ಎಂಕೆ ಹುಬ್ಬಳ್ಳಿ ಧ್ವಜ ತೆರವು: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದೇ ಗಲಾಟೆಗೆ ಕಾರಣ ಎಂದ ಬೆಳಗಾವಿ ಎಸ್​ಪಿ

WhatsApp Group Join Now
Telegram Group Join Now

ಬೆಳಗಾವಿ, : ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಕ್ಕೆ ಅವಕಾಶ ಇಲ್ಲ ಎಂದುಬೆಳಗಾವಿ (Belagavi)ಎಸ್​ಪಿ ಭೀಮಾಶಂಕರ ಗುಳೇದ್ ಹೇಳಿದ್ದಾರೆ. ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದ ಸಂಬಂಧ ಮಾತನಾಡಿದ ಅವರು, ಸರ್ಕಾರ, ಅಧಿಕಾರಿಗಳ ತೀರ್ಮಾನದಂತೆ ನಾವು ನಡೆಯುತ್ತೇವೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದೇ ಗಲಾಟೆಗೆ ಕಾರಣವಾಗಿರುವ ಹಿನ್ನೆಲೆ ಸಾಮಾಜಿಕ ಜಾಲತಾಣ ಮೇಲೆ ನಿಗಾ ಇಟ್ಟಿದ್ದೇವೆ. ಯಾರೇ ತಪ್ಪು ಮಾಡಿದರೂ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಗ್ರಾಮದಲ್ಲಿ ಎಲ್ಲರೂ ಒಂದೇ. ಹೊರಗಿನ ಜನರ ಬರೋದು ಬೇಡ ಅಂತಾ ಗ್ರಾಮಸ್ಥರು ಹೇಳಿದ್ದಾಗಿ ತಿಳಿಸಿದರು.

ಗ್ರಾಮಸ್ಥರ ಮಾತಿಗೆ ಬೆಲೆ ಕೊಡುತ್ತೇವೆ. ಧ್ವಜದ ಕಟ್ಟೆ ಸಾರ್ವಜನಿಕ ಸ್ಥಳದಲ್ಲಿ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಕ್ಕೆ ಅವಕಾಶ ಇಲ್ಲ, ಸುಪ್ರೀಂ ಕೋರ್ಟ್ ಆದೇಶ ಇದೆ. ಅಧಿಕಾರಿಗಳ ತೀರ್ಮಾನ, ಸರ್ಕಾರದ ತಿರ್ಮಾನದಂತೆ ನಾವು ನಡೆಯುತ್ತೆವೆ. ಅನುಮತಿ‌ ಕೇಳಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ ಎಂದರು.

WhatsApp Group Join Now
Telegram Group Join Now
Back to top button