15 ಸಾವಿರ ಲಂಚ ಪಡೆಯುವಾಗ ಹುಣಶ್ಯಾಳ ಪಿಬಿ ಗ್ರಾಮ ಪಂಚಾಯತಿ PDO ಲೋಕಾಯುಕ್ತ ಲಾಕ್
15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪಿಡಿಓ ಲಾಕ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮ ಪಂಚಾಯತಿಯ ಲ್ಲಿ ನಡೆದಿದೆ. ಪಿಡಿಓ ಸಂಗಮೇಶ ಕುಂಬಾರ ಲಾಕ್ ಆಗಿದ್ದು, 2 ಗುಂಟೆ ಖುಲ್ಲಾ ಜಾಗೆಯ ಉತಾರ ಮಾಡಲು 20 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಮಹಾದೇವಿ, ವಿಜಯಲಕ್ಷ್ಮಿ ಹೆಸರಿನಲ್ಲಿ ಉತಾರೆ ಮಾಡಬೇಕಿತ್ತು. ಅದಕ್ಕಾಗಿ 20 ಸಾವಿರ ಹಣದಲ್ಲಿ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Follow Us