Karnataka Dam Water Level: ರಾಜ್ಯದಲ್ಲಿ ಅಬ್ಬರದ ಮಳೆ; ತುಂಗಭದ್ರಾ ಸೇರಿದಂತೆ ಬಹುತೇಕ ಡ್ಯಾಂಗಳ ನೀರಿನ ಮಟ್ಟ ಹೆಚ್ಚಳ
ಬೆಂಗಳೂರು, ಜುಲೈ 06: ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಭರ್ಜರಿ ಮಳೆಯಿಂದಾಗಿ ಕೆರೆ, ಕುಂಟೆ, ಹಳ್ಳ-ಕುಳ್ಳ ಮತ್ತು ನದಿಗಳಲ್ಲಿ ಹರಿವು ಹೆಚ್ಚಾಗಿದೆ. ಇನ್ನೂ ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ತುಂಗಭದ್ರಾ ನದಿಗೆ ಹೆಚ್ಚು ನೀರು ಬರುತ್ತಿರುವುದರಿಂದ ಬಳ್ಳಾರಿ ಜಿಲ್ಲೆಯ ಹೊಡಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳವಾಗಿದೆ. ಮೂರೇ ದಿನಗಳ ಅಂತರದಲ್ಲಿ ಜಲಾಶಯಕ್ಕೆ 4 ಟಿಎಂಸಿ ನೀರು ಹರಿದು ಬಂದಿದೆ. ತುಂಗಭದ್ರಾ ಜಲಾಶಯದಲ್ಲಿ ಇಂದು (ಜು.06) 11.71 ಟಿಎಂಸಿ ನೀರು ಇದೆ. ಕಳೆದ 24 ಗಂಟೆಯಲ್ಲಿ ಡ್ಯಾಂಗೆ 1.5 ಟಿಎಂಸಿ ನೀರು ಹರಿದು ಬಂದಿದೆ. ಜಲಾಶಯ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
ಇನ್ನೂ ಮಂಡ್ಯ ಜನರ ಜೀವನಾಡಿ ಕೆಆರ್ಎಸ್ ಡ್ಯಾಂನಲ್ಲಿ 100 ಅಡಿ ನೀರು ಸಂಗ್ರಹವಾಗಿದೆ. ಹಾಗಾದರೆ ಕೆಆರ್ಎಸ್ ಡ್ಯಾಂ, ಮಲಪ್ರಭಾ ಸೇರಿದಂತೆ ಕರ್ನಾಟಕ ಜುಲೈ 06 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ
ಕರ್ನಾಟಕದ ಪ್ರಮುಖ ಜಲಾಶಯಗಳು | ಗರಿಷ್ಠ ನೀರಿನ ಮಟ್ಟ(ಮೀ) | ಇಂದಿನ ನೀರಿನ ಮಟ್ಟ(ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
ಕೆಆರ್ಎಸ್ ಜಲಾಶಯ | 38.04 | 23.05 | 9686 | 546 |
ಹಾರಂಗಿ ಜಲಾಶಯ | 871.38 | 5.00 | 5048 | 200 |
ಆಲಮಟ್ಟಿ ಜಲಾಶಯ | 519.60 | 48.98 | 53901 | 430 |
ತುಂಗಭದ್ರಾ ಜಲಾಶಯ | 497.71 | 11.71 | 19201 | 396 |
ಮಲಪ್ರಭಾ ಜಲಾಶಯ | 633.80 | 8.14 | 12173 | 194 |
ಲಿಂಗನಮಕ್ಕಿ ಜಲಾಶಯ | 554.44 | 31.46 | 44024 | 1341 |
ಕಬಿನಿ ಜಲಾಶಯ | 696.13 | 17.71 | 8321 | 2917 |
ಭದ್ರಾ ಜಲಾಶಯ | 657.73 | 20.35 | 16171 | 350 |
ಘಟಪ್ರಭಾ ಜಲಾಶಯ | 662.91 | 14.08 | 19992 | 108 |
ಹೇಮಾವತಿ ಜಲಾಶಯ | 890.58 | 16.53 | 8447 | 250 |
ಸೂಫಾ ಜಲಾಶಯ | 564.00 | 36.71 | 25678 | 1370 |