ಶಿವಮೊಗ್ಗದಲ್ಲಿ 12 ಅಡಿ ಉದ್ದದ ಬೃಹತ್​​ ಕಾಳಿಂಗ ಸರ್ಪ ಪತ್ತೆ

WhatsApp Group Join Now
Telegram Group Join Now
ಿವಮೊಗ್ಗ(Shivamogga) ತಾಲ್ಲೂಕಿನ ಸಿರಿಗೆರೆ ಗ್ರಾಮದಲ್ಲಿ ಬೃಹತ್​​ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಚಂದ್ರಶೇಖರಪ್ಪ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಅಡಗಿದ್ದ 12 ಅಡಿ ಉದ್ದ ಹಾಗೂ 7.5 Kg ತೂಕವಿದ್ದ ಗಂಡು ಕಾಳಿಂಗ ಸರ್ಪ(king cobra) ಇದಾಗಿದ್ದು, ಅದನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಮ್ಮುಖದಲ್ಲಿಯೇ ಸಮೀಪದ ಕಾಡಿಗೆ ಹೋಗಿ ಬಿಡಲಾಗಿದೆ.

 

ಶಿವಮೊಗ್ಗ,ಫೆ.27: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮದಲ್ಲಿ ಬೃಹತ್​​ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಚಂದ್ರಶೇಖರಪ್ಪ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಅಡಗಿದ್ದ 12 ಅಡಿ ಉದ್ದ ಹಾಗೂ 7.5 Kg ತೂಕವಿದ್ದ ಗಂಡುಕಾಳಿಂಗ ಸರ್ಪ(king cobra) ಇದಾಗಿದ್ದು, ಮೊದಲ ಬಾರಿಗೆ ಇಷ್ಟೊಂದು ದೊಡ್ಡದಾದ ಹಾವನ್ನು ನೋಡಿ ಕಂಗಾಲಾಗಿದ್ದಾರೆ. ಇನ್ನು ಈ ಕುರಿತು ಉರಗ ಸಂರಕ್ಷಕ ಬೆಳ್ಳೂರು ನಾಗರಾಜ ಅವರಿಗೆ ಮಾಹಿತಿ ನೀಡಲಾಗಿ, ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಹಾವಿನ ರಕ್ಷಣೆಗೆ ಧಾವಿಸಿ ಬಂದಿದ್ದಾರೆ. ಬಳಿಕ ಹರಸಾಹಸ ಪಟ್ಟು ಹಿಡಿದಿದ್ದು, ಅರಣ್ಯ ಇಲಾಖೆ ಸಮ್ಮುಖದಲ್ಲಿಯೇ ಸಮೀಪದ ಕಾಡಿಗೆ ಹೋಗಿ ಬಿಡಲಾಗಿದೆ.

WhatsApp Group Join Now
Telegram Group Join Now
Back to top button