25 IPS Transfer: ಕರ್ನಾಟಕದಲ್ಲಿ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಪಟ್ಟಿ ಮಾಹಿತಿ

WhatsApp Group Join Now
Telegram Group Join Now

ಬೆಂಗಳೂರು, ಜುಲೈ 03: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೆಗಾ ಸರ್ಜರಿ ನಡೆದಿದೆ. ರಾಜ್ಯ ಆಡಳಿತ ಸುಧಾರಣೆಗಾಗಿ, ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.

 

ಹೌದು, ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದ ಐಪಿಎಸ್ ಅಧಿಕಾರಿಗಳನ್ನು ಬೇರೆ ಬೇರೆ ಕಡೆಗಳಿಗೆ ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಇಲಾಖೆಯ ಆಂತರಿಕ ಮತ್ತು ಬಾಹ್ಯ ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ಈ ವರ್ಗಾವಣೆ ಮಾಡಲಾಗಿದೆ. ಒಂದು ವಾರದಲ್ಲಿ ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು ನೂತನ ಜವಾಬ್ದಾರಿಯನ್ನು ಸ್ವೀಕರಿಸಲಿದ್ದಾರೆ.

ಹಾಗಾದರೆ ವರ್ಗಾಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ, ಎಲ್ಲಿಗೆ ವರ್ಗಾವಣೆಗೊಂಡಿದ್ದಾರೆ ಎಂಬ ಪೂರ್ಣ ಮಾಹಿತಿ, ಪಟ್ಟಿ ಇಲ್ಲಿದೆ.

25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ

* ಎನ್ ಶಶಿಕುಮಾರ್- ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆಗಿ ನೇಮಕ

* ಬಿ.ಆರ್ ರವಿಕಾಂತೇಗೌಡ : ಐಜಿಪಿ ಹೆಡ್ ಕಾರ್ಟರ್ -1 ಬೆಂಗಳೂರು (ಡಿಜಿ ಕಛೇರಿ)

* ಡಾ.ಕೆ ತ್ಯಾಗರಾಜನ್ – ಐಜಿಪಿ, ಐಎಸ್ ಡಿ.

* ಲಾಭೂರಾಮ್- ಐಜಿಪಿ ಕೇಂದ್ರ ವಲಯ.

* ಸಿಕೆ ಬಾಬಾ – ಎಸ್‌ಪಿ ಬೆಂಗಳೂರು ಗ್ರಾಮಾಂತರ.

* ಎನ್ ವಿಷ್ಣುವರ್ಧನ್- ಎಸ್‌ಪಿ ಮೈಸೂರು ಜಿಲ್ಲೆ.

* ಸುಮನ್ ಡಿ ಪೆನ್ನೆಕರ್ – ಎಸ್‌ಪಿ, ಬಿಎಂಟಿಎಫ್.

* ಬಿ.ರಮೇಶ್ – ಡಿಐಜಿಪಿ ಈಸ್ಟರ್ನ್ ರೇಂಜ್ ದಾವಣಗೆರೆ .

* ಸೀಮಾ ಲಾಟ್ಕರ್ – ಪೊಲೀಸ್ ಆಯುಕ್ತರು ಮೈಸೂರು ನಗರ

* ರೇಣುಕಾ ಸುಕುಮಾರ್ – ಎಐಜಿಪಿ ( ಡಿಜಿ ಕಛೇರಿ)

* ಸಾರ ಫಾತಿಮಾ – ಡಿಸಿಪಿ ಆಗ್ನೇಯ ವಿಭಾಗ, ಬೆಂಗಳೂರು ನಗರ

* ಅರುಣಾಂಗ್ಷು ಗಿರಿ – ಎಸ್‌ಪಿ ,ಸಿಐಡಿ

* ನಾಗೇಶ್ ಡಿ ಎಲ್- ಡಿಸಿಪಿ , ಸಿ ಎ ಆರ್ ಹೆಡ್ ಕ್ವಾರ್ಟರ್ಸ್. ಬೆಂಗಳೂರು ನಗರ .

* ಪದ್ಮಿನಿ ಸಾಹೋ – ಡಿಸಿಪಿ ಆಡಳಿತ, ಬೆಂಗಳೂರು ನಗರ.

* ನಿಖಿಲ್ ಬಿ – ಎಸ್ ಪಿ, ಕೋಲಾರ ಜಿಲ್ಲೆ.

* ಕುಶಾಲ್ ಚೌಕ್ಸಿ – ಎಸ್ ಪಿ ಚಿಕ್ಕಬಳ್ಳಾಪುರ ಜಿಲ್ಲೆ.

* ಮಹಾನಿಂಗ್ ನಂದಗಾವಿ- ಡಿಸಿಪಿ (ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ ಧಾರವಾಡ

* ಪ್ರದೀಪ್ ಗುಂಟಿ – ಎಸ್ ಪಿ ಬೀದರ್ ಜಿಲ್ಲೆ.

* ಸಿ.ಬಿ ರಿಷ್ಯಂತ್- ಎಸ್ ಪಿ ವೇರ್ ಲೆಸ್ .

* ಚನ್ನಬಸವಣ್ಣ- ಎಐಜಿಪಿ, (ಆಡಳಿತ ) ಡಿಜಿ ಕಛೇರಿ.

* ನಾರಾಯಣ್ ಎಂ- ಎಸ್ ಪಿ, ಉತ್ತರ ಕನ್ನಡ.

* ಯತೀಶ್ ಎನ್ – ಎಸ್ ಪಿ, ದಕ್ಷಿಣ ಕನ್ನಡ ಜಿಲ್ಲೆ.

* ಮಲ್ಲಿಕಾರ್ಜುನ ಬಾಲದಂಡಿ – ಎಸ್ ಪಿ ಮಂಡ್ಯ ಜಿಲ್ಲೆ.

* ಡಾ ಶೋಭಾ ರಾಣಿ ವಿ.ಜೆ- ಎಸ್ ಪಿ, ಬಳ್ಳಾರಿ ಜಿಲ್ಲೆ.

* ಡಾ ಕವಿತಾ ಟಿ: ಎಸ್ ಪಿ, ಚಾಮರಾಜನಗರ ಜಿಲ್ಲೆ.

ಈ ಮೇಲಿನ ಅಧಿಕಾರಿಗಳನ್ನು ಹಾಲಿ ಸ್ಥಾನದಿಂದ ಇಲ್ಲಿ ತಿಳಿಸಲಾದ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೆಲವೇ ತಿಂಗಳಲ್ಲಿ ಅತ್ಯಾಚಾರ, ಕೊಲೆ, ದರೋಡೆ, ಕಳ್ಳತನ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳು ದಾಖಲಾಗಿದ್ದರ ಬಗ್ಗೆ ಇತ್ತೀಚೆಗೆ ವರದಿ ಆಗಿತ್ತು. ಅತೀ ಕಡಿಮೆ ಅವಧಿಯಲ್ಲಿ ಕೊಲೆ ಘಟನೆಗಳು ಏರಿಕೆ ಆಗಿದೆ ಎಂದೆಲ್ಲ ದೂರಲಾಗಿತ್ತು. ಇದರ ಬೆನ್ನಲ್ಲೆ ಕಾನೂನು ಸುವ್ಯವಸ್ಥೆ ಸುಧಾರಣೆಗೆ ಸರ್ಕಾರ ಈ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶಿಸಿದೆ.

WhatsApp Group Join Now
Telegram Group Join Now
Back to top button