ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಉಚಿತ ‘ಸ್ಮಾರ್ಟ್ ಫೋನ್’ ಭಾಗ್ಯ

WhatsApp Group Join Now
Telegram Group Join Now

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯ ಸರ್ಕಾರ 75,938 ಮೊಬೈಲ್ ಫೋನ್ ಖರೀದಿಗೆ ಒಪ್ಪಿಗೆ ನೀಡಿದೆ.

ಹೌದು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರೈಸಲು  89.61 ಕೋಟಿ ವೆಚ್ಚದಲ್ಲಿ ಒಟ್ಟು 75,938 ಮೊಬೈಲ್ ಫೋನ್ಗಳ ಖರೀದಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ತಲಾ 11,800 ಮೌಲ್ಯದ ಮೊಬೈಲ್ ಅನ್ನು ಟೆಂಡರ್ ಮೂಲಕ ಖರೀದಿಸಲಾಗುತ್ತದೆ. ಪೋಷಣ್ ಅಭಿಯಾನದಡಿ ಮಾಹಿತಿ ಸಂಗ್ರಹ, ದಾಖಲೀಕರಣ ಮತ್ತು ಸಂವಹನಕ್ಕೆ ಇದು ನೆರವಾಗಲಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

WhatsApp Group Join Now
Telegram Group Join Now
Back to top button