ಅಂತರಾಜ್ಯ ಮನೆ ಕಳ್ಳತನ ಆರೋಪಿ ಬಂಧನ

WhatsApp Group Join Now
Telegram Group Join Now

ಬೆಳಗಾವಿ: ಹಗಲು ಮನೆ ಕಳ್ಳತನ ಮಾಡುತ್ತಿದ್ದ ಖತರ್ ನಾಕ್ ಕಳ್ಳನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಸುಮಾರು 12 ಮನೆ ಕಳ್ಳತನ ಮಾಡಿದ ಆರೋಪ ಈತನ ಮೇಲಿದ್ದು, 43 ಲಕ್ಷ ರೂ. ಮೌಲ್ಯದ 673 ಗ್ರಾಂ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ.

ಖಾನಾಪೂರ ತಾಲೂಕಿನ ಗ್ರಾಮೀಣ ಭಾಗದಲ್ಲಿ 2021 ರಿಂದ ಇಲ್ಲಿಯವರೆಗೆ ಹಗಲು ಮನೆ ಕಳ್ಳತನ ಪ್ರಕರಣಗಳು ನಿರಂತರವಾಗಿ ದಾಖಲಾಗುತ್ತಿದ್ದು, ಈ ಪ್ರಕರಣಗಳ ಆರೋಪಿ ಮತ್ತು ಕಳವು ಮಾಲು ಪತ್ತೆ ಕುರಿತು ಡಾ. ಭೀಮಾಶಂಕರ ಎಸ್. ಗುಳೇದ ಜಿಲ್ಲಾ ಪೊಲೀಸ್ ಅಧೀಕ್ಷಕರು, ಬೆಳಗಾವಿ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಎಂ.ವೇಣುಗೋಪಾಲ ಹಾಗೂ ಆರ್.ಬಿ.ಬಸರಗಿ ಮತ್ತು ರವಿ ಡಿ.ನಾಯ್ಕ ಪೋಲೀಸ್ ಉಪಾಧೀಕ್ಷಕರು ಬೈಲಹೊಂಗಲರವರ ಮಾರ್ಗದರ್ಶನದಲ್ಲಿ ಪ್ರಕರಣಗಳ ಪತ್ತೆ ಕರ್ತವ್ಯಕ್ಕೆ ಖಾನಾಪೂರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಮಂಜುನಾಥ ನಾಯಕ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತಂಡವು ವೈಜ್ಞಾನಿಕ ತನಿಖಾ ಸಾಧನಗಳನ್ನು ಬಳಿಸಿಕೊಂಡು ಈ ಕೆಳಕಂಡ ಆರೋಪಿತನಿಗೆ ದಸ್ತಗೀರ ಮಾಡಿದೆ.

 

1) ಪರಶುರಾಮ ನಾನಾ ಗೌಂಡಾಡಕರ ವಯಾ: 35 ವರ್ಷ ಸಾ।। ಕಲ್ಲೇಹೋಳ ತಾ॥ಜಿ॥ ಬೆಳಗಾವಿ – ಈತನನ್ನು ಕೂಲಂಕಷವಾಗಿ ತನಿಖೆ ಒಳಪಡಿಸಿ ಈ ಪ್ರಕರಣದಲ್ಲಿ ದಸ್ತಗೀರ ಮಾಡಿ ಆತನಿಂದ ಬೆಳಗಾವಿ ಜಿಲ್ಲೆಯ ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟಿಸಿದ ಸುಮಾರು 12 ಹಗಲು ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಆತನಿಂದ ಒಟ್ಟು 673.4 ಗ್ರಾಂ. ಬಂಗಾರದ ಆಭರಣಗಳು ಹಾಗೂ ಒಟ್ಟು 627 ಗ್ರಾಂ. ಬೆಳ್ಳಿಯ ಆಭರಣಗಳು ಮೌಲ್ಯ=43,23.115/- ರೂಪಾಯಿಗಳನ್ನು ವಶಪಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು ತನಿಖೆ ಮುದುವರೆದಿದೆ.

 

ಮಂಜುನಾಥ ನಾಯಕ ಪಿ.ಐ ಖಾನಾಪೂರವರ ನೇತೃತ್ವದಲ್ಲಿ ಅಪರಾಧ ವಿಭಾಗ ಪಿಎಸ್‌ಐ ಚನ್ನಬಸವ ಬಬಲಿ, ಎಎಸ್‌ಐ ಎನ್.ಕೆ.ಪಾಟೀಲ, ಸಿಎಚ್‌ ಬಿ.ಜಿ.ಯಲಿಗಾರ, ಸಿಎಚ್‌ಸಿ ಜಗದೀಶ ಕಾದ್ರೋಳ್ಳಿ, ಸಿಎಚ್‌ಸಿ ಜಯರಾಮ ಹಮ್ಮನವರ, ಸಿಪಿಸಿ ಮಂಜುನಾಥ ಮುಸಳಿ, ಸಿಪಿಸಿ ಪ್ರವೀಣ ಹೊಂಡದ, ಸಿಪಿಸಿ ಪುಂಡಲೀಕ ಮಾದರ ಹಾಗೂ ಬೆಳಗಾವಿ ಟೇಕ್ನಿಕಲ್ ವಿಭಾಗದ ಸಿಪಿಸಿ ವಿನೋದ ಟಕ್ಕನ್ನವರ, ಮತ್ತು ಸಿಪಿಸಿ ಸಚೀನ್ ಪಾಟೀಲ ಹಾಗೂ ಬೆರಳು ಮುದ್ರೆ ವಿಭಾಗದ ಎಚ್‌ಸಿ ಎಮ್.ಎಪ್.ಪಾಟೀಲ ಇವರೆಲ್ಲರೂ ಆರೋಪಿತನ ಪತ್ತೆ ಕಾರ್ಯಾಚರಣೆಯಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

WhatsApp Group Join Now
Telegram Group Join Now
Back to top button