ಬಿಜೆಪಿ ಸುಳ್ಳುಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತವೆ : ಸಚಿವ ಸಂತೋಷ್ ಲಾಡ್
ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು, ಅಭಿವೃದ್ಧಿಗಳನ್ನು ಜನರಿಗೆ ಮುಂದಿಟ್ಟು ಚುನಾವಣೆ ಎದುರಿಸ್ತೇವೆ. ಅದರೆ ಬಿಜೆಪಿ ಸುಳ್ಳುಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತವೆ ಎಂದು ಸಚಿವ ಸಂತೋಷ್ ಲಾಡ್ ಹರಿಹಾಯ್ದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ರಿಂದ ಡಾಲರ್ ಹಾಗೂ ರೂಪಾಯಿ ಮೌಲ್ಯದ ವ್ಯತ್ಯಾಸ ಹೆಚ್ಚಾಗಿದೆ? ಅದರ ಬಗ್ಗೆ ಬಿಜೆಪಿ ಅವರು ಉತ್ತರ ಕೊಡಲ್ಲ. ಸಂತೋಷ ಲಾಡ್ ರನ್ನು ಬೈಯೋಕೆ ಇಟ್ಕೊಂಡಿದ್ದಾರೆ ಅಂತಾರೆ. ರಾಹುಲ್ ಗಾಂಧಿಯಂತೆ ಮಾತಾಡ್ತಾರೆ ಅಂತ ಲೇವಡಿ ಮಾಡ್ತಾರೆ. ಬಲಿಷ್ಠ ಪ್ರಧಾನಮಂತ್ರಿ, ಸರ್ಕಾರ ಅಂತಾರೆ, 9 ವರ್ಷದಲ್ಲಿ ಡಾಲರ್ ಮೌಲ್ಯ 30 ರೂಪಾಯಿ ಹೆಚ್ಚಾಗಲು ಕಾರಣ ಏನು? ನೋಟ್ ಬ್ಯಾನ್ ಮಾಡಿದ್ರು, ಮತ್ತೆ ಪ್ರಿಂಟ್ ಮಾಡಲು 25 ಸಾವಿರ ಕೋಟಿ ಖರ್ಚ ಆಯ್ತು ಮೇಕ್ ಇನ್ ಇಂಡಿಯಾ ಎಲ್ಲಿದೆ? ಏನೇನು ಮಾಡಿದ್ದಾರೆ
ಶ್ರೀಮಂತರಿಗೆ ಲಾಭ ಆಗಿದೆ ಹೊರತು ಬಡವರಿಗೆ ಏನು ಲಾಭ ಆಗಿಲ್ಲ ಎಂದು ಕಿಡಿಕಾರಿದರು. ಮುಂದುವರೆದು ಬಿಜೆಪಿಯ ಯೋಜನೆಗಳು ಏನಾಗಿವೆ? ನೀವು ಸ್ವಂತ ಟ್ರಸ್ಟ್ ಮಾಡ್ಕೊಂಡು 35 ಸಾವಿರ ಕೋಟಿ ತಗೊಂಡ್ರಿ. ನಿಮ್ಮ ಹೆಸರ ಮೇಲೆ ಸ್ಟೇಡಿಯಂ ಕಟ್ಟಿದ್ರಿ ಹೊರತು ಆಸ್ಪತ್ರೆ ಕಟ್ಟಿದ್ದೀರಾ? ದೇಶದಲ್ಲಿ 12 ಸಾವಿರಕ್ಕಿಂತ ಹೆಚ್ಚು ಟ್ರೈನ್ ಗಳಿವೆ, 75 ಒಂದೇ ಭಾರತ್ ಮಾಡಿ ಎಷ್ಟು ಪ್ರಚಾರ ತಗೋತ್ತಾರೆ ಎಂದರು.
ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ನ ಕಾಪಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಯಾಕೆ ಬಿಜೆಪಿಯವರು ಕಾಪಿ ಮಾಡಿದ್ರಿ ಅಂತ ಮೋದಿಯವರನ್ನ ಕೇಳ್ರಿ. ಅವರು ಇದಕ್ಕೆ ಉತ್ತರ ಕೊಡಲ್ಲ ಎಂದರು. ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟದ ಕುರಿತು ಪ್ರತಿಕ್ರಿಯೆ ನೀಡಿ, ಈ ಹಿಂದೆ ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..? ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ ಗಳಾಗಿವೆ. ಆಗ ಬಿಜೆಪಿಗೆ ನೈತಿಕತೆ ಇರಲಿಲ್ಲವೆ? ಎಂದು ಪ್ರಶ್ನೆ ಮಾಡಿದರು.
ದೇಶದ್ರೋಹಿ ಚಟುವಟಿಕೆಗಳಿಗೆ ಯಾವುದೇ ಪಕ್ಷ ಬೆಂಬಲ ಕೊಡಲ್ಲ, ಚುನಾವಣೆ ಬಂದಿರೋದ್ರಿಂದ ಇದೀಗ ಪಾಕಿಸ್ತಾನ್, ಬ್ಲಾಸ್ಟ್ ಇತ್ಯಾದಿ ಬರ್ತಿವೆ. ಬಿಜೆಪಿಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಟೆರರಿಸ್ಟ್ ಈ ಪದ ಬಿಟ್ಟರೆ ಅಭಿವೃದ್ಧಿ ವಿಚಾರವೇ ಗೊತ್ತಿಲ್ಲ, ಇಂತಹ ವಿಚಾರಗಳ ಮೇಲೆಯೇ ಚುನಾವಣೆ ಹೋಗತ್ತಾರೆ ಎಂದು ಕಿಡಿಕಾರಿದರು.
ವಿಧಾನಸೌಧದಲ್ಲಿ ಪಾಕ್ ಪರ ಹೇಳಿಕೆ ಸಾಬೀತಾಗಿರೋದ್ರಿಂದ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕೆಂಬ ಆಗ್ರಹ ವಿಚಾರವಾಗಿ ಮಾತನಾಡಿ, ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದಾರೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕಾ..? ಎಂದು ಪ್ರಶ್ನೆ ಮಾಡಿದರು.
ನರೇಗಾ ಯೋಜನೆ ಕೂಲಿ ಹಣ ಬಿಡುಗಡೆಯಾಗದೇ ಇರೋದಕ್ಕೆ ಕಿಡಿಕಾರಿದ ಸಚಿವ ಸಂತೋಷ ಲಾಡ್, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಆದ್ರೆ ಕೂಲಿ ಮಾಡಿ ನಾಲ್ಕೈದು ತಿಂಗಳಾದ್ರೂ ಹಣ ಬಿಡುಗಡೆಯಾಗಿಲ್ಲ.ರಾಜ್ಯಕ್ಕೆ 1400 ಕೋಟಿ ರೂಪಾಯಿ ಬಾಕಿ ಹಣವಿದೆ. ಬರ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 50 ದಿನಕ್ಕೆ ಹೆಚ್ಚಿನ ಕೆಲಸ ಕೇಳಿದ್ದೇವೆ.ಆದರೆ ಇದುವರೆಗೂ ಕೇಂದ್ರ ಒಪ್ಪಿಗೆ ಸೂಚಿಸಿಲ್ಲ. ಬರಗಾಲದ ಪರಿಹಾರವಾಗಿ ನಾವು ಕೈಲಾದಷ್ಟು ಕೊಟ್ಟಿದ್ದೇವೆ. ಆದ್ರೆ ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್ ಟಾಪ್ ಖರೀದಿಯಲ್ಲಿ ಅವ್ಯವಹಾರ ಆರೋಪ ಕುರಿತು ಪ್ರತಿಕ್ರಿಯೆ ನೀಡಿ, ಯಾವುದೇ ರೀತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ತಿಳಿಸಿದರು.