ಸಿಎಂ ಇಬ್ರಾಹಿಂಗೆ ಬಿಗ್ ಶಾಕ್ : ʻJDSʼ ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಸದಂತೆ ಕೋರ್ಟ್ ಆದೇಶ

WhatsApp Group Join Now
Telegram Group Join Now

ಬೆಂಗಳೂರು : ಸಿಎಂ ಇಬ್ರಾಹಿಂಗೆ ಜೆಡಿಎಸ್‌ ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಸುವಂತಿಲ್ಲ ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಗೆ ವಿರೋಧಿಸಿ ಸ್ವಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಸಿಎಂ ಇಬ್ರಾಹಿಂರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.

ಆದರೆ ಇಬ್ರಾಹಿಂ ಅವರು ಪಕ್ಷದ ಚಿಹ್ನೆ ಹಾಗೂ ಲೆಟರ್‌ ಹೆಡ್‌ ಬಳಸುತ್ತಿದ್ದರು. ಇದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿರುವ ಕೋರ್ಟ್‌ ಸಿಎಂ ಇಬ್ರಾಹಿಂ ಅವರು ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಕೆ ಮಾಡುವಂತಿಲ್ಲ. ಜೆಡಿಎಸ್‌ ಹೆಸರಲ್ಲಿ ಸುದ್ದಿಗೋಷ್ಠಿ ನಡೆಸುವಂತಿಲ್ಲ. ಪದಾಧಿಕಾರಿಗಳನ್ನು ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್‌ ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now
Back to top button