ಬೆಳಗಾವಿ ಮಹಾನಗರ ಪಾಲಿಕೆಗೆ ಮತ್ತೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಶೋಕ ದುಡಗುಂಟಿ

WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಮತ್ತೆ ಯುವ ಹಾಗೂ ದಕ್ಷ ಅಧಿಕಾರಿ ಅಶೋಕ ದುಡಗುಂಟಿ ಸಾರಥ್ಯ ವಹಿಸಿಕೊಂಡಿದ್ದಾರೆ.

ಅಶೋಕ ದುಡಗುಂಟಿ  ಅವರನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತವರು ಜಿಲ್ಲೆಯಾದ ಕಾರಣ ಬೆಳಗಾವಿಯಿಂದ ಅವರು ರಾಯಚೂರು ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆಗೊಂಡಿದ್ದರು. ಇದೀಗ ಲೋಕಸಭಾ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತೆ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ಪ್ರತಿಷ್ಠಿತ ಹುದ್ದೆಗೆ ನೇಮಕ ಮಾಡಿದೆ.

 

ಅಶೋಕ ದುಡಗುಂಟಿ ಅವರು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾಗ ಪಾಲಿಕೆ ಆಡಳಿತಕ್ಕೆ ಹೊಸ ಚೈತನ್ಯ ನೀಡಿದ್ದರು. ಮಾತ್ರವಲ್ಲ, ಜಿಡ್ಡು ಹಿಡಿದ ಆಡಳಿತಕ್ಕೆ ಹೊಸ ಸ್ಪರ್ಶ ನೀಡಿದ್ದರು. ನಸುಕಿನಲ್ಲೇ ಎದ್ದು ಮಹಾನಗರ ಪಾಲಿಕೆಯ ಸ್ವಚ್ಛತೆ ಕೆಲಸಗಳ ಮೇಲೆ ಹದ್ದಿನ ಕಣ್ಣಿಟ್ಟು ಗಮನ ಸೆಳೆದಿದ್ದರು. ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮುತ್ತಿರುವ ಬೆಳಗಾವಿ ಮಹಾನಗರಕ್ಕೆ ಇದೀಗ ಯುವ ಹಾಗೂ ದಕ್ಷ ಅಧಿಕಾರಿ ಮತ್ತೆ ಆಯುಕ್ತರಾಗಿ ಆಗಮಿಸಿರುವುದು ಬೆಳಗಾವಿ ಜನತೆಯಲ್ಲಿ ಹೊಸ ಆಶಾಭಾವ ಮೂಡಲು ಕಾರಣವಾಗಿದೆ

WhatsApp Group Join Now
Telegram Group Join Now
Back to top button