ಡಾಂಬರೀಕರಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು
ಮತ್ತು ತಾಲೂಕಿನಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳಗಳಿರುವದರಿಂದ ಅವುಗಳನ್ನು ಉನ್ನತಿಕರಿಸಿ ಸಾರ್ವಜನಿಕರ ಮಾಹಿತಿಗಾಗಿ ಹೆದ್ದಾರಿಗಳಲ್ಲಿ ಸೂಚನಾ ಫಲಕಗಳನ್ನು ಹಾಕಿಸಬೇಕೆಂದು ನೂತನ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಖಾನಾಪೂರದಲ್ಲಿ ಸಾಮಾಜಿಕ ಕಾರ್ಯಕರ್ತ ಜ್ಯೋತಿಬಾ ಬೆಂಡಿಗೇರಿ ಅವರು ಮನವಿ ಸಲ್ಲಿಸಿದರು.