ವಿದ್ಯಾ ಬಾಲನ್‌ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌ ಖಾತೆ ಸೃಷ್ಟಿ: FIR ದಾಖಲಿಸಿದ ನಟಿ

WhatsApp Group Join Now
Telegram Group Join Now

ಮುಂಬಯಿ: ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ತನ್ನ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ವ್ಯಕ್ತಿಯ ವಿರುದ್ಧ ಎಫ್‌ ಐಆರ್‌ ದಾಖಲಿಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬರು ನಟಿ ವಿದ್ಯಾ ಬಾಲನ್ ಅವರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌ ಖಾತೆಯನ್ನು ಸೃಷ್ಟಿಸಿದ್ದಾರೆ.

ನಟಿಯ ಹೆಸರಿನಲ್ಲಿ ಜಿಮೇಲ್‌ ಖಾತೆಯನ್ನು ತೆರೆದು ಉದ್ಯೋಗದ ಭರವಸೆಯೊಂದಿಗೆ ಬಾಲಿವುಡ್‌ನ ಜನರನ್ನು ಸಂಪರ್ಕಿಸಿ, ಹಣದ ಬೇಡಿಕೆಯನ್ನಟ್ಟಿದ್ದಾರೆ.

ಈ ವಿಚಾರ ನಟಿಗೆ ತಿಳಿದಿದ್ದು, ಪೊಲೀಸರಿಗೆ ವಿದ್ಯಾ ಬಾಲನ್‌ ಅವರು ದೂರು ನೀಡಿದ್ದಾರೆ. ಖಾರ್ ಪೊಲೀಸ್ ಠಾಣೆಯಲ್ಲಿ ಐಟಿ ಸೆಕ್ಷನ್ 66 (ಸಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ವಿದ್ಯಾ ಬಾಲನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸೃಷ್ಟಿಯಾಗಿರುವ ನಕಲಿ ಖಾತೆಯನ್ನು ಬ್ಲಾಕ್‌ ಹಾಗೂ ರಿಪೋರ್ಟ್‌ ಮಾಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

2023 ರಲ್ಲಿ ವಿದ್ಯಾ ಬಾಲನ್‌ ʼನೀಯತ್ʼ ನಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಅವರು ಇಲಿಯಾನಾ ಡಿಕ್ರೂಜ್, ಪ್ರತೀಕ್ ಗಾಂಧಿ ಮತ್ತು ಸೆಂಧಿಲ್ ರಾಮಮೂರ್ತಿ ನಟಿಸಿರುವ ʼದೋ ಔರ್ ದೋ ಪ್ಯಾರ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

WhatsApp Group Join Now
Telegram Group Join Now
Back to top button