BREAKING: ‘ಕರ್ನಾಟಕ ಕಾಂಗ್ರೆಸ್’ನಿಂದ ‘ಲೋಕಸಭಾ ಚುನಾವಣೆ’ಗೆ ಭರ್ಜರಿ ಸಿದ್ಧತೆ: ಹೀಗಿದೆ ಲೋಕಸಭಾ ಚುನಾವಣೆಗಾಗಿ ನೇಮಕ ಮಾಡಲಾಗಿರುವಂತ ಜಿಲ್ಲಾ ಸಂಯೋಜಕರ ಪಟ್ಟಿ
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ( KPCC)ಯಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಚುನಾವಣಾ ಮುಂಚಿತವಾಗಿ 28 ಜಿಲ್ಲೆಗಳಿಗೆ ಜಿಲ್ಲಾ ಸಂಯೋಜಕರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಈ ಕುರಿತಂತೆ ಇಂದು ಆದೇಶಿಸಿರುವಂತ ಅವರು, ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಗೆ ಸಂಸತ್ ಕ್ಷೇತ್ರವಾರು ಸಂಯೋಜಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅನುಮೋದನೆ ನೀಡಿದೆ ಎಂದಿದ್ದಾರೆ.
ಗೌರವಾನ್ವಿತ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಇದನ್ನು ಈ ಕೆಳಗಿನಂತೆ ಮಾರ್ಪಡಿಸಲಾಗಿದೆ. ಈ ಕೆಳಗಿನ ಬದಲಾವಣೆಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಜವಾಬ್ದಾರಿಗಳನ್ನು ತೆಗೆದುಕೊಳ್ಳುವಂತೆ ನಾನು ಎಲ್ಲಾ ಮಂತ್ರಿಗಳನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಹೀಗಿದೆ ಲೋಕಸಭಾ ಚುನಾವಣೆಗಾಗಿ ನೇಮಕ ಮಾಡಲಾಗಿರುವಂತ ಜಿಲ್ಲಾ ಸಂಯೋಜಕರ ಪಟ್ಟಿ
- ಬಾಗಲಕೋಟೆ-ಆರ್.ಬಿ ತಿಮ್ಮಾಪುರ್
- ಬೆಂಗಳೂರು ಕೇಂದ್ರ – ಜಮೀನ್ ಅಹ್ಮದ್ ಖಾನ್
- ಬೆಂಗಳೂರು ಉತ್ತರ – ಕೃಷ್ಣಬೈರೇಗೌಡ
- ಬೆಂಗಳೂರು ಗ್ರಾಮಾಂತರ – ಡಾ.ಎಂ.ಸಿ ಸುಧಾಕರ್
- ಬೆಂಗಳೂರು ದಕ್ಷಿಣ – ರಾಮಲಿಂಗಾರೆಡ್ಡಿ
- ಬೆಳಗಾವಿ- ಸತೀಶ್ ಜಾರಕಿಹೊಳಿ
- ಬಳ್ಳಾರಿ-ಬಿ.ನಾಗೇಂದ್ರ
- ಬೀದರ್-ಈಶ್ವರ್ ಖಂಡ್ರೆ
- ಬಿಜಾಪುರ – ಎಂ.ಬಿ ಪಾಟೀಲ್
- ಚಾಮರಾಜನಗರ – ಕೆ.ವೆಂಕಟೇಶ್
- ಚಿಕ್ಕಬಳ್ಳಾಪುರ-ಕೆ.ಹೆಚ್ ಮುನಿಯಪ್ಪ
- ಚಿಕ್ಕೋಡಿ- ಲಕ್ಷ್ಮೀ ಹೆಬ್ಬಾಳ್ಕರ್
- ಚಿತ್ರದುರ್ಗ – ಡಿ ಸುಧಾಕರ್
- ದಕ್ಷಿಣ ಕನ್ನಡ – ದಿನೇಶ್ ಗುಂಡೂರಾವ್
- ದಾವಣಗೆರೆ-ಎಸ್ ಎಸ್ ಮಲ್ಲಿಕಾರ್ಜುನ್
- ಧಾರವಾಡ- ಸಂತೋಷ್ ಲಾಡ್
- ಗುಲ್ಬರ್ಗಾ-ಪ್ರಿಯಾಂಕ್ ಖರ್ಗೆ
- ಹಾಸನ – ಕೆ.ಎನ್ ರಾಜಣ್ಣ
- ಹಾವೇರಿ – ಹೆಚ್ ಕೆ ಪಾಟೀಲ್
- ಕೋಲಾರ- ಬಿಎಸ್ ಸುರೇಶ್
- ಕೊಪ್ಪಳ – ಶಿವರಾಜ್ ತಂಡರಗಿ
- ಮಂಡ್ಯ – ಚೆಲುವರಾಯಸ್ವಾಮಿ
- ಮೈಸೂರು ಡಾ.ಹೆಚ್ ಸಿ ಮಹದೇವಪ್ಪ
- ರಾಯಚೂರು- ಎನ್ ಎಸ್ ಬೊಸರಾಜು
- ಶಿವಮೊಗ್ಗ – ಮಧು ಬಂಗಾರಪ್ಪ
- ತುಮಕೂರು – ಡಾ.ಜಿ ಪರಮೇಶ್ವರ್
- ಉಡುಪಿ-ಚಿಕ್ಕಮಗಳೂರು – ಕೆ.ಜೆ ಜಾರ್ಜ್
- ಉತ್ತರ ಕನ್ನಡ – ಮಂಕಾಳೆ ವೈದ್ಯ
Follow Us