BREAKING : ಇಂಗ್ಲಿಷ್ ಫಲಕಗಳ ವಿರುದ್ಧ ಮುಂದುವರೆದ ʻಕರವೇʼ ಕಿಚ್ಚು : ರಾತ್ರೋರಾತ್ರಿ ಫ್ಲೆಕ್ಸ್ ಹರಿದು ಆಕ್ರೋಶ!

WhatsApp Group Join Now
Telegram Group Join Now

ಬೆಂಗಳೂರು : ಇಂಗ್ಲಿಷ್‌ ಫಲಕಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಕಿಚ್ಚು ಮುಂದುವರೆದಿದ್ದು, ಬೆಂಗಳೂರಿನಲ್ಲಿ ರಾತ್ರಿ ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಆರ್‌.ಆರ್‌ ನಗರದ ಗೋಪಾಲನ್‌ ಮಾಲ್‌ ನಲ್ಲಿ ಕರವೇ ಕಾರ್ಯಕರ್ತರು ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿದ್ದಾರೆ.

ನಾರಾಯಣಗೌಡ್ರು ಅರೆಸ್ಟ್‌ ಆದ್ರೆ ಏನು? ನಾವು ಕಾರ್ಯಕರ್ತರು ಹೊರಗೆ ಇದ್ದೇವೆ ಎಂದು ಹೇಳಿ ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿದ್ದಾರೆ.

ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಭಾರೀ ಪ್ರತಿಭಟನೆ ಹಮ್ಮಿಕೊಂಡಿತ್ತು. ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಸಂಬಂಧ 10 ಎಫ್​ಐಆರ್​ ದಾಖಲು ಮಾಡಲಾಗಿದ್ದು, ಅಧ್ಯಕ್ಷ ನಾರಾಯಣಗೌಡ ಸೇರಿ 53 ಜನರನ್ನ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

WhatsApp Group Join Now
Telegram Group Join Now
Back to top button