ತಂದೆ-ಮಗನ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ ಅಪ್ಪನನ್ನೇ ಹೊಡೆದು ಸಾಯಿಸಿದ ಪಾಪಿ ಮಗ

WhatsApp Group Join Now
Telegram Group Join Now

ಹಾಸನ: ತಂದೆ-ಮಗನ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾಸನ ತಾಲ್ಲೂಕಿನ, ಪೂಮಗಾಮೆ ಗ್ರಾಮದಲ್ಲಿ ನಡೆದಿದೆ.

ರವಿ (45) ಕೊಲೆಯಾದವ ವ್ಯಕ್ತಿ.  ಮಗ ಸಂದೀಪ (24) ತನ್ನ ತಂದೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಅಪ್ಪ-ಮಗ ಕುಡಿತದ ದಾಸರಾಗಿದ್ದು, ರವಿ-ಸಂದೀಪ ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದಿದ್ದರು. ಕುಡಿದ ಮತ್ತಿನಲ್ಲಿ ತಂದೆ ಮಗನ ನಡುವೆ ಜಗಳ ಶುರುವಾಗಿದೆ. ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಸಂದೀಪ ಅಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆ ವೇಳೆ ರವಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾನೆ. ಇಂದು ಬೆಳಗ್ಗೆ ನೋಡಿದಾಗ ರವಿ ಸಾವನ್ನಪ್ಪಿದ್ದನು. ತಂದೆ ಸಾವಿನ ನಂತರ ಮಗ ಸಂದೀಪ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now
Telegram Group Join Now
Back to top button